ETV Bharat / state

2024ರ ಲೋಕಸಭಾ ಚುನಾವಣೆ: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಗೆದ್ದಿದ್ದೆಷ್ಟು? ಕಳೆದುಕೊಂಡಿದ್ದೆಷ್ಟು? - Lok Sabha Election Results 2024

ಹಿಂದಿನ ಚುನಾವಣೆಗೆ ಹೋಲಿಸಿದರೆ 2024ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮೂರು ಪಕ್ಷಗಳು ಗಳಿಸಿದ್ದೆಷ್ಟು ಮತ್ತು ಕಳೆದುಕೊಂಡಿದ್ದೆಷ್ಟು ಎಂಬ ಮಾಹಿತಿ ಇಲ್ಲಿದೆ.

ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಗೆದ್ದಿದ್ದೆಷ್ಟು? ಕಳೆದುಕೊಂಡಿದ್ದೆಷ್ಟು?
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಗೆದ್ದಿದ್ದೆಷ್ಟು? ಕಳೆದುಕೊಂಡಿದ್ದೆಷ್ಟು? (IANS (ಸಂಗ್ರಹ ಚಿತ್ರ))
author img

By ETV Bharat Karnataka Team

Published : Jun 4, 2024, 6:49 PM IST

ಬೆಂಗಳೂರು: 2024ರ ಲೋಕಸಭಾ ಚುನಾವಣೆ ರಾಜ್ಯದಲ್ಲಿ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿತ್ತು. ಅಂತಿಮವಾಗಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆದ್ದಿದೆ. ಆದರೆ ಕಳೆದ ಬಾರಿಯ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಈ ಬಾರಿ ಕಳೆದುಕೊಂಡಿದ್ದೇ ಹೆಚ್ಚು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕಳೆದ ಲೋಕಸಭಾ ಚುನಾವಣೆಗಿಂತ ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಸೀಟ್​ಗಳನ್ನು ಗೆದ್ದು ತೃಪ್ತಿಪಟ್ಟಿವೆ.

2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 28 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಅಂಬರೀಷ್ ಪಕ್ಷೇತರ ಅಭ್ಯರ್ಥಿಯಾಗಿ ಜಯಗಳಿಸಿ ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿದ್ದರು.

ಈ ಬಾರಿಯ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ ಭಾರತೀಯ ಜನತಾ ಪಕ್ಷ 17 ಕ್ಷೇತ್ರಗಳಲ್ಲಿ ಗೆದ್ದು, ಎಂಟು ಕ್ಷೇತ್ರಗಳನ್ನು ಕಳೆದುಕೊಂಡಿದೆ. ಎನ್‌ಡಿಎ ಮೈತ್ರಿಕೂಟದ ಲೆಕ್ಕಾಚಾರದ ಪ್ರಕಾರ ಬಿಜೆಪಿ ಮತ್ತು ಜೆಡಿಎಸ್ 19 ಕ್ಷೇತ್ರಗಳನ್ನು ಗೆದ್ದಿದ್ದು, ಕಳೆದ ಬಾರಿ ಚುನಾವಣ ಫಲಿತಾಂಶಕ್ಕೆ ಹೋಲಿಸಿದರೆ ಬಿಜೆಪಿ 6 ಕ್ಷೇತ್ರಗಳನ್ನು ಕಳೆದುಕೊಂಡಂತಾಗಿದೆ.

ಕಳೆದ ಬಾರಿಯ ಚುನಾವಣೆಯಲ್ಲಿ ಕೇವಲ ಒಂದು ಕ್ಷೇತ್ರ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 9 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಚುನಾವಣಾ ಗೆಲುವಿನ ಪ್ರಮಾಣವನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಿಸಿಕೊಂಡಿದೆ. ಆದರೆ ಪ್ರತಿಷ್ಠಿತ ಕ್ಷೇತ್ರವಾಗಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಉಳಿಸಿಕೊಳ್ಳಲು ಅದು ವಿಫಲವಾಗಿದೆ.

ಜೆಡಿಎಸ್ ಕಳೆದ ಬಾರಿ ಒಂದು ಕ್ಷೇತ್ರ ಮಾತ್ರ ಗೆದ್ದಿತ್ತು. ಈ ಬಾರಿ ಎರಡು ಕ್ಷೇತ್ರದಲ್ಲಿ ಗೆಲವು ಸಾಧಿಸುವ ಮೂಲಕ ಗೆಲುವಿನ ಪ್ರಮಾಣವನ್ನು ದ್ವಿಗುಣಗೊಳಿಸಿಕೊಂಡಿದೆ. ಆದರೆ ಕಳೆದ ಬಾರಿ ಗೆದ್ದ ಹಾಸನ ಕ್ಷೇತ್ರ ಉಳಿಸಿಕೊಳ್ಳಲು ಜೆಡಿಎಸ್ ವಿಫಲವಾಗಿದ್ದು, ಹೊಸತಾಗಿ ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳಲ್ಲಿ ಗೆಲುವಿನ ರುಚಿ ಸವಿದಿದೆ.

ಬಿಜೆಪಿ ಗೆದ್ದ ಮತ್ತು ಕಳೆದುಕೊಂಡ ಕ್ಷೇತ್ರಗಳು:

ಬಿಜೆಪಿ ಗೆದ್ದ ಕ್ಷೇತ್ರಗಳು:

  1. ಬೆಂಗಳೂರು ಉತ್ತರ
  2. ಬೆಂಗಳೂರು ದಕ್ಷಿಣ
  3. ಬೆಂಗಳೂರು ಕೇಂದ್ರ
  4. ಬೆಂಗಳೂರು ಗ್ರಾಮಾಂತರ
  5. ಮೈಸೂರು
  6. ಚಿಕ್ಕಬಳ್ಳಾಪುರ
  7. ಕೋಲಾರ
  8. ತುಮಕೂರು
  9. ಚಿತ್ರದುರ್ಗ
  10. ಹಾವೇರಿ
  11. ಧಾರವಾಡ
  12. ಬೆಳಗಾವಿ
  13. ಬಾಗಲಕೋಟೆ
  14. ಶಿವಮೊಗ್ಗ
  15. ಉತ್ತರ ಕನ್ನಡ
  16. ದಕ್ಷಿಣ ಕನ್ನಡ
  17. ಉಡುಪಿ ಚಿಕ್ಕಮಗಳೂರು

ಬಿಜೆಪಿ ಕಳೆದುಕೊಂಡ ಕ್ಷೇತ್ರಗಳು:

  1. ಚಾಮರಾಜನಗರ
  2. ದಾವಣಗೆರೆ
  3. ಚಿಕ್ಕೋಡಿ
  4. ಕಲ್ಬುರ್ಗಿ
  5. ಕೊಪ್ಪಳ
  6. ಬೀದರ್
  7. ರಾಯಚೂರು
  8. ಬಳ್ಳಾರಿ

ಜೆಡಿಎಸ್ ಗೆದ್ದ ಕ್ಷೇತ್ರಗಳು

  1. ಮಂಡ್ಯ
  2. ಕೋಲಾರ

ಜೆಡಿಎಸ್ ಕಳೆದುಕೊಂಡ ಕ್ಷೇತ್ರ:

  1. ಹಾಸನ

    ಕಾಂಗ್ರೆಸ್ ಗೆದ್ದ ಕ್ಷೇತ್ರಗಳು:
  2. ಚಾಮರಾಜನಗರ
  3. ಹಾಸನ
  4. ಚಿಕ್ಕೋಡಿ
  5. ದಾವಣಗೆರೆ
  6. ಕಲ್ಬುರ್ಗಿ
  7. ಬೀದರ್
  8. ರಾಯಚೂರು
  9. ಬಳ್ಳಾರಿ
  10. ಕೊಪ್ಪಳ

ಕಾಂಗ್ರೆಸ್ ಕಳೆದುಕೊಂಡ ಕ್ಷೇತ್ರ

  1. ಬೆಂಗಳೂರು ಗ್ರಾಮಾಂತರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.