ETV Bharat / state

ದಾವಣಗೆರೆ: ಮನಬಂದಂತೆ ಚಾಕು ಇರಿದು ವ್ಯಕ್ತಿ ಕೊಲೆ, ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ - Man Brutally Murdered - MAN BRUTALLY MURDERED

ಬಾರ್​ನಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದ ವ್ಯಕ್ತಿಗೆ ಮನಸೋ ಇಚ್ಛೆ ಚಾಕು ಇರಿದು ಹತ್ಯೆ ಮಾಡಿರುವ ಘಟನೆ ದಾವಣಗೆರೆಯ ಕೆಟಿಜೆ ನಗರದ ಬಾರ್​ವೊಂದರಲ್ಲಿ ನಡೆದಿದೆ.

ಮನಬಂದಂತೆ ಚಾಕು ಇರಿದು ವ್ಯಕ್ತಿ ಕೊಲೆ
ಮನಬಂದಂತೆ ಚಾಕು ಇರಿದು ವ್ಯಕ್ತಿ ಕೊಲೆ (ETV Bharat)
author img

By ETV Bharat Karnataka Team

Published : Sep 21, 2024, 8:24 PM IST

ದಾವಣಗೆರೆ: ಬಾರ್​ನಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದ ವ್ಯಕ್ತಿಗೆ ಮನಸೋ ಇಚ್ಛೆ ಚಾಕು ಇರಿದು ಹತ್ಯೆ ಮಾಡಿರುವ ಘಟನೆ ನಿಟ್ಟುವಳ್ಳಿ ರಸ್ತೆಯ ಕೆಟಿಜೆ ನಗರದ ಬಾರ್​ವೊಂದರಲ್ಲಿ ನಡೆದಿದೆ. ಕುಮಾರ್ ( 36) ಮೃತ ವ್ಯಕ್ತಿ. ಘಟನೆ ಸಂಬಂಧ ಆಂಬ್ಯುಲೆನ್ಸ್​ ಚಾಲಕನಾಗಿ ಕೆಲಸ ಮಾಡುತ್ತಿರುವ ನಿಟ್ಟುವಳಿ ಹೊಸ ಬಡಾವಣೆ ನಿವಾಸಿ ಗೌತಮ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಮೃತ ಕುಮಾರ್ ಸ್ನೇಹಿತರೊಂದಿಗೆ ಬಾರ್​ನಲ್ಲಿ ಕುಳಿತು ಮದ್ಯ ಸೇವಿಸುತ್ತಿದಾಗ ಏಕಾಏಕಿ ಬಂದ ಗೌತಮ್​ ಮನಸೋ ಇಚ್ಛೆ ಚಾಕು ಇರಿದ್ದಾನೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಚಾಕು ಇರಿತಕ್ಕೊಳಗಾದ ಕುಮಾರ್ ಮೃತಪಟ್ಟಿದ್ದಾರೆ. ಕೃತ್ಯದ ಸಂಪೂರ್ಣ ದೃಶ್ಯ ಬಾರ್​ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.‌

ಕೆಟಿಜೆ ನಗರ ಪೊಲೀಸರು ಆರೋಪಿ ಗೌತಮ್​ನನ್ನು ಬಂಧಿಸಿದ್ದಾರೆ. ಯಾವ ಕಾರಣಕ್ಕೆ ಕೊಲೆ ನಡೆಯಿತು ಎಂಬ ಅಂಶ ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.

ಇದನ್ನೂ ಓದಿ: ಬೆಂಗಳೂರು ಮಹಿಳೆ ಬರ್ಬರ ಹತ್ಯೆ ಪ್ರಕರಣ: ಭೀಕರ ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ? - Woman Dead Body In Fridge

ETV Bharat Logo

Copyright © 2024 Ushodaya Enterprises Pvt. Ltd., All Rights Reserved.