ETV Bharat / state

ಆಧುನಿಕ ಯುಗದಲ್ಲೂ ಈ ಗ್ರಾಮಗಳಿಗೆ ಅಡಕೆ ಮರದ ಸೇತುವೆಯೇ ಗತಿ; ಎಲ್ಲಿ ಗೊತ್ತಾ!? - Nut Tree Bridge

author img

By ETV Bharat Karnataka Team

Published : Jul 2, 2024, 3:11 PM IST

ಆಧುನಿಕ ಯುಗದಲ್ಲೂ ಕೆಲವೆಡೆ ಜ್ವಲಂತ ಸಮಸ್ಯೆಗಳು ಇನ್ನೂ ಕಾಡುತ್ತಿವೆ. ಕೆಲವೊಂದು ಗ್ರಾಮಗಳಿಗೆ ಈಗಲೂ ಅಡಕೆ ಮರದ ಸೇತುವೆಯೇ ಗತಿಯಾಗಿದೆ.

BRIDGE MADE OF NUT TREE  DAKSHINA KANNADA  BRIDGE ISSUE
ಈ ಗ್ರಾಮಗಳಿಗೆ ಅಡಿಕೆ ಮರದ ಸೇತುವೆ ಆಸರೆ (ETV Bharat)

ಮಂಗಳೂರು: ದ.ಕ ಜಿಲ್ಲೆಯ ಕಡಬ ತಾಲೂಕಿನ ಕೊಂಬಾರು ಹಾಗೂ ಸಿರಿಬಾಗಿಲು ಗ್ರಾಮಗಳು ಈ ಹಿಂದಿನಿಂದಲೂ ಕುಗ್ರಾಮಗಳು ಎಂದು ಹೆಸರಾಗಿದ್ದರೂ ಇತ್ತೀಚಿನ ವರ್ಷಗಳಲ್ಲಿ ಒಂದಷ್ಟು ಅಭಿವೃದ್ಧಿ ಕಾರ್ಯಗಳಗಾಗಿವೆ. ಆದರೂ ಈ ಆಧುನಿಕ ಯುಗದಲ್ಲೂ ಕೆಲವೆಡೆ ಜ್ವಲಂತ ಸಮಸ್ಯೆಗಳು ಇನ್ನೂ ಕಾಡುತ್ತಿವೆ.

bridge made of nut tree  Dakshina kannada  bridge issue

ಇದು ದಕ್ಷಿಣ ಕನ್ನಡ ಜಿಲ್ಲೆಯ ಮಳೆನಾಡಿನ ತಪ್ಪಲಿನಲ್ಲಿರುವ ಕೊಂಬಾರು ಶಿರಿಬಾಗಿಲು ಗ್ರಾಮ. ಈ ಪ್ರದೇಶವು ಬಹುತೇಕ ಅರಣ್ಯ ಪ್ರದೇಶದಿಂದ ಕೂಡಿದ್ದು, ತೀರಾ ಗ್ರಾಮೀಣ ಭಾಗಕ್ಕೆ ಇನ್ನೂ ಮೂಲ ಸಂಪರ್ಕ ವ್ಯವಸ್ಥೆ ಇಲ್ಲ. ಕೆಲವು ಪ್ರದೇಶಗಳಲ್ಲಿ ಮಳೆಗಾಲ ಪ್ರಾರಂಭವಾದರೆ ಸಾಕು ಇಲ್ಲಿನ ತೋಡು ಹೊಳೆಗಳು ತುಂಬಿ ಹರಿದು, ಅದರಾಚೆಗಿನ ಪ್ರದೇಶಗಳು ಸಂಪೂರ್ಣವಾಗಿ ದ್ವೀಪವಾಗಿ ಬಿಡುತ್ತವೆ. ರಸ್ತೆ ಸಂಚಾರಗಳೂ ಸಂಪೂರ್ಣವಾಗಿ ಸ್ಥಗಿತವಾಗುತ್ತದೆ. ಬೇರೆ ದಾರಿ ಇಲ್ಲದ ಇಲ್ಲಿನ ಜನ ತೋಡುಗಳಿಗೆ ತಾತ್ಕಾಲಿಕವಾಗಿ ಅಡಕೆ ಮರ ಬಳಸಿ ಪಾಲಗಳನ್ನು(ಸೇತುವೆ) ನಿರ್ಮಿಸಿಕೊಂಡು ಸಂಚರಿಸುತ್ತಾರೆ.

ಇದೀಗ ಕೊಂಬಾರು ಗ್ರಾಮದ ಅಲ್ವೆ -ಕಟ್ಟೆ ಹೊಳೆಗೆ ಬಿರ್ಮೆರೆಗುಂಡಿ ಎಂಬಲ್ಲಿ ಜನ ತೋಡು ದಾಟಲು ಅಡಕೆ ಮರದ ಪಾಲ ನಿರ್ಮಾಣ ಮಾಡಿಕೊಂಡು ತಮ್ಮ ಗೂಡಿಗೆ ಸೇರುತ್ತಾರೆ. ಮಣಿಬಾಂಡ - ಕಟ್ಟೆ ಕಚ್ಚಾ ರಸ್ತೆಯಲ್ಲಿ ಒಂದೂವರೆ ಕಿಲೋ ಮೀಟರ್ ಸಾಗಿದರೆ ಬಿರ್ಮೆರೆಗುಂಡಿ ಸಿಗುತ್ತದೆ. ಹೆಸರೇ ಸೂಚಿಸುವಂತೆ ಇಲ್ಲಿ ಬಾರೀ ಗುಂಡಿ ಇದೆ. ಇದರ ಮೇಲೆ ಇಲ್ಲಿನ ನಿವಾಸಿಗಳು ಸೇರಿಕೊಂಡು ಅಡಕೆ ಮರದ ಪಾಲವನ್ನು ತಾತ್ಕಾಲಿಕವಾಗಿ ನಿರ್ಮಾಣ ಮಾಡಿಕೊಳ್ಳುತ್ತಾರೆ.

ಜೂನ್ ತಿಂಗಳಿಂದ ಡಿಸೆಂಬರ್ ತನಕ ಕಟ್ಟೆ ಪ್ರದೇಶದ ಹತ್ತು ಮನೆಗಳಿಗೆ ಇದೇ ಪಾಲವೇ ಆಸರೆ. ಇದು ಇಲ್ಲಿನ ಜನಗಳಿಗೆ ಸಾಮಾನ್ಯವಾಗಿದ್ದರೂ ಪಾಲದ ಮೇಲೆ ಸರ್ಕಸ್ ಮಾಡಿಕೊಂಡು ಹೋಗುವುದು ಅಪಾಯಕಾರಿಯಾಗಿದೆ. ದಿನಾಲು ಹಲವಾರು ವಿದ್ಯಾರ್ಥಿಗಳು ಈ ಪಾಲದ ಮೂಲಕವೇ ನಡೆದುಕೊಂಡು ಶಾಲೆಗೆ ಹೋಗುತ್ತಾರೆ. ಇನ್ನೂ ಅನಾರೋಗ್ಯ ಪೀಡಿತರನ್ನು ಇದೇ ಪಾಲದಲ್ಲಿ ಹೊತ್ತುಕೊಂಡು ಹೋಗಬೇಕಾದ ಅನಿವಾರ್ಯತೆ ಇಲ್ಲಿದೆ.

ಇಲ್ಲಿ ವೃದ್ಧ ಮಹಿಳೆಯೊಬ್ಬರನ್ನು ವಾರಕ್ಕೆ ಒಂದು ಬಾರಿ ವೈದ್ಯರ ಬಳಿಗೆ ಚೆಕ್ ಅಪ್​ಗೆ ಕರೆದುಕೊಂಡು ಹೋಗಬೇಕಾಗುತ್ತದೆ. ಮೂರು ದಿನಗಳ ಹಿಂದೆ ಅದೇ ವೃದ್ಧೆಯನ್ನು ಕೈಗಾಡಿಯಲ್ಲಿ ಕುಳ್ಳಿರಿಸಿಕೊಂಡು ಬಂದು ಅವರ ಮಗ ಪಾಲದಲ್ಲಿ ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದರು. ಈ ಕಟ್ಟೆ ಪ್ರದೇಶದ ಜನರು ವರ್ಷದಲ್ಲಿ ಆರು ತಿಂಗಳು ನರಕಯಾತನೆ ಅನುಭವಿಸಬೆಕಾಗುತ್ತದೆ. ಇವರಿಗೆ ಪರ್ಯಾಯ ದಾರಿ ಇದ್ದರೂ ಅದು ನಾಲ್ಕೈದು ಕಿಲೋ ಮೀಟರ್ ದೂರದ ದುರ್ಗಮ ದಾರಿ ಇದೆ.

ಈ ನಡುವೆ ಕಾಡಿನ ಮಧ್ಯೆ ಕಾಡಾನೆಗಳ ಹಾವಳಿ ಬೇರೆ ಇದೆ. ಅದಕ್ಕಾಗಿ ಇಲ್ಲಿ ಸೇತುವೆ ನಿರ್ಮಾಣ ಮಾಡಿಕೊಡಿ ಎಂದು ಈಗಾಗಲೇ ಹಲವಾರು ಅಹವಾಲು ಸಲ್ಲಿಸಲಾಗುತ್ತಿದೆ. ಇದಕ್ಕಾಗಿ ಹತ್ತು ಹಲವು ವರ್ಷಗಳಿಂದ ಈ ಭಾಗದ ಜನರು ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಅದರೆ ಈವರಗೆ ಯಾವುದೇ ಪ್ರಯೋಜನವಾಗಿಲ್ಲ.

ಇಲ್ಲಿನ ನಿವಾಸಿ ಮಂಜುನಾಥ್ ಕೆ.ಎನ್. ಎಂಬವರು ರಾಜ್ಯ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದ.ಕ ಜಿಲ್ಲಾ ಪಂಚಾಯಿತಿ, ಜಿಲ್ಲಾಧಿಕಾರಿಯವರು, ಸಚಿವರು, ಶಾಸಕರು ಹಾಗೂ ಮನವಿ ಸಲ್ಲಿಸಿ ಬಿರ್ಮೆಗುಂಡಿ ಸಂಪರ್ಕ ರಸ್ತೆ ಅಭಿವೃದ್ಧಿ ಹಾಗೂ ಸೇತುವೆ ನಿರ್ಮಾಣಕ್ಕೆ ಮನವಿ ಸಲ್ಲಿಸಿದ್ದರು. ಆದರೆ, ಈ ತನಕ ಇವರ ಮನವಿಗೆ ಪೂರಕ ಸ್ಪಂದನ ಮಾತ್ರ ದೊರೆಯದಿರುವುದು ವಿಪರ್ಯಾಸವಾಗಿದೆ.

ಈ ಬಗ್ಗೆ ಈಟಿವಿ ಭಾರತದ ಜೊತೆಗೆ ಮಾತನಾಡಿದ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷ ಮಧುಸೂದನ್ ಅವರು, ಈಗಾಗಲೇ ಇಲ್ಲಿಂದ ಸುಮಾರು ಅರ್ಧ ಕಿಮೀ ದೂರದ ಪೆರಂದೋಡಿ ಎಂಬಲ್ಲಿ ಮತ್ತು ಮಲೆಮಕ್ಕಿ ಎಂಬಲ್ಲಿ ಅಂದಾಜು ಎರಡು ಕೋಟಿ ವೆಚ್ಚದಲ್ಲಿ ಎರಡು ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ. ಈ ಸೇತುವೆಗಳ ಮೂಲಕ ಈ ಪ್ರದೇಶದ ಜನರಿಗೂ ನಡೆದುಕೊಂಡು ಹೋಗಲು ಸಮಸ್ಯೆ ಇಲ್ಲ. ಆದರೆ, ಅಲ್ಲಿನ ಕೆಲವು ಜನರ ಭೂಮಿ ಸಮಸ್ಯೆಗಳಿಂದ ಸಂಚಾರ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಇಲ್ಲಿ ಸೇತುವೆ ನಿರ್ಮಾಣ ಆಗಬೇಕೆಂದು ಸರಕಾರಕ್ಕೆ ಈ ಹಿಂದೆಯೇ ಮನವಿ ನೀಡಲಾಗಿದೆ. ಶಾಲಾ ಸಂಪರ್ಕ ಸೇತುವೆ ಆದರೂ ಸಾಕಾಗಿತ್ತು. ಆದರೆ ಅದಕ್ಕೂ ಕೆಲವರ ವಿರೋಧಗಳು ಎದುರಾಗಿತ್ತು. ಒಟ್ಟಿನಲ್ಲಿ ಇಲ್ಲಿ ಸೇತುವೆ ಆಗುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆದಿದೆ ಎಂದು ಹೇಳಿದರು.

ಓದಿ: ಜುಲೈನಲ್ಲಿ ಸರಾಸರಿಗಿಂತ ಹೆಚ್ಚಿನ ಮಳೆ ಸಾಧ್ಯತೆ: ಐಎಂಡಿ ಮುನ್ಸೂಚನೆ - Rainfall in July

ETV Bharat Logo

Copyright © 2024 Ushodaya Enterprises Pvt. Ltd., All Rights Reserved.