ETV Bharat / sports

ಚೊಚ್ಚಲ ಕಪ್​ ಗೆದ್ದ ಮಹಿಳಾ ಆರ್​​ಸಿಬಿ ತಂಡಕ್ಕೆ ಅಭಿನಂದನೆಗಳ ಮಹಾಪೂರ: ಯಾರು, ಏನಂದ್ರು? - dignitaries have congratulated rcb

ಚೊಚ್ಚಲ ಕಪ್​ ಗೆದ್ದ ಆರ್​ಸಿಬಿ ಮಹಿಳಾ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಚೊಚ್ಚಲ ಕಪ್​ ಗೆದ್ದ ಮಹಿಳಾ ಆರ್​​ಸಿಬಿ ತಂಡಕ್ಕೆ ಅಭಿನಂದನೆಗಳ ಮಹಾಪೂರ

author img

By ETV Bharat Karnataka Team

Published : Mar 18, 2024, 11:06 AM IST

ನವದೆಹಲಿ: ಭಾನುವಾರ ನಡೆದ ಮಹಿಳಾ ಪ್ರೀಮಿಯರ್​ ಲೀಗ್​ನ (WPL) ಫೈನಲ್​ ಪಂದ್ಯದಲ್ಲಿ ದೆಹಲಿ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ಕಪ್​ ಎತ್ತಿ ಹಿಡಿದಿರುವ ಆರ್​ಸಿಬಿ ತಂಡಕ್ಕೆ ವಿರಾಟ್​ ಕೊಹ್ಲಿ, ಚಹಲ್​, ಸೆಹ್ವಾಗ್​, ವಿಜಯ್​ ಮಲ್ಯ ಸೇರಿದಂತೆ ಹಲವೆಡೆಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಆರ್​ಸಿಬಿ ಫ್ರಾಂಚೈಸಿಯ ಮಾಜಿ ಮಾಲೀಕ ವಿಜಯ್​ ಮಲ್ಯ ತಮ್ಮ ಎಕ್ಸ್​ ಖಾತೆಯಲ್ಲಿ, 'ಡಬ್ಲೂಪಿಎಲ್​ ಪ್ರಶಸ್ತಿ ಜಯಿಸಿದ ಮಹಿಳಾ ಆರ್​ಸಿಬಿ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಪುರುಷರ ಆರ್​ಸಿಬಿ ತಂಡ ಬಹಳ ವರ್ಷಗಳಿಂದ ಕಾಯುತ್ತಿರುವ ಟ್ರೋಫಿಯನ್ನು ಈ ಬಾರಿ ಗೆದ್ದರೆ ಈ ಖುಷಿ ಇಮ್ಮಡಿಗೊಳ್ಳಲಿದೆ. ಒಳ್ಳೆಯದಾಗಲಿ' ಎಂದು ಬರೆದಿದ್ದಾರೆ.

ಭಾರತ ಕ್ರಿಕೆಟ್ ತಂಡದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ, ಮಹಿಳಾ ತಂಡದ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಅವರೊಂದಿಗೆ ವಿಡಿಯೋ ಕಾಲ್‌ನಲ್ಲಿ ಸಂವಾದ ನಡೆಸಿ, ತಂಡದ ಆಟಗಾರ್ತಿಯರನ್ನು 'ಸೂಪರ್‌ವುಮೆನ್' ಎಂದು ಕರೆದಿದ್ದಾರೆ.

ಸ್ಪಿನ್ನರ್​ ಯಜುವೇಂದ್ರ ಚಹಲ್​ ತಮ್ಮ ಎಕ್ಸ್​ ಖಾತೆಯಲ್ಲಿ, 'ಆನಂದ ಪರಮಾನಂದ ಪರಮಾನಂದ' ಎಂದು ಮಂಜುನಾಥ ಚಿತ್ರದ ಹಾಡಿನ ತುಣಕನ್ನು ಕನ್ನಡದಲ್ಲಿಯೇ ಬರೆದು ಟ್ವೀಟ್​ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಟೀಮ್​ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್​, 'ಆರ್​ಸಿಬಿಗೆ ಅಭಿನಂದನೆಗಳು. ವಿಜೇತ ತಂಡ ತೋರಿದ ಅದ್ಭುತ ಪ್ರದರ್ಶನ' ಎಂದಿದ್ದಾರೆ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಮಹಿಳಾ ಪ್ರೀಮಿಯರ್​ ಲೀಗ್​ ಸೀಸನ್​ 2 ಪ್ರಶಸ್ತಿ ಜಯಿಸಿದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಅಭಿನಂದನೆಗಳು ಎಂದು ಎಕ್ಸ್​ ಖಾತೆಯಲ್ಲಿ ಬರೆದು ಪೋಸ್ಟ್​ ಮಾಡಿದ್ದಾರೆ.

ಕರ್ನಾಟಕ ಸಿಎಂ ಸಿದ್ದರಾಮಯ್ಯ, ಇಡೀ ಪಂದ್ಯಾವಳಿಯುದ್ದಕ್ಕೂ ಸಂಘಟಿತ ಪ್ರದರ್ಶನ ನೀಡಿರುವ ನಮ್ಮ ಹುಡುಗಿಯರ ಆಟ ಅಭಿನಂದನಾರ್ಹ. ಕ್ರಿಕೆಟ್ ಪ್ರೇಮಿಯಾದ ನನಗೆ ಈ ಗೆಲುವು ಅತ್ಯಂತ ಖುಷಿಕೊಟ್ಟಿದೆ. ಆರ್‌ಸಿಬಿ ಅಭಿಮಾನಿಗಳ ದಶಕಗಳ ಕನಸು ಈಡೇರಿದೆ. ಐಪಿಎಲ್‌ನಲ್ಲಿ ನಮ್ಮ ಹುಡುಗರೂ ಕಪ್ ಗೆಲ್ಲಲಿ ಎಂಬ ಹಾರೈಕೆ ನನ್ನದು. ಈ ಸಲ ಕಪ್ ನಮ್ದೆ' ಎಂದು ಬರೆದಿದ್ದಾರೆ.

ಇದನ್ನೂ ಓದಿ: 'ಈ ಸಲ ಕಪ್​ ನಮ್ದು' ಎಂದ ಸ್ಮೃತಿ ಮಂಧಾನ; ಆರ್​ಸಿಬಿ ಬೆಂಬಲಿಸಿದ ಅಭಿಮಾನಿಗಳಿಗೆ ಧನ್ಯವಾದ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.