WPL Auction 2025: ಬಹುನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್ (WPL)2025ರ ಭಾಗವಾಗಿ ಇಂದು (ಭಾನುವಾರ) ಬೆಂಗಳೂರಿನಲ್ಲಿ ಮಿನಿ ಹರಾಜು ನಡೆಯುತ್ತಿದೆ. ಎಲ್ಲಾ ಐದು ತಂಡಗಳು ಉಳಿದಿರುವ 19 ಸ್ಲಾಟ್ಗಳ ಭರ್ತಿಮಾಡಲು ಹರಾಜಿನಲ್ಲಿ ಪಾಲ್ಗೊಳ್ಳುತ್ತಿವೆ.
ಮಿನಿ ಹರಾಜಿಗೆ ಆರಂಭದಲ್ಲಿ ಒಟ್ಟು 400 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಆದಾಗ್ಯೂ, ಅಂತಿಮವಾಗಿ 120 ಆಟಗಾರ ಹೆಸರನ್ನು ಶಾರ್ಟ್ಲಿಸ್ಟ್ ಮಾಡಲಾಗಿದೆ. ಇದೀಗ ಹರಾಜಿನಲ್ಲಿ 91 ಭಾರತೀಯರು ಮತ್ತು 29 ವಿದೇಶಿ ಆಟಗಾರರು ಅದೃಷ್ಟದ ಪರೀಕ್ಷೆಗಿಳಿದಿದ್ದಾರೆ.
ಕೆಲ ಫ್ರಾಂಚೈಸಿಗಳು ಪ್ರಮುಖ ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿದ್ದರೇ ಮತ್ತೆ ಕೆಲವು ಈವೆಂಟ್‌ಗೂ ಮೊದಲೇ ಸ್ಟಾರ್ ಆಟಗಾರರನ್ನು ಬಿಟ್ಟು ಹೊಸಬರ ಖರೀದಿಗೆ ಮುಂದಾಗಿವೆ. ತಂಡದಿಂದ ಕೈಬಿಟ್ಟ ಆಟಗಾರರಲ್ಲಿ ಸ್ನೇಹ ರಾಣಾ, ಪೂನಮ್ ಯಾದವ್, ಲಿಯಾ ತಹುಹು, ಹೀದರ್ ನೈಟ್ ಮತ್ತು ಇಸ್ಸಿ ವಾಂಗ್ ಸೇರಿದ್ದಾರೆ.
ಹರಾಜಾದ ಆಟಗಾರರು
- ಡಿಯೆಂಡ್ರ ಡಟಾನ್
ತಂಡ: ಗುಜರಾತ್ ಟೈಟಾನ್ಸ್
ಮೊತ್ತ: ₹1.70 ಕೋಟಿ ರೂ
- ನಡೈನ್ ಡಿ ಕ್ಲಾರ್ಕ್
ತಂಡ: ಮುಂಬೈ ಇಂಡಿಯನ್ಸ್
ಮೊತ್ತ: ₹30 ಲಕ್ಷ ರೂ
- ಜಿ ಕಮಲಿನಿ
ತಂಡ: ಮುಂಬೈ ಇಂಡಿಯನ್ಸ್
ಮೊತ್ತ: ₹1.60 ಕೋಟಿ
- ಸಿಮ್ರಾನ್ ಶೈಯಿಕ್
ತಂಡ: ಗುಜರಾತ್ ಜೈಂಟ್ಸ್
ಮೊತ್ತ: ₹1.90 ಕೋಟಿ
- ನಂದಿನಿ ಕಾಷ್ಯಪ್
ತಂಡ: ದೆಹಲಿ
ಮೊತ್ತ: ₹10 ಲಕ್ಷ
- ಪ್ರೇಮ್ ರಾವತ್
ತಂಡ: ರಾಯಲ್ ಚಾಲೆಂಜರ್ಸ್ ಬೆಂಗಳೂರು
ಮೊತ್ತ: ₹1.20 ಕೋಟಿ
- ನಲ್ಲಪರೆಡ್ಡಿ ಚರಣಿ
ತಂಡ: ದೆಹಲಿ ಕ್ಯಾಪಿಟಲ್ಸ್
ಮೊತ್ತ: ₹55 ಲಕ್ಷ
- ಆರುಷಿ ಗೋಯೆಲ್
ತಂಡ: ಯುಪಿ ವಾರಿಯರ್ಸ್
ಮೊತ್ತ: ₹10 ಲಕ್ಷ
- ಕ್ರಾಂತಿ ಗೌಡ್
ತಂಡ: ಯುಪಿ ವಾರಿಯರ್ಸ್
ಮೊತ್ತ: ₹10 ಲಕ್ಷ
- ಸಂಸ್ಕೃತಿ ಗುಪ್ತಾ
ತಂಡ: ಮುಂಬೈ ಇಂಡಿಯನ್ಸ್
ಮೊತ್ತ: ₹10 ಲಕ್ಷ
- ಜೋಶಿತ ವಿ.ಜೆ
ತಂಡ: ರಾಯಲ್ ಚಾಲೆಂಜರ್ಸ್ ಬೆಂಗಳೂರು
ಮೊತ್ತ: ₹10 ಲಕ್ಷ ರೂ
- ಸರಾ ಬ್ರೈಸಿ
ತಂಡ: ದೆಹಲಿ ಕ್ಯಾಪಿಟಲ್ಸ್
ಮೊತ್ತ: ₹10 ಲಕ್ಷ ರೂ
ಮೊದಲಿಗೆ WPL ಹರಾಜಿಗೆ ಬಂದ ಕೆರೆಬಿಯನ್ ಆಲ್ರೌಂಡರ್ ಡಿಯೆಂಡ್ರ ಡಟಾನ್ ₹1.70 ಕೋಟಿಗೆ ಗುಜರಾತ್ ಜೈಂಟ್ಸ್ ಪಾಲಾಗಿದ್ದಾರೆ. ಉಳಿದಂತೆ 18 ಆಟಗಾರರು ಅನ್ಸೋಲ್ಡ್ ಆಗಿದ್ದಾರೆ. ಏತನ್ಮಧ್ಯೆ ₹1.20 ಕೋಟಿ ರೂ ಗೆ ಆರ್ಸಿಬಿ ಪ್ರೇಮ ರಾವತ್ ಅವರನ್ನು ಖರೀದಿ ಮಾಡಿದೆ. ಸಿಮ್ರಾನ್ ಶೇಖ್ ₹1.90 ಕೋಟಿಗೆ ಗುಜರಾತ್ ಜೈಂಟ್ಸ್ ಪಾಲಾಗಿದ್ದಾರೆ. ಮಿನಿ ಹರಾಜಿನಲ್ಲಿ ಹೆಚ್ಚಿನ ದಾಖಲೆಗೆ ಬಿಕರಿಯಾದ ಮಹಿಳಾ ಆಟಗಾರ್ತಿ ಎನಿಸಿಕೊಂಡಿದ್ದಾರೆ. ನಲ್ಲಪುರೆಡ್ಡಿ ₹55 ಲಕ್ಷಕ್ಕೆ ದೆಹಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರ್ಪಡೆಗೊಂಡರೇ, ನಂದಿನ ಕಾಷ್ಯಪ್ 10 ಲಕ್ಷಕ್ಕೆ ದೆಹಲಿ, ಜಿ ಕಮಲಿನಿ 1.60 ಕೋಟಿಗೆ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ.
ಜೋಷಿತಾ ವಿ.ಜೆ
ಅನ್ಸೋಲ್ಡ್ ಆಟಗಾರರು
ಫಾತಿಮ ಜಾಫರ್, ಲಾರಾ ಹ್ಯಾರಿಸ್, ಸೋನಾಲ್ ಠಾಕೂರ್, ಇರಾ ಜಾದಾವ್, ಡ್ಯಾನಿಯಲ್ ಗಿಬ್ಸನ್, ಪೂನಾಂ ಯಾದವ್, ಹೈದರ್ ನೈಟ್, ಚಿನ್ನೆಲ್ಲೆ ಅಖೆಲಿಯಾ ಹೆನ್ರಿ. ಸರ್ಹಾ ಗ್ಲೆನ್ ಬೌಚರ್,ಹೇದರ್ ಗ್ರಾಹಂ, ಡ್ಯಾರ್ಸಿ ಬ್ರೌನ್, ಲಾರೆನ್ ಚೆಟೆಲ್ ಅನ್ಸೋಲ್ಡ್ ಆಗಿದ್ದಾರೆ.