ETV Bharat / state

ಪೊಲೀಸ್ ಸೋಗಿನಲ್ಲಿ ಮಹಿಳಾ ಮಸಾಜ್ ಥೆರಪಿಸ್ಟ್​ಗೆ ಬೆದರಿಸಿ ಸುಲಿಗೆ; ಬೆಂಗಳೂರಲ್ಲಿ ಆರೋಪಿ ಬಂಧನ - Bengaluru Crime

ತಾನು ಪೊಲೀಸ್​ ಎಂದು ಥೆರಪಿಸ್ಟ್ ಯುವತಿಯನ್ನು ಹೆದರಿಸಿ ಹಣ ಪೀಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಬಂಧನ
ಆರೋಪಿ ಬಂಧನ (ETV Bharat)
author img

By ETV Bharat Karnataka Team

Published : Jul 22, 2024, 12:50 PM IST

ಬೆಂಗಳೂರು: ಪೊಲೀಸ್ ಸೋಗಿನಲ್ಲಿ ಮಹಿಳಾ ಮಸಾಜ್ ಥೆರಪಿಸ್ಟ್‌ವೊಬ್ಬರನ್ನು ಬೆದರಿಸಿ 1.5 ಲಕ್ಷ ರೂ. ಸುಲಿಗೆ ಮಾಡಿದ್ದ ಆರೋಪಿಯನ್ನ ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹೇಂದ್ರ ಕುಮಾರ್‌ ಅಲಿಯಾಸ್‌ ಕಾರ್ತಿಕ್‌ (33) ಬಂಧಿತ. ಈತ ಮಸಾಜ್‌ಗಾಗಿ ಆನ್‌ಲೈನ್‌ನಲ್ಲಿ‌ ಮಹಿಳಾ ಥೆರಪಿಸ್ವ್‌ಗಳನ್ನ ಬುಕ್ ಮಾಡಿ, ನಂತರ ಬೆದರಿಸಿ ಸುಲಿಗೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಆರೋಪಿಯು ಜುಲೈ 3ರಂದು ಸುರೇಶ್‌ ಎಂಬ ಹೆಸರಿನಲ್ಲಿ ಮಸಾಜ್ ಸ್ಲಾಟ್ ಬುಕ್ ಮಾಡಿದ್ದ. ಅಲ್ಲದೆ, ತಾನೊಬ್ಬ ನಟ ಎಂದು ನಮೂದಿಸಿ, ರಾಮಮೂರ್ತಿ ನಗರದ ಅಪಾರ್ಟ್‌ಮೆಂಟ್‌ವೊಂದರ ವಿಳಾಸ ನೀಡಿ 25 ವರ್ಷದ ಥೆರಪಿಸ್ಟ್‌ಳನ್ನು ಬುಕ್‌ ಮಾಡಿದ್ದ. ಆರೋಪಿಯ ಸಂಚು ತಿಳಿಯದ ಮಹಿಳಾ ಥೆರಪಿಸ್ಟ್‌ ರಾತ್ರಿ 10.30ರ ಸುಮಾರಿಗೆ ಆತನ ವಿಳಾಸಕ್ಕೆ ಬಂದಿದ್ದರು.

ಬಳಿಕ ಥೆರಪಿಸ್ಟ್‌ಳನ್ನ ತನ್ನ ಕಾರಿನಲ್ಲಿ ಕರೆದೊಯ್ದಿದ್ದ ಆರೋಪಿ, 1 ಕಿ.ಮೀ ಪ್ರಯಾಣಿಸಿದ ಬಳಿಕ, 'ತಾನೊಬ್ಬ ಪೊಲೀಸ್‌ ಅಧಿಕಾರಿ, ನೀವು ಅನೈತಿಕ ಚಟುವಟಿಕೆ ನಡೆಸುತ್ತಿದ್ದೀರಿ ಎಂದು ಸುಳ್ಳು ಪ್ರಕರಣ ದಾಖಲಿಸುತ್ತೇನೆ' ಎಂದು ಬೆದರಿಸಿದ್ದ. ಅಲ್ಲದೆ ಆಕೆಯ ಮೇಲೆ ಹಲ್ಲೆ ಮಾಡಿ 10 ಲಕ್ಷ ರೂ. ನೀಡುವಂತೆ ಬ್ಲ್ಯಾಕ್ ಮೇಲ್ ಮಾಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಗಾಬರಿಗೊಂಡಿದ್ದ ಯುವತಿ, ತನ್ನ ಸ್ನೇಹಿತನಿಗೆ ಕರೆ ಮಾಡಿ ಆತನ ಮೂಲಕ ಆರೋಪಿ ಹೇಳಿದ ನಂಬರ್‌ಗೆ 1 ಲಕ್ಷ ರೂ. ವರ್ಗಾಯಿಸಿದ್ದಳು. ಬಳಿಕ ಪುನಃ 50 ಸಾವಿರ ರೂ.ಗಳನ್ನು ಮತ್ತೊಂದು ನಂಬರ್‌ಗೆ ಹಣ ವರ್ಗಾಯಿಸಿಕೊಂಡಿದ್ದ ಆರೋಪಿ, ಆಕೆಯನ್ನ ಇಡೀ ರಾತ್ರಿ ಕಾರಿನಲ್ಲಿ ಹೆಬ್ಬಾಳ ಸೇರಿದಂತೆ ವಿವಿಧೆಡೆ ಸುತ್ತಾಡಿಸಿದ್ದ. ನಂತರ ಬೆಳಗಿನ ಜಾವ ಏರ್‌ಪೋರ್ಟ್‌ ಬಳಿ ಇಳಿಸಿ, 'ಈ ವಿಚಾರವನ್ನ ಯಾರಿಗೂ ಹೇಳಬಾರದು, ನೀನು ಸ್ವಂತ ಊರಿಗೆ ಹೋಗು' ಎಂದು ಬೆದರಿಕೆ ಹಾಕಿ ತೆರಳಿದ್ದನಂತೆ. ಈ ಕುರಿತು ಯುವತಿ ರಾಮಮೂರ್ತಿ ನಗರ ಠಾಣೆಗೆ ದೂರು ನೀಡಿದ್ದಳು.

ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನ ಬಂಧಿಸಿದ್ದಾರೆ. ಆರೋಪಿಯ ಹೆಸರು ಸುರೇಶ್‌ ಅಲ್ಲ ಮಹೇಂದ್ರ ಕುಮಾರ್‌ ಎಂಬುದು ತನಿಖೆ ವೇಳೆ ಬಯಲಾಗಿದೆ. ಮೋಜಿನ ಜೀವನ ಹಾಗೂ ದುಶ್ಚಟಗಳಿಗೆ ಹಣ ಹೊಂದಿಸಲು ಮಾರತ್‌ಹಳ್ಳಿ, ಹೆಣ್ಣೂರು, ಪುಲಿಕೇಶಿನಗರ ಸೇರಿದಂತೆ ಹಲವೆಡೆ ಇದೇ ರೀತಿ ವಂಚಿಸಿದ್ದ ಎಂದು ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಗಗನಕ್ಕೇರಿದ ಟೊಮೆಟೊ ದರ: ಬೆಳಗಾವಿಯಲ್ಲಿ ಸೆಂಚುರಿ ಬಾರಿಸಿದ ಕಿಚನ್​ ಕ್ವೀನ್​! - Tomato Price Hike

ETV Bharat Logo

Copyright © 2024 Ushodaya Enterprises Pvt. Ltd., All Rights Reserved.