ಚಾಮರಾಜನಗರ : ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕವಲಂದೆ ಗ್ರಾಮದ ರಿಯಲ್ ಎಸ್ಟೇಟ್ ಉದ್ಯಮಿ ಮಹದೇವನಾಯಕ ಆತ್ಮಹತ್ಯೆಗೆ ಶರಣಾದವರು.
ಮೃತ ಮಹದೇವ ನಾಯಕ ಜೂ. 5 ರಂದು ನಾಪತ್ತೆಯಾಗಿದ್ದಾರೆ ಎಂದು ಕವಲಂದೆ ಪೊಲೀಸ್ ಠಾಣೆಯಲ್ಲಿ ಸಂಬಂಧಿಕರು ದೂರು ಕೊಟ್ಟಿದ್ದರು. ಜೂ. 6 ರಂದು ಬಿಳಿಗಿರಿರಂಗನ ಬೆಟ್ಟದಲ್ಲಿ ಬೈಕ್ ಪತ್ತೆಯಾದ ಹಿನ್ನೆಲೆ ಅದರ ಜಾಡು ಹಿಡಿದ ಯಳಂದೂರು ಪೊಲೀಸರು ಶನಿವಾರ ಡ್ರೋನ್ ಕ್ಯಾಮೆರಾ ಬಳಸಿ ಹುಡುಕಾಟ ನಡೆಸಿದ್ದರು.
ಡ್ರೋನ್ ಕ್ಯಾಮೆರಾದಲ್ಲಿ ಕಮರಿ ನಡುವೆ ಶವ ಸಿಲುಕಿರುವುದು ಕಂಡುಬಂದಿದ್ದು, ಸಂಬಂಧಿಕರು ಶವದ ಮೇಲಿನ ಬಟ್ಟೆ ಗುರುತಿಸಿದ್ದಾರೆ. ಯಳಂದೂರು ಪೊಲೀಸರ ಶವ ಮೇಲಕ್ಕೆತ್ತುವ ಕಾರ್ಯಾಚರಣೆ ಕೈಗೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಯಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಮಂಡ್ಯದಲ್ಲಿ ಕೌಟುಂಬಿಕ ಕಲಹ: ದಂಪತಿ ಆತ್ಮಹತ್ಯೆಗೆ ಶರಣು