ETV Bharat / state

ಕೆಲಸ ಕಳೆದುಕೊಳ್ಳಲು ಕಾರಣನಾದ ಎಂಬ ದ್ವೇಷಕ್ಕೆ ಸಹೋದ್ಯೋಗಿಯ ಹತ್ಯೆ - Murder in Bengaluru - MURDER IN BENGALURU

ಕೆಲಸ ಕಳೆದುಕೊಳ್ಳಲು ಕಾರಣನಾದ ಎಂಬ ದ್ವೇಷಕ್ಕೆ ಸಹದ್ಯೋಗಿಯ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

COLLEAGUE WAS KILLED  LOSE HIS JOB  BENGALURU
ಕೆಲಸ ಕಳೆದುಕೊಳ್ಳಲು ಕಾರಣನಾದ ಎಂಬ ದ್ವೇಷಕ್ಕೆ ಸಹೋದ್ಯೋಗಿಯ ಹತ್ಯೆ (ಕೃಪೆ: ETV Bharat)
author img

By ETV Bharat Karnataka Team

Published : May 18, 2024, 6:05 PM IST

ಬೆಂಗಳೂರು : ಕೆಲಸದಿಂದ ತೆಗೆದುಹಾಕಲು ಕಾರಣನಾದ ಎಂದು ಸಹದ್ಯೋಗಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆೆ ಮಾಡಿರುವ ಘಟನೆ ಯಲಹಂಕ ನ್ಯೂಟೌನ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ. ಮೃತನನ್ನು ನೇಪಾಳ ಮೂಲದ ಗಜೇಂದ್ರ ಸೌದ್ (32) ಎಂದು ಗುರುತಿಸಲಾಗಿದೆ. ಆರೋಪಿ ಸಂತೋಷ್ ಪರಾರಿಯಾಗಿದ್ದು, ಆತನ ಪತ್ತೆಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ‌.

ಮೂರು ವರ್ಷಗಳ ಹಿಂದೆ ಪತ್ನಿಯೊಂದಿಗೆ ಬೆಂಗಳೂರಿಗೆ ಬಂದಿದ್ದ ಗಜೇಂದ್ರ ಸೌದ್, ಹೋಟೆಲ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಅದೇ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಸಂತೋಷ್ ಹಾಗೂ ಗಜೇಂದ್ರ ಸೌದ್ ನಡುವೆ ಗಲಾಟೆಯಾಗುತ್ತಿದ್ದುದರಿಂದ ಸಂತೋಷ್ ಅನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಗಜೇಂದ್ರನ ಮನೆ ಬಳಿ ಬಂದಿದ್ದ ಸಂತೋಷ್, ಮಾತನಾಡಬೇಕು ಎಂದು ಆತನನ್ನ ಕರೆದುಕೊಂಡು ಹೋಗಿದ್ದ.

ಗಜೇಂದ್ರನನ್ನು ಸಂತೋಷ್​ ಯಲಹಂಕ ನ್ಯೂಟೌನ್‌ನ ಡೈರಿ ಸರ್ಕಲ್ ಬಳಿಯ ಬಾರ್​ನಲ್ಲಿ ಮದ್ಯಪಾನ ಮಾಡಿಸಿದ್ದ. ನಂತರ ಬಾರ್ ಪಕ್ಕದಲ್ಲಿರುವ ಖಾಲಿ ಸ್ಥಳಕ್ಕೆ ಕರೆದೊಯ್ದು ಗಜೇಂದ್ರನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ.

ಘಟನಾ ಸ್ಥಳಕ್ಕೆೆ ಯಲಹಂಕ ನ್ಯೂಟೌನ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಮೃತನ ಪತ್ನಿಯ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ‌. ಆರೋಪಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ‌.

ಓದಿ: ಬೆಳಗಾವಿ ಜಿಲ್ಲೆಯಲ್ಲಿ ಒಂದೂವರೇ ತಿಂಗಳಲ್ಲಿ 10 ಬಾಲ್ಯ ವಿವಾಹ, ಎಷ್ಟೇ ಜಾಗೃತಿ ಮೂಡಿಸಿದರೂ ಕ್ಯಾರೇ ಎನ್ನದ ಪೋಷಕರು - INCRESING CHILD MARRIAGES

ETV Bharat Logo

Copyright © 2024 Ushodaya Enterprises Pvt. Ltd., All Rights Reserved.