ETV Bharat / state

ಚಿಕ್ಕೋಡಿ: ಹಳ್ಳದಲ್ಲಿ ಕೊಚ್ಚಿ ಹೋಗಿ ವ್ಯಕ್ತಿ ಸಾವು - Man Washed Away - MAN WASHED AWAY

ದೇವರ ದರ್ಶನಕ್ಕೆ ಸೈಕಲ್​ನಲ್ಲಿ ತೆರಳುತ್ತಿದ್ದಾಗ ಆಯತಪ್ಪಿ ಹಳ್ಳಕ್ಕೆ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ.

ದೇವರ ದರ್ಶನಕ್ಕೆ ತೆರಳಿದ ವ್ಯಕ್ತಿ ಮಸೂಬಾ ಹಳ್ಳದಲ್ಲಿ ಕೊಚ್ಚಿ ಸಾವು
ಹಳ್ಳದಲ್ಲಿ ಕೊಚ್ಚಿ ಹೋಗಿ ವ್ಯಕ್ತಿ ಸಾವು (ETV Bharat)
author img

By ETV Bharat Karnataka Team

Published : Sep 25, 2024, 11:21 AM IST

ಚಿಕ್ಕೋಡಿ: ದೇವರ ದರ್ಶನಕ್ಕೆ ತೆರಳುವಾಗ ಹಳ್ಳದ ನೀರಿಗೆ ಸಿಲುಕಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಚಿಕ್ಕೋಡಿಯಲ್ಲಿ ಇಂದು ನಸುಕಿನ ಜಾವ ನಡೆದಿದೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ನಿವಾಸಿ ಗುರುರಾಜ್ ಈರಪ್ಪ ಯಾದವಾಡ (75) ಮೃತಪಟ್ಟಿದ್ದಾರೆ.

ಕಳೆದ ಎರಡು ದಿನಗಳಿಂದ ಚಿಕ್ಕೋಡಿಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಕಳೆದ ರಾತ್ರಿ ಕೂಡ ಅಥಣಿ ಪಟ್ಟಣದಲ್ಲಿ ಧಾರಾಕಾರ ಮಳೆಯಾಗಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.

ಸ್ಥಳೀಯ ಮಹಿಳೆಯ ಹೇಳಿಕೆ (ETV Bharat)

ಗುರುರಾಜ್ ಈರಪ್ಪ ಯಾದವಾಡ ಎಂದಿನಂತೆ ಇಂದು ಅಥಣಿ ಪಟ್ಟಣದ ಮಠಗಳಿಗೆ ತೆರಳಿ ದೇವರ ದರ್ಶನ ಪಡೆದುಕೊಳ್ಳಲು ಸೈಕಲ್‌ನಲ್ಲಿ ಹೋಗುತ್ತಿದ್ದರು. ಮಾರ್ಗಮಧ್ಯೆ ಆಯತಪ್ಪಿ ಮಸೂಬಾ ಹಳ್ಳಕ್ಕೆ ಬಿದ್ದು, ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಅಥಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಮಂಗಳೂರಿನ ಶ್ರೀಮತಿ ಶೆಟ್ಟಿ ಹತ್ಯೆ ಪ್ರಕರಣ: ಅಪರಾಧಿ ದಂಪತಿಗೆ ದಂಡಸಹಿತ ಜೀವಾವಧಿ ಶಿಕ್ಷೆ - Shrimati Shetty Murder Case

ETV Bharat Logo

Copyright © 2025 Ushodaya Enterprises Pvt. Ltd., All Rights Reserved.