ETV Bharat / state

ಬಾಗಲಕೋಟೆ: ವಿವಿಧ ತಳಿಯ ಕುರಿಗಳ ಸಾಕಣೆ: ಶ್ರಮಕ್ಕೆ ತಕ್ಕಂತೆ ಭರಪೂರ ಆದಾಯ; ಏನಿವರ ಸಕ್ಸಸ್​ ಮಂತ್ರ! - success story of Former - SUCCESS STORY OF FORMER

ಬಾಗಲಕೋಟೆಯಲ್ಲಿ ಒಬ್ಬ ರೈತರು ವಿವಿಧ ತಳಿಯ ಕುರಿಗಳನ್ನು ಸಾಕಿ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ.

sheep farm
ಕುರಿ ಫಾರ್ಮ್ (ETV Bharat)
author img

By ETV Bharat Karnataka Team

Published : May 23, 2024, 7:54 PM IST

ಕುರಿ ಫಾರ್ಮ್​ ಮಾಲೀಕ ಪ್ರಕಾಶ ತಪಶೆಟ್ಟಿ (ETV Bharat)

ಬಾಗಲಕೋಟೆ : ಸಹಕಾರಿ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿ, ಹಲವು ಪ್ರಶಸ್ತಿಗಳನ್ನು ಪಡೆದುಕೊಂಡು ತಮ್ಮದೇ ಆದ ಛಾಪು ಮೂಡಿಸಿರುವ ಪ್ರಕಾಶ ತಪಶೆಟ್ಟಿ ಅವರು, ಈಗ ಕೃಷಿ ಕ್ಷೇತ್ರದಲ್ಲಿ ಮಗ್ನರಾಗಿದ್ದಾರೆ. ಸಹಕಾರಿ ಕ್ಷೇತ್ರಕ್ಕಿಂತ ನೆಮ್ಮದಿ ಸಿಗುವುದು ಕೃಷಿ ಕ್ಷೇತ್ರದಲ್ಲಿ ಎಂಬ ಭಾವನೆಯಿಂದಾಗಿ ಕುರಿ ಸಾಕಾಣಿಕೆ ಕೇಂದ್ರ ತೆರೆದು, ವಿವಿಧ ಬಗೆಯ ತಳಿಗಳನ್ನು ಸಾಕಾಣಿಕೆ ಮಾಡಿ ಗಮನ ಸೆಳೆಯುತ್ತಿದ್ದಾರೆ.

ಬಾಗಲಕೋಟೆ ನಗರದ ಸಮೀಪ ಇರುವ ಸೀಗಿಕೇರಿ ಗ್ರಾಮದ ಬಳಿ ಸುಮಾರು 14 ಏಕರೆ ಪ್ರದೇಶದಲ್ಲಿ ಕುರಿ ಸಾಕಾಣಿಕೆ ಕೇಂದ್ರ ಮಾಡುವ ಜೊತೆಗೆ ವಿವಿಧ ಬೆಳೆಗಳನ್ನ ಬೆಳೆದು, ಇತರ ರೈತರಿಗೆ ಮಾದರಿಯಾಗುತ್ತಿದ್ದಾರೆ. ಸುಮಾರು ಒಂದು ಕೋಟಿಗೂ ಅಧಿಕ ವೆಚ್ಚದ ಶೆಡ್​ ನಿರ್ಮಾಣ ಸೇರಿದಂತೆ ವಿವಿಧ ಬಗೆಯ ತಳಿಗಳನ್ನು ತಂದು ಸಾಕಾಣಿಕೆ ಹಾಗೂ ಮಾರಾಟ ಮಾಡುತ್ತಿದ್ದಾರೆ.

ಕುರಿ ಸಾಕಾಣಿಕೆಗೆ 1 ಕೋಟಿ ಬಂಡವಾಳ : ಇತ್ತೀಚಿನ ದಿನಮಾನದಲ್ಲಿ ರೈತರು ಯಾವುದೇ ಶ್ರಮ ಇಲ್ಲದೇ, ಹೆಚ್ಚಿನ ಆದಾಯ ಗಳಿಸುವ ಬಗ್ಗೆ ಚಿಂತನೆ ಮಾಡುತ್ತಾರೆ. ಆದರೆ, ಪ್ರಕಾಶ ತಪಶೆಟ್ಟಿ ಅವರು ಹೆಚ್ಚು ಶ್ರಮ ಹಾಕಿದರೆ, ಲಾಭ ಖಚಿತ ಎಂದು ಹೇಳುತ್ತಾರೆ. 30 ಲಕ್ಷ ರೂ. ವೆಚ್ಚ ಮಾಡಿ ಶೆಡ್​ ನಿರ್ಮಾಣ ಮಾಡಲಾಗಿದೆ. ಸುಮಾರು 70 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕುರಿ, ಮೇಕೆ, ಆಡು, ಟಗರಿನ ವಿವಿಧ ತಳಿಗಳನ್ನು ತಮ್ಮ ಶೆಡ್​ನಲ್ಲಿ ಸಾಕಾಣಿಕೆ ಮಾಡುತ್ತಿದ್ದಾರೆ.

ಮೇಕೆ ಹಾಲು ಮೇಕೆ ಮರಿಗೆ ಬಳಕೆ : ಇಷ್ಟೇ ಅಲ್ಲ ಆಫ್ರಿಕಾ ದೇಶದ ತಳಿಯನ್ನು ತಂದು ಅಭಿವೃದ್ಧಿಪಡಿಸುತ್ತಿದ್ದಾರೆ. ಮೇಕೆಯಿಂದ ಹಾಲು ತೆಗೆದು ಅವುಗಳ ಮರಿಗೆ ಕುಡಿಸುತ್ತಾರೆ. ಕುರಿಗಳ ಆಹಾರಕ್ಕಾಗಿ ಬೆಲ್ಲ, ಎಣ್ಣೆ, ಕಾಳುಗಳು ಹಾಗೂ ಮೇವು ಸಂಗ್ರಹ ಮಾಡಿದ್ದಾರೆ. ಕೂಲಿ ಕಾರ್ಮಿಕರ ಮೂಲಕ ಎಲ್ಲ ರೀತಿಯಾಗಿ ಕುರಿಗಳ ನಿರ್ವಹಣೆ ಮಾಡುತ್ತಿದ್ದಾರೆ.

ಕಳೆದ ಒಂದು ವರ್ಷದಿಂದ ಕೇವಲ ಎರಡು ಕುರಿಗಳಿಂದ ಇವರು ಕುರಿ ಸಾಕಾಣಿಕೆ ಪ್ರಾರಂಭಿಸಿದ್ದರು. ಈಗ ಕುರಿ ಕೇಂದ್ರದಲ್ಲಿ 450 ಕ್ಕೂ ಅಧಿಕ ಕುರಿಗಳು ಇವೆ. ಇದರಲ್ಲಿ ಸ್ಥಳೀಯ ತಳಿಗಳು ಸೇರಿದಂತೆ ವಿದೇಶ ತಳಿಗಳಾದ ಬೋಯರ್, ಶಿರೂಯಿ, ಢಾರಪರ್ ಸೇರಿದಂತೆ ಇತರ ತಳಿಗಳನ್ನು ಸಹ ತಂದು ಸಾಕಣೆ ಮಾಡಿದ್ದಾರೆ.

ಶೆಡ್​ಗೆ ಸಂಶೋಧನಾ ವಿದ್ಯಾರ್ಥಿಗಳು ಭೇಟಿ : ಸುಸಜ್ಜಿತವಾಗಿ ಶೆಡ್ ನಿರ್ಮಾಣ ಮಾಡಿದ್ದು, ಬೇರೆ ಬೇರೆ ತಳಿಗಳಿಗೆ ಬೇರೆ ವಿಭಾಗ ಮಾಡಿ ಅದರಲ್ಲಿ ಇರಿಸಲಾಗುತ್ತಿದೆ. ಅವುಗಳಿಗೆ ಮೇವು ಸೇರಿದಂತೆ ಇತರ ಆಹಾರ, ನೀರು ಪೂರೈಕೆ ಮಾಡಲಾಗುತ್ತಿದೆ. ಪ್ರಕಾಶ ತಪಶೆಟ್ಟಿ ಅವರು ಈ ರೀತಿಯಾಗಿ ಕುರಿ ಸಾಕಾಣಿಕೆ ಕೇಂದ್ರವನ್ನು ಮಾಡಿರುವ ಬಗ್ಗೆ ಹಾಗೂ ವಿವಿಧ ತಳಿಗಳ ಅಭಿವೃದ್ಧಿ ಬಗ್ಗೆ ವೀಕ್ಷಣೆ ಮಾಡಲು ವಿವಿಧ ಪ್ರದೇಶಗಳಿಂದ ರೈತರು, ಆಸಕ್ತರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಆಗಮಿಸುತ್ತಾರೆ.

ಬಕ್ರೀದ್, ರಂಜಾನ್ ಸೇರಿದಂತೆ ಇತರ ಹಬ್ಬಗಳಲ್ಲಿ ಇಲ್ಲಿನ ಕುರಿಗಳಿಗೆ ಸಾಕಷ್ಟು ಬೇಡಿಕೆ ಇದೆ. ಸುಮಾರು 70 ಕ್ಕೂ ಅಧಿಕ ಕೆಜಿ ಮಾಂಸ ಸಿಗುವ ಕುರಿ ಹಾಗೂ ಮೇಕೆಗಳೂ ಸಹ ಇಲ್ಲಿವೆ. ಸದ್ದಾಂ, ಭಾಷಾ ಎಂಬ ಹೆಸರುಗಳನ್ನು ಇಟ್ಟು ಪ್ರೀತಿಯಿಂದ ಕುರಿ ಸಾಕಣೆ ಮಾಡುತ್ತಿದ್ದಾರೆ. ಮೂಕ ಪ್ರಾಣಿಗಳ ವೇದನೆ ಅರಿತುಕೊಂಡು ಅವುಗಳ ಹಸಿವು ಈಡೇರಿಸುವಲ್ಲಿ ಪ್ರಕಾಶ ತಪಶೆಟ್ಟಿ ಅವರು ಯಶಸ್ಸು ಕಂಡಿದ್ದಾರೆ.

ಬಾಂಬೆ, ಪೂನಾ ಸೇರಿದಂತೆ ಮಹಾರಾಷ್ಟ್ರ ಹಾಗೂ ರಾಜ್ಯದ ಇತರ ಪ್ರದೇಶಗಳಿಗೆ ಕುರಿಗಳನ್ನು ಮಾರಾಟ ಮಾಡುತ್ತಾರೆ.
ಹೈಟೆಕ್ ಶೆಡ್​ ನಿರ್ಮಾಣ ಮಾಡಿ, ವಿವಿಧ ಬಗೆಯ ತಳಿಗಳನ್ನು ತಂದು ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಸರ್ಕಾರದ ಯೋಜನೆ ಮೂಲಕ ಒಂದು ಕೋಟಿಗೂ ಅಧಿಕ ಹಣ ಸಾಲ ತೆಗೆದುಕೊಂಡು ಇನ್ನು ಹೆಚ್ಚಿನ ಅಭಿವೃದ್ಧಿಪಡಿಸುವ ಉದ್ದೇಶ ಇಟ್ಟುಕೊಂಡಿದ್ದಾರೆ.

ಶ್ರಮ ಪಟ್ಟರೆ ಸಾಕಷ್ಟು ಲಾಭ ಗಳಿಕೆ : ಮೇಕೆಗಳಿಂದ ಕರೆಯುವ ಹಾಲನ್ನು ಇವರು ಮಾರಾಟ ಮಾಡುವುದಿಲ್ಲ. ಬದಲಾಗಿ ಇಲ್ಲಿರುವ ಮರಿಗಳಿಗೆ ಹಾಲುಣಿಸುತ್ತಾರೆ. ಪ್ರಾಮಾಣಿಕ ಹಾಗೂ ನಿಯತ್ತಾಗಿ ಕೆಲಸ ಮಾಡಿ ಶ್ರಮ ಪಟ್ಟರೆ ಸಾಕಷ್ಟು ಲಾಭ ಗಳಿಸಬಹುದು ಅಂತಾರೆ ಪ್ರಕಾಶ ತಪಶೆಟ್ಟಿ. ಸಹಕಾರಿ ರಂಗದ ಕೆಲಸಕ್ಕಿಂತ ಇದರಲ್ಲಿ ತೃಪ್ತಿ ಇದೆ ಎಂದು ಹೆಮ್ಮೆ ಸಹ ವ್ಯಕ್ತಪಡಿಸಿದ್ದಾರೆ.

ಯಾವುದೇ ಕೆಲಸ ಇರಲಿ ಕಷ್ಟ ಪಟ್ಟು ಮಾಡಿದರೆ ಅದರಲ್ಲಿ ಫಲ ಸಿಗುತ್ತದೆ ಎಂಬುದಕ್ಕೆ ಬಸವೇಶ್ವರ ಬ್ಯಾಂಕಿನ ಅಧ್ಯಕ್ಷರು ಆಗಿರುವ ಪ್ರಕಾಶ ತಪಶೆಟ್ಟಿ ಅವರೇ ಸಾಕ್ಷಿಯಾಗಿದ್ದಾರೆ. ಮೂಲತಃ ರೈತಾಪಿ ಕುಟುಂಬದ ಹಿನ್ನೆಲೆಯಿಂದ ಬಂದ ಇವರು ಕೃಷಿ ಚಟುವಟಿಕೆ ಸೇರಿದಂತೆ ಈ ರೀತಿಯಾಗಿ ಕುರಿ ಸಾಕಾಣಿಕೆ ಕೇಂದ್ರವನ್ನು ಕೂಡ ಮಾಡಿ, ಇತರ ರೈತರಿಗೆ ಮಾದರಿಯಾಗಿದ್ದಾರೆ.

ಈ ಬಗ್ಗೆ ಮಾತನಾಡಿರುವ ಪ್ರಕಾಶ ತಪಶೆಟ್ಟಿ, ಕುರಿ ಸಾಕಾಣಿಕೆ ಮಾಡುವ ರೈತರಿಗಾಗಲಿ, ಸಾಮಾನ್ಯ ರೈತರಿಗೆ ಆಗಲಿ, ಸರ್ಕಾರದ ಯೋಜನೆಗಳ ಬಗ್ಗೆ. ಜಾನುವಾರುಗಳಿಗೆ ಬರುವ ರೋಗ ರುಜಿನಗಳ ಬಗ್ಗೆ ಸೂಕ್ತ ಮಾಹಿತಿ ಸಿಗುತ್ತಿಲ್ಲ. ಮೃತಪಟ್ಟ ಪ್ರಾಣಿಗಳಿಗೆ ಸರ್ಕಾರದಿಂದ ಪರಿಹಾರ ಸಿಗುತ್ತದೆ. ಆದರೆ, ಆ ಪರಿಹಾರ ದನ ತಲುಪಬೇಕಾದವರಿಗೆ ತಲುಪುತ್ತಿಲ್ಲ ಎಂದು ಬೇಸರ ಕೂಡಾ ವ್ಯಕ್ತಪಡಿಸಿದ್ದಾರೆ.

ಪಶು ಸಂಗೋಪನೆ ಇಲಾಖೆ ವತಿಯಿಂದ ಜಾಗೃತಿ ಸೇರಿದಂತೆ ಇತರ ಯಾವುದೇ ಮಾಹಿತಿ ಇಲ್ಲದಿರುವುದರಿಂದ ರೈತರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಅವರು ಇದೇ ವೇಳೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಹಾವೇರಿ ಕುರಿ ಮಾರುಕಟ್ಟೆಯಲ್ಲಿ ದರ ಕುಸಿತ.. ಮೂಲಸೌಕರ್ಯ ಕೊರತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.