ETV Bharat / sports

'ಈ ಸಲ ಕಪ್​ ನಮ್ದು' ಎಂದ ಸ್ಮೃತಿ ಮಂಧಾನ; ಆರ್​ಸಿಬಿ ಬೆಂಬಲಿಸಿದ ಅಭಿಮಾನಿಗಳಿಗೆ ಧನ್ಯವಾದ - Smriti Mandhana thanked fans

ಮಹಿಳಾ ಪ್ರೀಮಿಯರ್ ಲೀಗ್‌ (WPL) ಪ್ರಶಸ್ತಿಯನ್ನು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಗೆದ್ದುಕೊಂಡಿದೆ. ಈ ಖುಷಿಯಲ್ಲಿ ತಂಡದ ನಾಯಕಿ ಸ್ಮೃತಿ ಮಂಧಾನ 'ಈ ಸಲ ಕಪ್​​ ನಮ್ದು' ಎಂದು ಹರ್ಷ ವ್ಯಕ್ತಪಡಿಸಿದರು.

ಈ ಸಲ ಕಪ್​ ನಮ್ದು, ಆರ್​ಸಿಬಿಗೆ ಬೆಂಬಲಿಸಿದ ಅಭಿಮಾನಿಗಳಿಗೆ ಧನ್ಯವಾದ: ಸ್ಮೃತಿ ಮಂಧಾನ

author img

By PTI

Published : Mar 18, 2024, 8:47 AM IST

ನವದೆಹಲಿ: ಇಂಡಿಯನ್​ ಪ್ರೀಮಿಯರ್​ ಲೀಗ್​ ಇರಲಿ ಅಥವಾ ಮಹಿಳಾ ಪ್ರೀಮಿಯರ್​ ಲೀಗ್​ ಇರಲಿ ಪ್ರತೀ ಬಾರಿ ರಾಯಲ್ ಚಾಲೆಂಜರ್ಸ್​​ ಬೆಂಗಳೂರು (ಆರ್​ಸಿಬಿ) ತಂಡ ಮೈದಾನಕ್ಕಿಳಿದರೆ ಸಾಕು ಕೋಟ್ಯಂತರ ಅಭಿಮಾನಿಗಳ ಬಾಯಿಯಿಂದ ಬರುವ ಏಕೈಕ ಪದ 'ಈ ಸಲ ಕಪ್ಪು ನಮ್ದೆ' ಎಂಬುದು. ಅಂತೂ ಇಂತೂ ಕೊನೆಗೂ ಅಭಿಮಾನಿಗಳ ಈ ಬಯಕೆಯನ್ನು ನಿನ್ನೆ ಮಹಿಳಾ ತಂಡ ನಿಜವಾಗಿಸಿತು. ಚೊಚ್ಚಲ ಬಾರಿಗೆ ಡಬ್ಲೂಪಿಎಲ್​ ಟೈಟಲ್​ ಗೆದ್ದುಕೊಂಡ ಆರ್‌ಸಿಬಿ, ಈ ಸಲ ಕಪ್ಪು ನಮ್ದೆಂದು ಬೀಗಿತು.

ಕಳೆದ ಸೀಸನ್​ಲ್ಲಿ ಕೇವಲ 2 ಪಂದ್ಯಗಳನ್ನು ಗೆದ್ದು ಕ್ವಾಲಿಫೈ ಆಗದೇ ಹೊರನಡೆದಿದ್ದ​ ಮಂಧಾನ ಪಡೆ ಛಲಬಿಡದೆ ಈ ಬಾರಿ ಟ್ರೋಫಿ ಜಯಿಸಲೇಬೇಕೆಂದು ಪಣ ತೊಟ್ಟು ಮೈದಾನಕ್ಕಿಳಿದಿತ್ತು. ತಮ್ಮ ಸಂಕಲ್ಪದಂತೆ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ​ ನೀಡಿದ ಸಿಂಹಿಣಿಯರು ಫೈನಲ್​ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಮಣಿಸಿ ಟ್ರೋಫಿ ಗೆದ್ದು ಅಭಿಮಾನಿಗಳ 16 ವರ್ಷದ ಕನಸು ನನಸಾಗಿಸಿದರು.

ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರ್​ಸಿಬಿ ನಾಯಕಿ ಸ್ಮೃತಿ ಮಂಧಾನ ಮಾತನಾಡಿ, ತಂಡವನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು. "ಆರ್​ಸಿಬಿಯ ನಿಷ್ಠಾವಂತ ಅಭಿಮಾನಿಗಳು ಪ್ರತೀ ಬಾರಿ ತಂಡ ಕಣಕ್ಕಿಳಿದಾಗ 'ಈ ಸಲ ಕಪ್​ ನಮ್ದೆ' ಎಂದು ಹೇಳುತ್ತಾರೆ. ಆದರೆ 'ಈ ಬಾರಿ ಕಪ್ ನಮ್ದಾಗಿದೆ. ಖಂಡಿತವಾಗಿಯೂ ಈ ಗೆಲುವು ಅಗ್ರ ಐದು ಟ್ರೋಫಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿ ವಿಶ್ವಕಪ್​ ಮೊದಲ ಸ್ಥಾನದಲ್ಲಿದೆ. ಇದು ತಂಡದ ನಾಯಕಿಯಾಗಿರುವ ನನ್ನ ಗೆಲುವಲ್ಲ, ನಮ್ಮ ತಂಡದ ಗೆಲುವು" ಎಂದರು.

"2023ರಲ್ಲಿ ನಡೆದ ಚೊಚ್ಚಲ ಮಹಿಳಾ ಪ್ರೀಮಿಯರ್​ ಸೀಸನ್​ನಲ್ಲಿ ನಾವು ಸೋಲು ಅನುಭವಿಸಿದ್ದೆವು. ಬಳಿಕ ಅದರಿಂದ ಸಾಕಷ್ಟು ಪಾಠ ಕಲಿತೆವು. ಈ ಬಾರಿಯ ಟೂರ್ನಿಯಲ್ಲೂ ಬಲಿಷ್ಠ ಡೆಲ್ಲಿ ವಿರುದ್ದ ಎರಡು ಸೋಲು ಕಂಡೆವು. ಆದರೆ ಫೈನಲ್ ​ಪಂದ್ಯದಲ್ಲಿ ಅಂತಹ ತಪ್ಪುಗಳಾಗದಂತೆ ಸಮಯೋಚಿತ ಆಟವಾಡಬೇಕು ಎಂಬ ಕೆಲವು ಸಿದ್ಧತೆಗಳೊಂದಿಗೆ ಮೈದಾನಕ್ಕಿಳಿದು ಪಂದ್ಯ ಗೆದ್ದೆವು. ಈ ತಂಡದ ಬಗ್ಗೆ ನನಗೆ ಹೆಮ್ಮೆ ಇದೆ" ಎಂದು ತಿಳಿಸಿದರು.

ನಿನ್ನೆ ದೆಹಲಿಯ ಅರುಣ್​ ಜೇಟ್ಲಿ ಮೈದಾನದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಡೆಲ್ಲಿ ತಂಡ ನೀಡಿದ್ದ 113 ರನ್​ಗಳ ಸಾಮಾನ್ಯ ಗುರಿ ಬೆನ್ನಟ್ಟಿದ ಆರ್​ಸಿಬಿ 19.2 ಓವರ್​​ನಲ್ಲಿ ಗುರಿ ತಲುಪುವ ಮೂಲಕ ಎರಡನೇ ಸೀಸನ್‌​ನಲ್ಲಿ ಟ್ರೋಫಿಗೆ ಮುತ್ತಿಕ್ಕಿತು.

ಇದನ್ನೂ ಓದಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಚೊಚ್ಚಲ ಪ್ರಶಸ್ತಿ ; ಆರ್​ಸಿಬಿ ಹೆಣ್ಣುಮಕ್ಳೆ ಸ್ಟ್ರಾಂಗು​ ಗುರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.