ETV Bharat / state

ತುಮಕೂರು ನಗರದಾದ್ಯಂತ 413 ಹದ್ದಿನಕಣ್ಣಿನ ಕ್ಯಾಮರಾ: 100ಕ್ಕೂ ಹೆಚ್ಚು ಕಳ್ಳತನವಾಗಿದ್ದ ದ್ವಿಚಕ್ರ ವಾಹನಗಳು ಪತ್ತೆ - ACTION FOR WOMEN SAFETY

ನಗರದಲ್ಲಿ ಅಳವಡಿಸಿರುವ ಹದ್ದಿನ ಕಣ್ಣಿನ ಕ್ಯಾಮರಾಗಳಿಂದ ಮಹಿಳೆಯರ ಸುರಕ್ಷತೆ ಮಾತ್ರವಲ್ಲದೇ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪರಿಹರಿಸುವುದು ಕೂಡ ಸುಲಭವಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಶೋಕ್‌ ತಿಳಿಸಿದ್ದಾರೆ.

eagle eye cameras across Tumakuru city
ತುಮಕೂರು ನಗರದಲ್ಲಿ ಅಳವಡಿಸಿರುವ ಹದ್ದಿನಕಣ್ಣಿನ ಕ್ಯಾಮರಾ (ETV Bharat)
author img

By ETV Bharat Karnataka Team

Published : 3 hours ago

Updated : 20 minutes ago

ತುಮಕೂರು: ನಗರದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಮತ್ತು ಸಾವಜನಿಕ ಸ್ಥಳದಲ್ಲಿ ಕಿರುಕುಳಕ್ಕೆ ಒಳಗಾಗುವಂತಹ ಸಂದರ್ಭದಲ್ಲಿ ತಕ್ಷಣ ಅವರ ನೆರವಿಗೆ ಪೊಲೀಸರು ಧಾವಿಸುವಂತಾಗಲಿ ಎಂಬ ದೃಷ್ಟಿಯಿಂದ ಅಲ್ಲಲ್ಲಿ ತುರ್ತು ಸಹಾಯವಾಣಿ ವ್ಯವಸ್ಥೆ ಅಳವಡಿಸಲಾಗಿದೆ. ತುಮಕೂರು ನಗರದ ಉದ್ಯಾನವನ, ಜನರು ಜಾಸ್ತಿ ಓಡಾಡದಂತಹ ಪ್ರದೇಶ, ಅಸುರಕ್ಷಿತ ಪ್ರದೇಶಗಳಲ್ಲಿ ಸೇರಿದಂತೆ 413 ಕಡೆ ಇಂತಹ ಕ್ಯಾಮರಾಗಳನ್ನು ವ್ಯವಸ್ಥೆ ಮಾಡಲಾಗಿದೆ.

ಮಹಾನಗರದ ಪಾಲಿಕೆ ಆವರಣದಲ್ಲಿ ಇವುಗಳನ್ನು ನಿಯಂತ್ರಿಸುವ ಕೊಠಡಿಯನ್ನು ತೆರೆಯಲಾಗಿದೆ. ದಿನದ 24 ಗಂಟೆ ಈ ಕಂಟ್ರೋಲ್‌ ರೂಂ ಕೆಲಸ ನಿರ್ವಹಿಸಲಿದೆ. ಮಧ್ಯರಾತ್ರಿ ಹೊತ್ತಲ್ಲೂ ಇದನ್ನು ಟೆಸ್ಟ್‌ ಮಾಡಲಾಗಿದೆ. 41 ತುರ್ತು ಸಹಾಯವಾಣಿ ಅಳಡಿಸಲಾಗಿದ್ದು, ಭೀತಿಯ ವಾತಾವರಣ ಇದ್ದರೆ, ಈ ಬಟನ್‌ ಒತ್ತಿ ಕಂಟ್ರೋಲ್‌ ರೂಂ ಸಹಾಯ ಕೇಳಬಹುದಾಗಿದೆ. ಅಲ್ಲದೇ ಸ್ಥಳದಲ್ಲಿನ ಅಸುರಕ್ಷತೆಯ ಕುರಿತು ವಿವರಿಸಿದರೆ ಕಂಟ್ರೋಲ್‌ ರೂಂ ಸಿಬ್ಬಂದಿ ತಕ್ಷಣ ಸ್ಪಂದಿಸಲಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಶೋಕ್‌ ಪ್ರತಿಕ್ರಿಯೆ (ETV Bharat)

ವಿಡಿಯೋ ಸಾಕ್ಷ್ಯವಾಗಿ ಬಳಕೆ: "ಈ ಕ್ಯಾಮರಾಗಳು ಸಂಚಾರಿ ಪೊಲೀಸ್‌ ಇಲಾಖೆಗೂ ಸಹಾಯಕವಾಗಿದ್ದು, ಟ್ರಾಫಿಕ್‌ ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ಈ ಕ್ಯಾಮರಾಗಳ ವಿಡಿಯೋಗಳನ್ನೇ ಸಾಕ್ಷಿಯಾಗಿ ಬಳಸುತ್ತಿದ್ದಾರೆ. ಸಂಚಾರಿ ನಿಯಮ ಉಲ್ಲಂಘನೆಯಾದಾಗ ವಾಹನಗಳ ನಂಬರ್‌ ಪ್ಲೇಟ್​ಗಳನ್ನು ಕ್ಯಾಮರಾ ಮೂಲಕ ಸುಲಭವಾಗಿ ಗುರುತಿಸಬಹುದಾಗಿದೆ. ಇವುಗಳು ಅನೇಕ ಕ್ರಿಮಿನಲ್‌ ಪ್ರಕರಣಗಳ ಗುರುತು ಪತ್ತೆ ಮಾಡಲು ಸಹಕಾರಿಯಾಗಲಿದೆ. ಅಲ್ಲದೇ ಅಪಘಾತಗಳು ನಡೆದ ವೇಳೆ ತಕ್ಷಣ ಪೊಲೀಸರಿಗೆ ಸ್ಪಂದಿಸಲು ಕ್ಯಾಮರಾಗಳು ಸಹಕಾರಿಯಾಗಿವೆ" ಎನ್ನುತ್ತಾರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಶೋಕ್‌ ತಿಳಿಸಿದ್ದಾರೆ.

ಬೈಕ್‌ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಈ ಕ್ಯಾಮೆರಾಗಳ ಸಹಕಾರ: "ಮಹಿಳೆಯರ ಸುರಕ್ಷತೆ, ರಸ್ತೆ ಸುರಕ್ಷತೆ, ಸಾರ್ವಜನಿಕ ಕಾಯಕ್ರಮಗಳು ನಡೆಯುವ ವೇಳೆ ಶಾಂತಿಯುತ ವಾತಾವರಣ ನಿಮಾಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಸಹಕಾರಿಯಾಗಲಿವೆ. ಬೈಕ್‌ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಈ ಕ್ಯಾಮೆರಾಗಳು ಸಾಕಷ್ಟು ಸಹಕಾರಿಯಾಗಿವೆ. ಒಂದು ವರ್ಷದಲ್ಲಿ ನೂರಕ್ಕೂ ಹೆಚ್ಚು ಕಳ್ಳತನವಾಗಿದ್ದ ಬೈಕ್​ಗಳನ್ನು ಪತ್ತೆ ಮಾಡಲಾಗಿದೆ. ಇತ್ತೀಚೆಗೆ ಚಿನ್ನದಂಗಡಿ ದರೋಡೆ ಪ್ರಕರಣದ ಚೋರರನ್ನು ಸಹ ಈ ಕ್ಯಾಮೆರಾಗಳ ಸಹಕಾರದಿಂದ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ" ಎಂದು ತಿಳಿಸಿದರು.

"ಇತ್ತೀಚೆಗೆ ತುರ್ತು ಸಹಾಯವಾಣಿಗಳನ್ನು ಅಳವಡಿಸಲಾಗಿದ್ದು, ಇವುಗಳ ಬಗ್ಗೆ ಜನರಿಗೆ ಅರಿವು ಬಂದಿಲ್ಲ. ಅದರ ಕುರಿತು ಪ್ರಚಾರದ ಅಗತ್ಯವಿದೆ. ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿದ್ರೆ ಜನರಿಗೆ ತಿಳಿಯಲಿದೆ. ಸಮಾಜಘಾತುಕ ಚಟುವಟಿಕೆಗಳಿಗೆ ಇನ್ನಷ್ಟು ಕಡಿವಾಣ ಹಾಕಬಹುದಾಗಿದೆ" ಎಂದು ವಕೀಲ ರಾಜೇಂದ್ರ ಪ್ರಸಾದ್ ಹೇಳಿದರು.

"ಸ್ಮಾರ್ಟ್​ ಸಿಟಿ ವತಿಯಿಂದ ಕ್ಯಾಮರಾಗಳನ್ನು ಅಳವಡಿಸಿರುವುದು ಉತ್ತಮ ಕೆಲಸವಾಗಿದೆ. ಅಲ್ಲದೆ ಸಾರ್ವಜನಿಕ ಹಣವನ್ನು ಬಳಕೆ ಮಾಡಿರುವುದು ಸ್ವಾಗತಾರ್ಹ. ಈ ವ್ಯವಸ್ಥೆಯ ಬಗ್ಗೆ ಎಲ್ಲರಿಗೂ ಗೊತ್ತಾಗಬೇಕಿದೆ" ಎಂದು ವಕೀಲ ದಯಾನಂದ್ ಸಾಗರ್ ತಿಳಿಸಿದರು.

ಇದನ್ನೂ ಓದಿ: ನನೆಗುದಿಗೆ ಬಿದ್ದ ಹುಬ್ಬಳ್ಳಿ ಸ್ಮಾರ್ಟ್​ ಸಿಟಿ ಮಲ್ಟಿ - ಲೆವೆಲ್ ಪಾರ್ಕಿಂಗ್ ಕಾಂಪ್ಲೆಕ್ಸ್: ಗುತ್ತಿಗೆದಾರನಿಗೆ ದಂಡ

Last Updated : 20 minutes ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.