ETV Bharat / state

ಬೆಂಗಳೂರು: ಸಿಎಂ ಮನೆ‌ ಕೂಗಳತೆ ದೂರದಲ್ಲೇ ₹ 90 ಲಕ್ಷ ಮೌಲ್ಯದ ಚಿನ್ನ ಕದ್ದ ಖದೀಮರು - ಬೆಂಗಳೂರು ಚಿನ್ನಾಭರಣ ಕಳ್ಳತನ

ಸಿಎಂ ಸಿದ್ದರಾಮಯ್ಯ ಅವರ ನಿವಸಾದ ಸಮೀಪದ ಮನೆಯೊಂದರಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಬರೋಬ್ಬರಿ 2 ಕೆಜಿಗೂ ಹೆಚ್ಚಿನ ಚಿನ್ನವನ್ನು ಕಳ್ಳತನ ಮಾಡಿದ್ದಾರೆ.

90 ಲಕ್ಷ ಮೌಲ್ಯದ ಚಿನ್ನ ಕದ್ದ ಖದೀಮರು
90 ಲಕ್ಷ ಮೌಲ್ಯದ ಚಿನ್ನ ಕದ್ದ ಖದೀಮರು
author img

By ETV Bharat Karnataka Team

Published : Feb 8, 2024, 4:50 PM IST

ಬೆಂಗಳೂರು: ಕೂಗಳತೆ ದೂರದಲ್ಲಿ ಪೊಲೀಸ್ ಠಾಣೆ ಹಾಗೂ ಸದಾ ಪೊಲೀಸ್ ಭದ್ರತೆಯಿಂದಲೇ‌ ಕೂಡಿರುವ ಮುಖ್ಯಮಂತ್ರಿ ಅವರ ಮನೆಯಿದ್ದರೂ ಕ್ಯಾರೇ ಅನ್ನದ ಖದೀಮರು, ಮನೆಯ ಕಿಟಕಿ ಸರಳು‌ ಮುರಿದು 90 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಳ್ಳತನವಾದ ಮನೆ ಮಾಲೀಕರಾದ ಮಂಜುಳಾ ದೇವಿ ಎಂಬುವರು ನೀಡಿದ ದೂರಿನ ಮೇರೆಗೆ ಅಪರಿಚಿತರ ವಿರುದ್ಧ ಶೇಷಾದ್ರಿಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಠಾಣಾ ವ್ಯಾಪ್ತಿಯ ಬಡಗನಾಡು ಸಂಘದ ಎದುರು ಮನೆಯಲ್ಲಿ ವಾಸವಾಗಿದ್ದ ಮಂಜುಳಾ ಅವರ ಕುಟುಂಬಸ್ಥರು ಕಾರ್ಯಕ್ರಮ ಹಿನ್ನೆಲೆ ಕಳೆದ ತಿಂಗಳು 17ರಂದು ರಾಜಸ್ಥನಕ್ಕೆ‌ ತೆರಳಿದ್ದರು.

ಮರಳಿ ಇದೇ ಫೆ. 4ರಂದು ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ.‌ ಪಕ್ಕದ ಮನೆಯ ಕಾಂಪೌಂಡ್ ಹತ್ತಿ, ಗ್ರಿಲ್ ಮುರಿದು ಒಳನುಗ್ಗಿರುವ ಖದೀಮರು ಮನೆಯಲ್ಲಿದ್ದ 90 ಲಕ್ಷ ಮೌಲ್ಯದ 2 ಕೆಜಿ 250 ಗ್ರಾಂನ ಚಿನ್ನದ ಬಿಸ್ಕತ್, ಆಭರಣಗಳು ಹಾಗೂ ಬೆಳ್ಳಿ ವಸ್ತುಗಳನ್ನ ಎಗರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮನೆಯ ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲನೆ‌ ನಡೆಸುತ್ತಿದ್ದಾರೆ.

ಇದನ್ನೂ ಓದಿ: ನಕಲಿ ಕೀ ಬಳಸಿ ವಾಹನ ಕಳ್ಳತನ: ಮೂವರು ಸೆರೆ, ₹10 ಲಕ್ಷದ ಮಾಲು ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.