ಕಾರವಾರ(ಉತ್ತರ ಕನ್ನಡ): ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾದವರಿಗಾಗಿ ದೆಹಲಿಯ ಕ್ವಿಕ್ ಪೇ ಪ್ರೈವೇಟ್ ಲಿಮಿಟೆಡ್‌ನ ಅತ್ಯಾಧುನಿಕ ಡ್ರೋನ್ ತಂತ್ರಜ್ಞಾನದೊಂದಿಗೆ ನದಿಯಲ್ಲಿ ಹುಡುಕಾಟ ನಡೆಸಿದೆ. ಸದ್ಯ ಕಾರ್ಯಾಚರಣೆಯ ಹಾಗೂ ನದಿಯಲ್ಲಿ ಪತ್ತೆ ಮಾಡಿದ ಲೋಹ ರೂಪದ ವಸ್ತುಗಳ ಬಗ್ಗೆ ಅಧಿಕೃತ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಕೆ ಮಾಡಿದೆ.
ಕ್ವಿಕ್‌ಪೇ ಪ್ರೈವೇಟ್ ಲಿಮಿಟೆಡ್‌ನ ಡ್ರೋನ್ ಆಧಾರಿತ ಇಂಟೆಲಿಜೆಂಟ್ ಬರೀಡ್ ಆಬ್ಜೆಕ್ಟ್ ಡಿಟೆಕ್ಷನ್ ಸಿಸ್ಟಮ್ (ಡಿಐಬಿಒಡಿಎಸ್) ಶಿರೂರಿನ ಭೂಕುಸಿತ ಪ್ರದೇಶದಲ್ಲಿ ಶೋಧ ಮತ್ತು ಪತ್ತೆ ಕಾರ್ಯಾಚರಣೆ ನಡೆಸಿ ಗಂಗಾವಳಿ ನದಿಯಲ್ಲಿ ಟ್ರಕ್ ಅಥವಾ ಲೋಹದ ವಸ್ತುಗಳು ಇರಬಹುದಾದ ಸಂಭಾವ್ಯ ನಾಲ್ಕು ಬಿಂದುಗಳನ್ನು ಗುರುತಿಸಿದೆ.
ದೋಣಿ ಆಧಾರಿತ IBODS, ಸೋನಾರ್, ಥರ್ಮಲ್ ಇಮೇಜರ್, ಮ್ಯಾಗ್ನೆಟ್ ಲೈನ್‌ಗಳು ಮತ್ತು DIBODS ಡೇಟಾದ ಮೂಲಕ ನಾಲ್ಕು ಸಂಪರ್ಕ ಬಿಂದುಗಳನ್ನು (CP) ಗುರುತಿಸಲಾಗಿದೆ. ಈ ಪೈಕಿ ಮೊದಲನೇ ಬಿಂದುವಿನಲ್ಲ CP4 ಟ್ರಕ್‌ನ ರೂಪ ಮತ್ತು ಅಂಶಕ್ಕೆ ಹತ್ತಿರವಿರುವಂತೆ ಕಂಡು ಬರುತ್ತಿದೆ. ವಸ್ತುವು ಭೂಮಿ ಮತ್ತು ಬಂಡೆಗಳ ನಿಕ್ಷೇಪದೊಂದಿಗೆ ಓರೆಯಾದ ರಚನೆಯಲ್ಲಿ ನೀರಿನ ಆಳದಲ್ಲಿದೆ. ಕ್ಯಾಬಿನ್ ಭಾಗಶಃ ಹಾನಿಯಾಗಿದ್ದು ಮೇಲ್ಮುಖವಾಗಿರಬಹುದು.
ಡೈಎಲೆಕ್ಟ್ರಿಕ್ ಡೇಟಾ ಬ್ಯಾಂಕ್ ನಿರ್ಬಂಧಗಳಿಂದಾಗಿ ಮಾನವ ರೂಪದ ಉಪಸ್ಥಿತಿಯನ್ನು ಖಚಿತವಾಗಿ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಥರ್ಮಲ್ ಇಮೇಜನರಿ ಬೆಚ್ಚಗಿನ ವಸ್ತುಗಳ ಉಪಸ್ಥಿತಿ ಬಹಿರಂಗಪಡಿಸಲಿಲ್ಲ. ಇದರರ್ಥ ಮಾನವ ರೂಪದ ಅನುಪಸ್ಥಿತಿಯಿಲ್ಲ. ಈ ದುರಂತ ರಾಷ್ಟ್ರೀಯ ಹೆದ್ದಾರಿಯಿಂದ 132 ಮೀ ದೂರದಲ್ಲಿದೆ ಎಂದು ತಿಳಿಸಿದೆ.
ಎರಡನೆಯದಾಗಿ CP3, CP2, ಮತ್ತು CP1 ಆ ಕ್ರಮದಲ್ಲಿ ಕಡಿಮೆ ಸಂಭವನೀಯತೆ ಹೊಂದಿವೆ. ಇವು ಕಣ್ಮರೆಯಾದ ಇತರ ವಸ್ತುಗಳು ಇರುವಿಕೆಯ ಬಗ್ಗೆ ಮಾಹಿತಿ ನೀಡುತ್ತವೆ. ಅಧ್ಯಯನದ ಕಾರ್ಯಾಚರಣೆಗಳಲ್ಲಿ ತೊಡಗಿರುವ ಸಂಬಂಧಪಟ್ಟ ಏಜೆನ್ಸಿಗಳ ಬಳಕೆಗಾಗಿ ಮಾಹಿತಿ ಮತ್ತು ಜಿಯೋ ನಿರ್ದೇಶಾಂಕಗಳನ್ನು ಒದಗಿಸಿರುವ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ.
ಸದ್ಯ ದೆಹಲಿಯ ಕ್ವಿಕ್ ಪೇ ಪ್ರೈವೇಟ್ ಲಿಮಿಟೆಡ್‌ನ ಅತ್ಯಾಧುನಿಕ ಡ್ರೋನ್ ತಂತ್ರಜ್ಞಾನದೊಂದಿಗೆ ನೀಡಿದ ವರದಿ ಆಧರಿಸಿಯೇ ಮಲ್ಫೆಯ ಈಶ್ವರ ಅವರ ತಂಡ ಇದೀಗ ಕಾರ್ಯಾಚರಣೆಗೆ ಇಳಿದಿದೆ. ಸದ್ಯ ನದಿ ಮಧ್ಯದಲ್ಲಿ ನಿರ್ಮಾಣವಾಗಿರುವ ಮಣ್ಣಿನ ದಿಬ್ಬದಿಂದ ಗುರುತಿಸಲಾದ ಪ್ರದೇಶಗಳಿಗೆ ಮೀನುಗಾರರ ದೋಣಿ ಮೂಲಕ ತೆರಳಿ ಪತ್ತೆಕಾರ್ಯ ಮಾಡಲಾಗುತ್ತಿದೆ. ಕಾರ್ಯಾಚರಣೆಗೂ ಮುನ್ನ ಶಾಸಕ ಸತೀಶ್ ಸೈಲ್, ಎಸ್ಪಿ ನಾರಾಯಣ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.