ETV Bharat / state

ಪರವಾನಿಗೆ ಇಲ್ಲದೆ 74 ಗರ್ಭಪಾತ ಪ್ರಕರಣಗಳು ಪತ್ತೆ: ನೆಲಮಂಗಲದ ಆಸ್ಪತ್ರೆ ವಿರುದ್ಧ ಪ್ರಕರಣ - Nelamangala

ಪರವಾನಿಗೆ ಇಲ್ಲದೆ 74 ಗರ್ಭಪಾತ ಪ್ರಕರಣಗಳು ಪತ್ತೆಯಾಗಿದ್ದು, ನೆಲಮಂಗಲದ ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲಾಗಿದೆ. ಆದ್ರೆ ಈ ಕುರಿತು ಆಸ್ಪತ್ರೆಯ ಮಾಲೀಕನೂ ಆಗಿರುವ ವೈದ್ಯನಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.

unlicensed abortion  Case against hospital  Nelamangala  doctor absconding
ಪರವಾನಿಗೆ ಇಲ್ಲದೆ 74 ಗರ್ಭಪಾತ ಪ್ರಕರಣಗಳು ಪತ್ತೆ: ನೆಲಮಂಗಲದ ಆಸ್ಪತ್ರೆ ವಿರುದ್ಧ ಪ್ರಕರಣ, ವೈದ್ಯ ನಾಪತ್ತೆ
author img

By ETV Bharat Karnataka Team

Published : Mar 6, 2024, 10:29 PM IST

Updated : Mar 6, 2024, 10:36 PM IST

ನೆಲಮಂಗಲ (ಬೆಂಗಳೂರು) : MTP ಕಾಯ್ದೆಯಡಿ ಪರವಾನಿಗೆ ಪಡೆಯದೆ 74 ಗರ್ಭಪಾತ ಪ್ರಕರಣಗಳು ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದ್ದು, ಇದು ವೈದ್ಯಕೀಯ ಗರ್ಭಪಾತ ಕಾಯ್ದೆ 1971 ರ ನಿಯಮದ ಕಲಂ.4 ರ ಉಪ ಕಲಂ (b) ಯ ಉಲ್ಲಂಘನೆಯಾಗಿರುತ್ತದೆ. ಈ ಹಿನ್ನೆಲೆ ಆಸ್ಪತ್ರೆಯ ವಿರುದ್ಧ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಆರ್.ಮಂಜುನಾಥ್ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಆದರೆ, ಈ ಕುರಿತಂತೆ ಆಸ್ಪತ್ರೆಯ ಮಾಲೀಕರೂ ಆಗಿರುವ ವೈದ್ಯನಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.

ನೆಲಮಂಗಲ ಪಟ್ಟಣದ ಬಿ.ಹೆಚ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆ ವಿರುದ್ಧ ಸಾರ್ವಜನಿಕರು ಡಿಹೆಚ್​ಒಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಆರ್.ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಆಸ್ಪತ್ರೆಯಲ್ಲಿ ಕಾನೂನುಬಾಹಿರವಾಗಿ ಗರ್ಭಪಾತಗಳನ್ನು ನಡೆಸಿರುವುದು ಬೆಳಕಿಗೆ ಬಂದಿದೆ. ಆಸ್ಪತ್ರೆ ಕೆ.ಪಿ.ಎಂ.ಇ ಪ್ರಾಧಿಕಾರದಲ್ಲಿ ನೋಂದಣಿಯಾಗಿದೆ. ಆದರೆ ಆಸ್ಪತ್ರೆ ವೈದ್ಯ MTP ಕಾಯ್ದೆಯಡಿ ಪರವಾನಿಗೆ ಪಡೆಯದೆ 2021ನೇ ಇಸವಿಯಿಂದ ಇಲ್ಲಿಯವರೆಗೂ 74 ಗರ್ಭಪಾತಗಳನ್ನ ನಡೆಸಿರುತ್ತಾರೆ. ಇದು ವೈದ್ಯಕೀಯ ಗರ್ಭಪಾತ ಕಾಯ್ದೆ 1971 ರ ನಿಯಮದ ಕಲಂ.4 ರ ಉಪ ಕಲಂ (b) ಯ ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಷ್ಟೇ ಅಲ್ಲ, ಆಸ್ಪತ್ರೆಯಲ್ಲಿ ನಡೆಸಿದ ಗರ್ಭಪಾತಗಳಿಗೆ ಸಂಬಂಧಿಸಿದಂತೆ MTP ಆಡ್ಮಿಷನ್ ರಿಜಿಷ್ಟರ್ ಅನ್ನು ನಿರ್ವಹಣೆ ಮಾಡಿರುವುದಿಲ್ಲ. ಇದು ವೈದ್ಯಕೀಯ ಗರ್ಭಪಾತ ಕಾಯ್ದೆ 1971 2003 ರ ವಿಧೇಯಕದ ನಿಯಮ 5 ರ ಉಪಕಲಂ (1), 2, (3) ಮತ್ತು ನಿಯಮ ಸ್ಪಷ್ಟವಾಗಿ ಉಲ್ಲಂಘನೆಯಾಗಿರುತ್ತದೆ. ಗರ್ಭಪಾತಗಳಿಗೆ ಸಂಬಂಧಿಸಿದ ಅಲ್ಮಾಸೌಂಡ್ ರಿಪೋರ್ಟ್‌ಗಳು ಲಭ್ಯ ಇರುವುದಿಲ್ಲ. ಆಸ್ಪತ್ರೆಯಲ್ಲಿನ ಗರ್ಭಪಾತಗಳ ಮಾಸಿಕ ವಿವರಗಳನ್ನು ಜಿಲ್ಲಾ ಪ್ರಾಧಿಕಾರಕ್ಕೆ ಸಲ್ಲಿಸಿರುವುದಕ್ಕೆ ದಾಖಲೆಗಳು ಇರುವುದಿಲ್ಲ. ಹೀಗಾಗಿ ವೈದ್ಯಕೀಯ ಗರ್ಭಪಾತ ಕಾಯ್ದೆ 1971 ರ ನಿಯಮಗಳನ್ನು ಉಲ್ಲಂಘಿಸಿರುವ ಹಿನ್ನೆಲೆ MTP ಕಾಯ್ದೆಯನ್ವಯ ಆಸ್ಪತ್ರೆಯ ಮಾಲೀಕರ ಕಂ ವೈದ್ಯ ವಿರುದ್ಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಡಿಹೆಚ್​ಒ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಓದಿ: ಕೆಫೆ ಸ್ಫೋಟ ಪ್ರಕರಣದಲ್ಲಿ ಮಹತ್ವದ ಸುಳಿವು ಸಿಕ್ಕಿದೆ: ಗೃಹ ಸಚಿವ ಜಿ.ಪರಮೇಶ್ವರ್

Last Updated : Mar 6, 2024, 10:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.