ETV Bharat / state

ಉಡುಪಿ: ಭಾರಿ ಗಾಳಿ - ಮಳೆಯಿಂದ ಅವಾಂತರ, ಒಂದೇ ದಿನ ₹40 ಲಕ್ಷದಷ್ಟು ಆಸ್ತಿ - ಪಾಸ್ತಿಗೆ ಹಾನಿ - heavy rain in udupi

ಉಡುಪಿ ಜಿಲ್ಲಾದ್ಯಂತ ಭಾರೀ ಮಳೆ ಮುಂದುವರೆದಿದ್ದು, ಮನೆ ಸೇರಿದಂತೆ ಆಸ್ತಿ - ಪಾಸ್ತಿಗೆ ಹಾನಿಯಾಗಿದೆ. ಒಂದೇ ದಿನದಲ್ಲಿ ನೂರಕ್ಕೂ ಅಧಿಕ ಹಾನಿ ಪ್ರಕರಣಗಳು ವರದಿಯಾಗಿದ್ದು, 40 ಲಕ್ಷ ರೂ.ಗಳಿಗೂ ಅಧಿಕ ನಷ್ಟವಾಗಿದೆ.

ಭಾರೀ ಗಾಳಿ - ಮಳೆಯಿಂದ ಅವಾಂತರ
ಭಾರೀ ಗಾಳಿ - ಮಳೆಯಿಂದ ಅವಾಂತರ (ETV Bharat)
author img

By ETV Bharat Karnataka Team

Published : Jul 27, 2024, 9:12 PM IST

ಉಡುಪಿ: ಜಿಲ್ಲಾದ್ಯಂತ ಭಾರೀ ಮಳೆ ಮುಂದುವರೆದಿದ್ದು, ಮನೆ ಸೇರಿದಂತೆ ಆಸ್ತಿ - ಪಾಸ್ತಿಗೆ ಹಾನಿಯಾಗಿದೆ. ಒಂದೇ ದಿನದಲ್ಲಿ ನೂರಕ್ಕೂ ಅಧಿಕ ಹಾನಿ ಪ್ರಕರಣಗಳು ವರದಿಯಾಗಿದ್ದು, 40 ಲಕ್ಷ ರೂ.ಗಳಿಗೂ ಅಧಿಕ ನಷ್ಟವಾಗಿದೆ. ಜಿಲ್ಲಾಧಿಕಾರಿ ಕಚೇರಿಯ ವಿಪತ್ತು ನಿರ್ವಹಣಾ ಕಚೇರಿಯಿಂದ ಬಂದಿರುವ ಮಾಹಿತಿಯಂತೆ ಇಂದು ಜಿಲ್ಲಾದ್ಯಂತ ಒಟ್ಟು 75ಕ್ಕೂ ಅಧಿಕ ಮನೆಗಳಿಗೆ ಹಾನಿಯುಂಟಾಗಿ, ಸುಮಾರು 35 ಲಕ್ಷ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ.

ಇನ್ನು ಕುಂದಾಪುರದಲ್ಲಿ ಏಳು ತೋಟಗಾರಿಕಾ ಬೆಳೆಗಳಿಗೆ ಹಾನಿಯಾದ ಪ್ರಕರಣ ವರದಿಯಾಗಿದ್ದು, ಇದರಿಂದ ಸುಮಾರು ಮೂರು ಲಕ್ಷ ರೂ. ನಷ್ಟವಾಗಿದೆ. ಅದೇ ರೀತಿ ಜಾನುವಾರು ಕೊಟ್ಟಿಗೆ ಮಳೆ ಹಾಗೂ ಗಾಳಿಯಿಂದ ಹಾನಿಯಾದ 16 ಪ್ರಕರಣಗಳು ದಾಖಲಾಗಿದ್ದು, ಇದರಿಂದ ಎರಡೂವರೆ ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಕುಂದಾಪುರ ಹಾಗೂ ಬೈಂದೂರು ತಾಲೂಕುಗಳಲ್ಲಿ ಅತ್ಯಧಿಕ ಹಾನಿಯ ಪ್ರಕರಣಗಳು ವರದಿಯಾಗಿವೆ. ಕುಂದಾಪುರದಲ್ಲಿ 31ರಷ್ಟು ಮನೆ ಹಾನಿ ಪ್ರಕರಣ ದಾಖಲಾಗಿದ್ದು, ಇದರಿಂದ 10 ಲಕ್ಷ ರೂ., ಏಳು ತೋಟಗಾರಿಕಾ ಬೆಳೆ ನಾಶ ಪ್ರಕರಣದಿಂದ ಮೂರು ಲಕ್ಷ ರೂ ಹಾಗೂ ಏಳು ಜಾನುವಾರು ಕೊಟ್ಟಿಗೆ ನಾಶ ಪ್ರಕರಣಗಳಲ್ಲಿ 75 ಸಾವಿರ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ.

ಬೈಂದೂರು ತಾಲೂಕಿನಲ್ಲಿ 33 ಮನೆ ಹಾನಿ ಪ್ರಕರಣಗಳು ದಾಖಲಾಗಿವೆ. ಇದರಿಂದ ಒಟ್ಟು 15 ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ. ಅಲ್ಲದೇ ಬೈಂದೂರಿನಲ್ಲಿ ಎಂಟು ಕೊಟ್ಟಿಗೆ ಭಾಗಶಃ ಅಥವಾ ಸಂಪೂರ್ಣ ಹಾನಿಯ ಪ್ರಕರಣಗಳಿದ್ದು ಸುಮಾರು ಎರಡು ಲಕ್ಷ ರೂ.ಗಳ ನಷ್ಟ ಸಂಭವಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಭಾರೀ ಗಾಳಿಗೆ ಕೃಷ್ಣಮಠದ ಬೃಂದಾವನ ಕಟ್ಟಡಕ್ಕೆ ಹಾನಿ: ಭಾರೀ ಗಾಳಿಗೆ ಉಡುಪಿ ಶ್ರೀ ಕೃಷ್ಣಮಠದ ಅಶ್ವತ್ಥಕಟ್ಟೆಯ ಬೃಂದಾವನ ಕಟ್ಟಡದ ಶೀಟುಗಳು ಹಾರಿ ಹೋಗಿವೆ. ಅಲ್ಲದೇ, ರಾಜಾಂಗಣದ ಬಳಿಯ ಹೋಟೆಲ್​ವೊಂದರ ಮೇಲ್ಚಾವಣಿ ಕೂಡ ಗಾಳಿಯ ರಭಸಕ್ಕೆ ಮುರಿದುಬಿದ್ದಿದೆ. ಇದರಿಂದ ಸಾಕಷ್ಟು ಹಾನಿ ಸಂಭವಿಸಿದೆ. ಹಿರಿಯಡ್ಕ ಸಮೀಪದ ಕುಕ್ಕೆಹಳ್ಳಿ ಬಜೆ ಬಳಿ ಅಮ್ಮಣ್ಣಿ ಶೇರಿಗಾರ್ತಿ ಎಂಬವರ ಮನೆ ಸಮೀಪದ ತೆಂಗಿನಮರ ಬಿದ್ದು ಮನೆ ಹಾನಿಯಾಗಿದೆ ಹಾಗೂ ಮನೆ ಬಳಿ ನಿಲ್ಲಿಸಿದ ಆಟೋ ರಿಕ್ಷಾಗಳು ಸಂಪೂರ್ಣ ಜಖಂಗೊಂಡಿವೆ.

ವಿದ್ಯುತ್ ಕಂಪ್ರೆಸರ್ ಯಂತ್ರದಿಂದ ವಿದ್ಯುತ್ ಹರಿದು ಪೇಂಟರ್ ಸಾವು: ಲಾರಿ ಚಾಸಿಸ್ ಪೇಂಟ್ ಮಾಡುವ ವೇಳೆ ವಿದ್ಯುತ್ ಶಾಕ್ ತಗುಲಿ ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೈಂದೂರು ತಾಲೂಕಿನ ನಾವುಂದದಲ್ಲಿ ಶುಕ್ರವಾರ ನಡೆದಿದೆ. ಮೃತ ಪೈಂಟರ್ ಗಂಗೊಳ್ಳಿ ನಿವಾಸಿ ಸಂದೀಪ್ ( 40 ) ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಬೈಂದೂರು ಸಿಪಿಐ ಸವಿತ್ರ ತೇಜ್, ಠಾಣಾಧಿಕಾರಿ ತಿಮ್ಮೇಶ್ ಹಾಗೂ ಸಿಬ್ಬಂದಿ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಿಲ್ಲಾಡಳಿತದಿಂದ ಮೀನುಗಾರಿಕೆ ತೆರಳದಂತೆ ಎಚ್ಚರಿಕೆ: ಜಿಲ್ಲೆಯಲ್ಲಿ ಇನ್ನೂ ಎರಡು ದಿನಗಳ ಕಾಲ ಆರೆಂಜ್ ಅಲರ್ಟ್ ಅನ್ನು ಹವಾಮಾನ ಇಲಾಖೆ ನೀಡಿದೆ. ಜು. 27 ಹಾಗೂ 28ರಂದು ಗಂಟೆಗೆ 45 ರಿಂದ 55ಕಿ.ಮೀ. ವೇಗದ ಗಾಳಿ ಬೀಸಲಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರೆದ ಮಳೆ ಅಬ್ಬರ: 2 ದಿನ ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಣೆ - Rain Alert In Coastal And Malnad

ETV Bharat Logo

Copyright © 2024 Ushodaya Enterprises Pvt. Ltd., All Rights Reserved.