ETV Bharat / state

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ: ಎಸ್‌ಐಟಿ ತನಿಖೆ ಚುರುಕು; 6 ಕೆ.ಜಿ. ಚಿನ್ನ, ₹2.50 ಕೋಟಿ ನಗದು ಜಪ್ತಿ - Valmiki Corporation Scam - VALMIKI CORPORATION SCAM

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ಚುರುಕುಗೊಳಿಸಿದೆ. ಎಸ್​ಐಟಿ ಶನಿವಾರ ಹೈದರಾಬಾದ್‌ನ ಎರಡು ಕಡೆ ಶೋಧ ನಡೆಸಿ 6 ಕೆ.ಜಿ ಚಿನ್ನ ಮತ್ತು 2.50 ಕೋಟಿ ನಗದು ಜಪ್ತಿ ಮಾಡಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ (ETV Bharat)
author img

By ETV Bharat Karnataka Team

Published : Jul 27, 2024, 10:49 PM IST

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ಚುರುಕುಗೊಳಿಸಿದೆ. ಶನಿವಾರ ಹೈದರಾಬಾದ್‌ನ ಎರಡು ಕಡೆ ಶೋಧ ನಡೆಸಿದ ಎಸ್ಐಟಿ ಅಧಿಕಾರಿಗಳು, ಹೈದರಾಬಾದ್​ನ ಫಸ್ಟ್‌ ಫೈನಾನ್ಸ್‌ ಕ್ರೆಡಿಟ್‌ ಕೋ–ಆಪರೇಟಿವ್‌ ಸೊಸೈಟಿ ಅಧ್ಯಕ್ಷನಾಗಿರುವ ಬಂಧಿತ ಆರೋಪಿ ಸತ್ಯನಾರಾಯಣ ವರ್ಮಾನಿಂದ 5 ಕೆ.ಜಿ ಹಾಗೂ ಕಾಕಿ ಶ್ರೀನಿವಾಸ್‌ರಿಂದ 1 ಕೆ.ಜಿ ಸಹಿತ ಒಟ್ಟು 6 ಕೆ.ಜಿ ಚಿನ್ನವನ್ನ ಜಪ್ತಿ ಮಾಡಿದ್ದಾರೆ. ಜೊತೆಗೆ ಬಿಲ್ಡರೊಬ್ಬರಿಂದ 2.50 ಕೋಟಿ ನಗದನ್ನು ಸಹ ಜಪ್ತಿ ಮಾಡಲಾಗಿದೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.

ಈ ಮೂಲಕ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳ ತಂಡ ಕಳೆದ ಎರಡು ದಿನಗಳಲ್ಲಿ 12 ಕೋಟಿ ರೂ ಮೌಲ್ಯದ ಒಟ್ಟು 16 ಕೆ.ಜಿ ಚಿನ್ನ ಜಪ್ತಿ ಮಾಡಿದಂತಾಗಿದೆ.

ನಿನ್ನೆ(ಶುಕ್ರವಾರ) ಈ ಹಗರಣದ ಪ್ರಮುಖ ಆರೋಪಿ ಸತ್ಯನಾರಾಯಣ ವರ್ಮಾ ಮನೆಯಲ್ಲಿ ಬರೋಬ್ಬರಿ 10 ಕೆ.ಜಿ. ಚಿನ್ನದ ಬಿಸ್ಕೆಟ್​ಗಳನ್ನು ಎಸ್​ಐಟಿ ವಶ ಪಡಿಸಿಕೊಂಡಿತ್ತು.

ಇದನ್ನೂ ಓದಿ:ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣದ ಅವ್ಯವಹಾರ ನಡೆದಿರುವುದು ಸತ್ಯ: ಸಚಿವ ರಾಜಣ್ಣ - Valmiki Corporation Case

ETV Bharat Logo

Copyright © 2025 Ushodaya Enterprises Pvt. Ltd., All Rights Reserved.