ETV Bharat / state

ಬೆಂಗಳೂರು: ಟೂರಿಸ್ಟ್​ ವೀಸಾದಡಿ ಬಂದಿದ್ದ ವಿದೇಶಿ ಮಹಿಳೆ ಹೋಟೆಲ್​ನಲ್ಲಿ ಶವವಾಗಿ ಪತ್ತೆ

author img

By ETV Bharat Karnataka Team

Published : Mar 14, 2024, 9:13 AM IST

ಪ್ರವಾಸಿ ವೀಸಾದಡಿ ಬೆಂಗಳೂರಿಗೆ ಬಂದಿದ್ದ ವಿದೇಶಿ ಮಹಿಳೆ ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಹೋಟೆಲೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ವಿದೇಶಿ ಮಹಿಳೆ ಶವವಾಗಿ ಪತ್ತೆ
ವಿದೇಶಿ ಮಹಿಳೆ ಶವವಾಗಿ ಪತ್ತೆ

ಬೆಂಗಳೂರು: ಟೂರಿಸ್ಟ್​​ ವೀಸಾದಡಿ ನಗರಕ್ಕೆ ಬಂದಿದ್ದ ವಿದೇಶಿ ಮಹಿಳೆ ಶವವಾಗಿ ಪತ್ತೆಯಾಗಿದ್ದಾರೆ. ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಜಗದೀಶ್​ ಹೋಟೆಲ್​ನಲ್ಲಿ ಉಳಿದುಕೊಂಡಿದ್ದ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಉಜೇಕಿಸ್ತಾನ್​ ಮೂಲದ ಜರೀನಾ ಮೃತ ಮಹಿಳೆ ಎಂದು ಗುರುತಿಸಲಾಗಿದೆ.

ಪ್ರವಾಸಿ ವೀಸಾದಡಿ ಬೆಂಗಳೂರಿಗೆ ಬಂದಿದ್ದ ಜರೀನಾ, ಕಳೆದ ನಾಲ್ಕು ದಿನಗಳಿಂದ ಜಗದೀಶ್​ ಹೋಟೆಲ್​ನಲ್ಲಿ ತಂಗಿದ್ದರು. ನಿನ್ನೆ ಸಂಜೆಯಿಂದ ಹೋಟೆಲ್​ ಸಿಬ್ಬಂದಿಗೆ ಅವರು ಪ್ರತಿಕ್ರಿಯಿಸಿರಲಿಲ್ಲ. ಅನುಮಾನಗೊಂಡು ರೂಮ್​ನ ಮಾಸ್ಟರ್​ ಕೀ ಬಳಸಿ ಬಾಗಿಲು ತೆರೆದು ಒಳ ನೋಡಿದಾಗ ಮಹಿಳೆ ಶವವಾಗಿ ಪತ್ತೆಯಾಗಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಶೇಷಾದ್ರಿಪುರಂ ಪೊಲೀಸ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಬೌರಿಂಗ್​ ಆಸ್ಪತ್ರೆಗೆ ರವಾನಿಸಿದ್ದಾರೆ. ಮತ್ತೊಂದೆಡೆ ಎಫ್​ಎಸ್​ಎಲ್​ ತಂಡ ಪರಿಶೀಲಿಸುತ್ತಿದೆ. ಅನುಮಾನಾಸ್ಪದ ಸಾವಿನಡಿ‌ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಲ್ಕು ದಿನಗಳಿಂದ ಹೋಟೆಲ್​ಗೆ ಯಾರು ಯಾರು ಬಂದಿದ್ದರು ಎಂಬುದರ ಲೆಡ್ಜರ್​ ಪರಿಶೀಲಿಸುತ್ತಿದ್ದಾರೆ. ಹೋಟೆಲ್​ಗೆ ಅನುಮಾನಾಸ್ಪದವಾಗಿ ಬಂದು ಹೋಗಿರುವವರ ಕುರಿತಂತೆ ಸಿಸಿಟಿವಿ ಪರಿಶೀಲನೆ ‌ನಡೆಸುತ್ತಿದ್ದಾರೆ.

ಇದನ್ನೂ ಓದಿ: ಮುಂಬೈನ ಪಂಚತಾರಾ ಹೋಟೆಲ್​ನಲ್ಲಿ ಅಮೆರಿಕ ಪ್ರಜೆ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.