ETV Bharat / state

ಬೆಳಗಾವಿ ಅಧಿವೇಶನ ಭದ್ರತೆಗೆ 6 ಸಾವಿರ ಪೊಲೀಸ್​ ಸಿಬ್ಬಂದಿ ನಿಯೋಜನೆ: ಎಡಿಜಿಪಿ‌ ಹಿತೇಂದ್ರ

ಬೆಳಗಾವಿ ಅಧಿವೇಶನ ಬಂದೋಬಸ್ತ್​ಗೆ 8 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿ 6 ಸಾವಿರ ಸಿಬ್ಬಂದಿಗಳನ್ನು ನಿಯೋಜಿಸಿದ್ದೇವೆ ಎಂದು ಎಡಿಜಿಪಿ‌ ಹಿತೇಂದ್ರ ತಿಳಿಸಿದ್ದಾರೆ.

ಎಡಿಜಿಪಿ‌ ಹಿತೇಂದ್ರ
ಎಡಿಜಿಪಿ‌ ಹಿತೇಂದ್ರ (ETV Bharat)
author img

By ETV Bharat Karnataka Team

Published : 2 hours ago

Updated : 1 hours ago

ಬೆಳಗಾವಿ: ಡಿ.9 ರಿಂದ 19ರವರೆಗೆ ಚಳಿಗಾಲ ಅಧಿವೇಶನದಲ್ಲಿ ಸಾಕಷ್ಟು ಪ್ರತಿಭಟನೆಗಳು ಆಗುತ್ತವೆ. ಗಣ್ಯರು, ಜನಪ್ರತಿನಿಧಿಗಳು ಭೇಟಿ ನೀಡುತ್ತಾರೆ. ಸಂಚಾರ ನಿರ್ವಹಣೆ ಮಾಡಬೇಕಾಗುತ್ತದೆ. ಹಾಗಾಗಿ, ಈ ಎಲ್ಲದರ ಸಿದ್ಧತೆ ಹೇಗೆ ನಡೆಯುತ್ತದೆ ಎಂದು ಪರೀಶಿಲನೆಗೆ ಬಂದಿದ್ದೇನೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಆರ್. ತಿಳಿಸಿದರು.

ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆಗೂ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿವೇಶನ ಬಂದೋಬಸ್ತ್​ಗೆ 8 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿ 6 ಸಾವಿರ ಸಿಬ್ಬಂದಿಗಳನ್ನು ನಿಯೋಜಿಸಿದ್ದೇವೆ. ಭದ್ರತೆಗೆ ನಿಯೋಜನೆಗೊಂಡಿರುವ ಸಿಬ್ಬಂದಿಗಳಿಗೆ ಊಟ, ವಸತಿ ಸೌಕರ್ಯಕ್ಕಾಗಿ ಟೆಂಟ್ ಸಿಟಿ ನಿರ್ಮಿಸಲಾಗುತ್ತಿದೆ. ಈ ಬಾರಿ ಹೆಚ್ಚಿನ ಚಳಿ ಇದೆ. ಭದ್ರತೆಗೆ ಬರುವ ಸಿಬ್ಬಂದಿ ಚಳಿಯಿಂದ ರಕ್ಷಣೆ ಪಡೆಯಲು ಉಲ್ಲನ್​ ಹೊದಿಕೆ ತೆಗೆದುಕೊಂಡು ಬರುವಂತೆ ಹೇಳಿದ್ದೇವೆ. ಒಂದು ವೇಳೆ ತೆಗೆದುಕೊಂಡು ಬಾರದ ಸಿಬ್ಬಂದಿಗಳಿಗೆ ನಾವೇ ವ್ಯವಸ್ಥೆ ಮಾಡುತ್ತೇವೆ ಎಂದರು.

ಎಡಿಜಿಪಿ‌ ಹಿತೇಂದ್ರ (ETV Bharat)

ಬೆಳಗಾವಿಯಲ್ಲಿ ಸಿಬ್ಬಂದಿ ಕೊರತೆ ವಿಚಾರವಾಗಿ ಪ್ರತಿಕ್ರಿಯಿಸಿ, ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ನೇಮಕಾತಿ ಆದೇಶ ಕೊಡುವುದಷ್ಟೇ ಬಾಕಿ ಇದೆ. ಖಾಲಿ ಇರುವ ಮತ್ತು ಹೆಚ್ಚುವರಿ ಹುದ್ದೆಗಳ ಭರ್ತಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಮುಂದಿನ‌ ದಿನಗಳಲ್ಲಿ ಸಿಬ್ಬಂದಿ ಕೊರತೆ ನೀಗಿಸಲಾಗುವುದು ಎಂದು ಭರವಸೆ ನೀಡಿದರು.

ಎಂಇಎಸ್ ಮಹಾಮೇಳಾವ್ ಕುರಿತು ಮಾತನಾಡಿ, ಕಳೆದ ಎರಡು ವರ್ಷಳಿಂದ ಮಹಾಮೇಳಾವ್​ಗೆ ಅವಕಾಶ ಕೊಟ್ಟಿಲ್ಲ. ಹಾಗಾಗಿ, ಕಳೆದ ವರ್ಷ ಮಹಾರಾಷ್ಟ್ರ ಗಡಿಯಲ್ಲಿ ಹೋಗಿ ಪ್ರತಿಭಟಿಸಿದ್ದಾರೆ. ಈ ಬಾರಿಯೂ ಅವರಿಗೆ ಅವಕಾಶ ಕೊಡುವುದಿಲ್ಲ. ಆದರೂ ಮಹಾಮೇಳಾವ್ ಮಾಡಿದರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಈ ವೇಳೆ ಉತ್ತರ ವಲಯ ಐಜಿಪಿ ವಿಕಾಸಕುಮಾರ ವಿಕಾಸ್​, ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಇದ್ದರು.

ಇದನ್ನೂ ಓದಿ: ಪೌರ ಕಾರ್ಮಿಕ ಕಲಾವಿದನ ಕೈಚಳಕ: ಕುಂದಾನಗರಿ ಅಂದ ಚೆಂದ ಹೆಚ್ಚಿಸುತ್ತಿರುವ ಬಣ್ಣ ಬಣ್ಣದ ಚಿತ್ರಗಳು

Last Updated : 1 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.