ತುಮಕೂರು: ಮನೆ ಹಿತ್ತಲಿನಲ್ಲಿ ಕಾಣಿಸಿಕೊಂಡ ಬೃಹತ್ ಗಾತ್ರದ 13 ಅಡಿ ಉದ್ದದ ಹೆಬ್ಬಾವನ್ನು ಉರಗತಜ್ಞ ದಿಲೀಪ್ ಸೆರೆಹಿಡಿದು ದೇವರಾಯನದುರ್ಗ ಅರಣ್ಯಕ್ಕೆ ಬಿಟ್ಟಿದ್ದಾರೆ. ತುಮಕೂರು ತಾಲೂಕು ಅಯ್ಯನಪಾಳ್ಯ ಗ್ರಾಮದ ಪುಟ್ಟಯ್ಯ ಎಂಬುವರ ಮನೆ ಹಿತ್ತಲಿನಲ್ಲಿ ಹೆಬ್ಬಾವು ಪ್ರತ್ಯಕ್ಷವಾಗಿತ್ತು. ಹುಲ್ಲನ್ನು ಕೊಯ್ಯಲು ಹೋದ ಪುಟ್ಟಯ್ಯ ಬೃಹತ್ ಗಾತ್ರದ ಹೆಬ್ಬಾವನ್ನು ಕಂಡು ಭಯಬೀತರಾಗಿದ್ದಾರೆ.
ತಕ್ಷಣ ತುಮಕೂರಿನ ವಾರಂಗಲ್ ವನ್ಯಜೀವಿ ಜಾಗೃತ ಹಾಗೂ ಉರಗ ರಕ್ಷಣಾ ಸಂಸ್ಥೆಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಉರಗತಜ್ಞ ದಿಲೀಪ್ ಮತ್ತು ಹನುಮಯ್ಯ ಅರ್ಧ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ 13 ಅಡಿ ಉದ್ದದ ಹೆಬ್ಬಾವನ್ನು ಸೆರೆಹಿಡಿದಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ, ವಾರಂಗಲ್ ವನ್ಯಜೀವಿ ಜಾಗೃತ ಹಾಗೂ ಉರಗ ರಕ್ಷಣಾ ಸಂಸ್ಥೆಯವರು ಆಗಮಿಸಿದ್ದರು. ರಕ್ಷಣೆ ಮಾಡಿದ ಹೆಬ್ಬಾವನ್ನು ಸುರಕ್ಷಿತವಾಗಿ ದೇವರಾಯನದುರ್ಗ ಅರಣ್ಯಕ್ಕೆ ಬಿಟ್ಟಿದ್ದಾರೆ.
ಇದನ್ನೂ ಓದಿ: ಕಡಬ: ಸತತ 7 ಗಂಟೆ ಕಾರ್ಯಾಚರಣೆ ಮೂಲಕ 13 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ - ವಿಡಿಯೋ - KING COBRA CAPTURED