ETV Bharat / state

ಬಂಟ್ವಾಳದಲ್ಲಿ ಬಾಲಕ ಸಾವು: ಮೊಬೈಲ್ ನೋಡ್ತಾ ಮಹಡಿಯಿಂದ ಕೆಳಗೆಬಿದ್ದಿರುವ ಶಂಕೆ - Boy addicted mobile

ಮೊಬೈಲ್ ಗೀಳು ಹಚ್ಚಿಕೊಂಡಿದ್ದ ಬಾಲಕನೋರ್ವ ಮಹಡಿ ಮೇಲಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ.

mobile addicted boy dies
ಮಹಡಿ ಮೇಲಿಂದ ಬಿದ್ದು ಬಾಲಕ ಸಾವು
author img

By ETV Bharat Karnataka Team

Published : Apr 2, 2024, 9:40 AM IST

ಬಂಟ್ವಾಳ (ದಕ್ಷಿಣ ಕನ್ನಡ): ಮನೆಯ ಮೇಲಿಂದ ಕೆಳಗೆಬಿದ್ದು 15 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಬಂಟ್ವಾಳದಲ್ಲಿ ಕಳೆದ ರಾತ್ರಿ ನಡೆದಿದೆ. ಬಂಟ್ವಾಳದ ಜಕ್ರಿಬೆಟ್ಟು ನಿವಾಸಿ ದಿನೇಶ್ ಪೂಜಾರಿ ಪುತ್ರ ಆದಿಶ್(15) ಮೃತ ಬಾಲಕ. ಬಾಲಕನಿಗೆ ಮೊಬೈಲ್ ಗೀಳು ಇತ್ತು. ಅಂತೆಯೇ ಯಾವಾಗಲೂ ಮೊಬೈಲ್​ನಲ್ಲೇ ಮುಳುಗಿರುತ್ತಿದ್ದನಂತೆ. ರಾತ್ರಿ ವೇಳೆ ಮೊಬೈಲ್​ ನೋಡುತ್ತ ಹೋಗುವಾಗ ಆಯತಪ್ಪಿ ಮನೆಯ ಮೇಲಿಂದ ಕೆಳಗೆ ಬಿದ್ದು ಬಾಲಕ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಮನೆಯವರಿಗೆ ಗೊತ್ತಿಲ್ಲದಂತೆ ಮೊಬೈಲ್ ಹಿಡಿದುಕೊಂಡು ಮನೆ ಮೇಲೆ ಹೋಗಿದ್ದ ವೇಳೆ ಕೆಳಗೆ ಬಿದ್ದಿದ್ದಾನೆ. ಘಟನೆಯಲ್ಲಿ ಬಾಲಕನ ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವವಾಗಿತ್ತು. ಬಾಲಕನ ತಂದೆ ಬೆಳಗ್ಗೆ ಎದ್ದು ಹೊರಗೆ ಬಂದಾಗ ಆತ ಕೆಳಗೆ ಬಿದ್ದಿರುವುದು ಗಮನಕ್ಕೆ ಬಂದಿದೆ. ಮನೆ ಮೇಲಿಂದ ಬಟ್ಟೆ ತೊಳೆಯುವ ಕಲ್ಲಿನ ಮೇಲೆ ಬಾಲಕ ಬಿದ್ದಿರುವುದು ಕಂಡುಬಂದಿದೆ.

ಬಾಲಕನಿಗೆ ರಾತ್ರಿ ವೇಳೆಯೂ ಮೊಬೈಲ್ ಬಳಕೆ ಹಾಗೂ ಟಿವಿ ನೋಡುವ ಅಭ್ಯಾಸ ಇತ್ತು ಎನ್ನಲಾಗಿದೆ. ಮನೆ ತಗ್ಗು ಪ್ರದೇಶದಲ್ಲಿರುವ ಕಾರಣಕ್ಕೆ ಪಿಲ್ಲರ್ ಹಾಕಿ ಮೇಲೆ ಮನೆ ನಿರ್ಮಿಸಿದ್ದರು. ಘಟನೆಯ ಕುರಿತು ಬಂಟ್ವಾಳ ನಗರ ಪೊಲೀಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ದಾವಣಗೆರೆ: ಪಾನಿಪೂರಿ ಸೇವಿಸಿ ಅಸ್ವಸ್ಥ; ಚಿಕಿತ್ಸೆ ಫಲಿಸದೇ 6 ವರ್ಷದ ಬಾಲಕ ಸಾವು

ಬಾಲಕನ ತಂದೆ ದಿನೇಶ್ ಹೋಟೆಲ್ ನಡೆಸುತ್ತಿದ್ದು, ಅವರ ಪತ್ನಿ ಬೆಳಗ್ಗೆ ಹೋಟೆಲ್​​ನಲ್ಲಿ ಕೆಲಸವಿದೆ ಎಂದು ಅಲ್ಲೇ ಮಲಗಿದ್ದರು. ಬಾಲ್ಯದಿಂದಲೂ ಒಬ್ಬನೇ ಮಲಗುವ ಅಭ್ಯಾಸವಿದ್ದ ಬಾಲಕ, ರಾತ್ರಿ ವೇಳೆ ಎದ್ದರೂ ತಂದೆ, ತಾಯಿ ಗಮನಕ್ಕೆ ಬರುತ್ತಿರಲಿಲ್ಲ. ಬಂಟ್ವಾಳ ಖಾಸಗಿ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿಯಾಗಿದ್ದ ಆದಿಶ್​​ಗೆ ಇತ್ತೀಚಿಗಷ್ಟೇ ಪರೀಕ್ಷೆಗಳು ಮುಗಿದಿದ್ದವು.

ನಮ್ಮ ಮಗ ಯಾವಾಗಲೂ ಮೊಬೈಲ್ಅನ್ನು ಹಿಡಿದುಕೊಂಡೇ ಇರುತ್ತಿದ್ದ. ಮೊಬೈಲ್​​ನಲ್ಲಿ ಗೇಮ್ ಆಡುತ್ತಿದ್ದನೇ ಅಥವಾ ಏನನ್ನು ನೋಡುತ್ತಿದ್ದ ಎಂಬುದು ಗೊತ್ತಿಲ್ಲ ಎಂದು ಹೆತ್ತವರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಗೂಡ್ಸ್ ವಾಹನದ ಚಕ್ರಕ್ಕೆ ಸಿಲುಕಿ 5 ವರ್ಷದ ಬಾಲಕ ಸಾವು - Child Death

ETV Bharat Logo

Copyright © 2024 Ushodaya Enterprises Pvt. Ltd., All Rights Reserved.