ETV Bharat / sports

WPL 2024: ಗುಜರಾತ್ ಜೈಂಟ್ಸ್ ವಿರುದ್ಧ ಗೆದ್ದು ಬೀಗಿದ ಮುಂಬೈ​ ಇಂಡಿಯನ್ಸ್​​

Women's Premier League 2024: ಬೌಲಿಂಗ್ ಮತ್ತು ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ ಮುಂಬೈ ಇಂಡಿಯನ್ಸ್ ತಂಡದ ಆಟಗಾರರ ಎದುರು ಗುಜರಾತ್ ಜೈಂಟ್ಸ್ ಮಂಡಿಯೂರಿದೆ.

ಮಹಿಳಾ ಪ್ರೀಮಿಯರ್ ಲೀಗ್
ಮಹಿಳಾ ಪ್ರೀಮಿಯರ್ ಲೀಗ್
author img

By PTI

Published : Feb 25, 2024, 10:54 PM IST

Updated : Feb 25, 2024, 11:06 PM IST

ಬೆಂಗಳೂರು : ಇಲ್ಲಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ 2024ರ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವುಮೆನ್ ವಿರುದ್ಧ ಗುಜರಾತ್ ಜೈಂಟ್ಸ್ ಸೋಲನುಭವಿಸಿದೆ. ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ಕೆಳದುಕೊಂಡು 126 ರನ್​ಗಳನ್ನು ಕಲೆಹಾಕಲಷ್ಟೇ ಗುಜರಾತ್ ಜೈಂಟ್ಸ್ ಶಕ್ತವಾಯಿತು. ಮುಂಬೈ​ ಇಂಡಿಯನ್ಸ್​​ 127 ರನ್​ಗಳ ಗುರಿಯನ್ನು ಸುಲಭವಾಗಿ ಗೆದ್ದು ಬೀಗಿದೆ. ಮುಂಬೈ ಪರ ಶಬ್ನಿಮ್ ಇಸ್ಮಾಯಿಲ್ 3 ಮತ್ತು ಅಮೆಲಿಯಾ ಕೆರ್ 4 ವಿಕೆಟ್​ ಪಡೆದು ಗುಜರಾತ್​ಗೆ ಶಾಕ್​ ನೀಡಿದರು.

ಟಾಸ್​ ಸೋತು ಮೊದಲು ಬ್ಯಾಟಿಂಗ್​ಗಿಳಿದ ಗುಜರಾತ್ ಆರಂಭದಲ್ಲೇ ವೇದಾ ಕೃಷ್ಣಮೂರ್ತಿ (0) ಅವರ ವಿಕೆಟ್​ ಕೆಳದುಕೊಂಡಿತ್ತು. ಮುಂಬೈ ಸ್ಟಾರ್​ ವೇಗದ ಬೌಲರ್​ ಶಬ್ನಿಮ್ ಇಸ್ಮಾಯಿಲ್ ಬೌಲಿಂಗ್​ನಲ್ಲಿ ವೇದ ಶೂನ್ಯಗೆ ಔಟ್​ ಆದರು. ನಂತರ ಕ್ರೀಸ್​ಗೆ ಬಂದ ಹರ್ಲೀನ್ ಡಿಯೋಲ್ (8) ಕೂಡ ಒಂದು ಆರ್ಕಷಕ ಸಿಕ್ಸ್​ ಸಿಡಿಸಿ ಶಬ್ನಿಮ್ ಇಸ್ಮಾಯಿಲ್ ಅವರಿಗೆ ವಿಕೆಟ್​ ಒಪ್ಪಿಸಿದರು. ಇನ್ನೊಂದೆಡೆ ನಾಯಕಿ ಬೆತ್ ಮೂನಿ (24) ತಾಳ್ಮೆಯುಕ್ತ ಆಟವಾಡುವಾಗ ಮೂರನೇ ವಿಕೆಟ್​ ಅನ್ನು ಶಬ್ನಿಮ್ ಇಸ್ಮಾಯಿಲ್ ಗೆ ನೀಡಿದರು.

ಇನ್ನುಳಿದಂತೆ ಗುಜರಾತ್​ನ ಯಾವುದೇ ಆಟಗಾರ್ತಿಯರು ಕೂಡ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಂತು ಉತ್ತಮ ಪ್ರದರ್ಶನ ನೀಡಲಿಲ್ಲ. ನ್ಯಾಟ್ ಸ್ಕಿವರ್ ಬ್ರಂಟ್ ಬೌಲಿಂಗ್​ನಲ್ಲಿ ಫೋಬೆ ಲಿಚ್ಫೀಲ್ಡ್ (7) ವಿಕೆಟ್​ ನೀಡಿದರೆ, ದಯಾಳನ್ ಹೇಮಲತಾ (3) ಅವರ ವಿಕೆಟ್​ ಅನ್ನು ಕೆರಿಬಿಯನ್​ ಆಟಗಾರ್ತಿ ಹೇಲಿ ಮ್ಯಾಥ್ಯೂಸ್ ಉರಳಿಸಿದರು. ಕೊನೆಯಲ್ಲಿ ಆಶ್ಲೀ ಗಾರ್ಡ್ನರ್ (15), ಸ್ನೇಹ ರಾಣಾ (0), ತನುಜಾ ಕನ್ವರ್ (28), ಲೀ ತಹುಹು (0) ಈ ನಾಲ್ವರ ವಿಕೆಟ್​ ಅನ್ನು ಅಮೆಲಿಯಾ ಕೆರ್ ಕಬಳಿಸಿ ಗುಜರಾತ್​ ರನ್​ ವೇಗಕ್ಕೆ ಬ್ರೇಕ್​ ಹಾಕಿದರು. ಕ್ಯಾಥರಿನ್ ಬ್ರೈಸ್ (25) ಔಟಗಾದೆ ಕ್ರೀಸ್​ನಲ್ಲಿ ಉಳಿದರು.

ತಂಡಗಳು : ಗುಜರಾತ್ ಜೈಂಟ್ಸ್ : ಬೆತ್ ಮೂನಿ(ನಾಯಕಿ/ವಿಕೀ), ವೇದಾ ಕೃಷ್ಣಮೂರ್ತಿ, ಫೋಬೆ ಲಿಚ್‌ಫೀಲ್ಡ್, ಹರ್ಲೀನ್ ಡಿಯೋಲ್, ಆಶ್ಲೀಗ್ ಗಾರ್ಡ್ನರ್, ದಯಾಲನ್ ಹೇಮಲತಾ, ಸ್ನೇಹ ರಾಣಾ, ತನುಜಾ ಕನ್ವರ್, ಕ್ಯಾಥರಿನ್ ಬ್ರೈಸ್, ಲಿಯಾ ತಹುಹು, ಮೇಘನಾ ಸಿಂಗ್

ಮುಂಬೈ ಇಂಡಿಯನ್ಸ್ ವುಮೆನ್​ : ಹೇಲಿ ಮ್ಯಾಥ್ಯೂಸ್, ಯಾಸ್ತಿಕಾ ಭಾಟಿಯಾ (ವಿಕೀ), ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಅಮಂಜೋತ್ ಕೌರ್, ಎಸ್ ಸಜನಾ, ಶಬ್ನಿಮ್ ಇಸ್ಮಾಯಿಲ್, ಕೀರ್ತನಾ ಬಾಲಕೃಷ್ಣನ್, ಸೈಕಾ ಇಶಾಕ್

ಇದನ್ನೂ ಓದಿ : WPL: ರಿಚಾ, ಮೇಘನಾ, ಆಶಾ ಅಬ್ಬರಕ್ಕೆ ಯುಪಿ ವಾರಿಯರ್ಸ್ ತತ್ತರ; ಆರ್​ಸಿಬಿಗೆ 2 ರನ್‌ಗಳ ರೋಚಕ ಗೆಲುವು

Last Updated : Feb 25, 2024, 11:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.