KL Rahul controversial Dismissal: ಪರ್ತ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 150 ರನ್‌ಗಳಿಗೆ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆದಿದ್ದು ವಿವಾದಕ್ಕೆ ಕಾರಣವಾಗಿದೆ. ಮೂರನೇ ಅಂಪೈರ್ ವಿವಾದಾತ್ಮಕ ನಿರ್ಣಯದಿಂದ ಕೆ.ಎಲ್.ರಾಹುಲ್ ಪೆವಿಲಿಯನ್ಗೆ ಸೇರಿದ್ದಾರೆ.
ವಾಸ್ತವವಾಗಿ, ಓಪನರ್ ಆಗಿ ಕಣಕ್ಕಿಳಿದಿದ್ದ ಕೆ.ಎಲ್.ರಾಹುಲ್ ಆಸೀಸ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸುತ್ತಾ 26 ರನ್ ಗಳಿಸಿ ಆಡುತ್ತಿದ್ದರು. 23ನೇ ಓವರ್ನಲ್ಲಿ ಮಿಚೆಲ್ ಸ್ಟಾರ್ಕ್ ಬೌಲಿಂಗ್ ಮಾಡುತ್ತಿದ್ದರು. ಈ ವೇಳೆ ಈ ಓವರ್ನ 2ನೇ ಎಸೆತದಲ್ಲಿ ಬೌಲ್ ಸ್ವಿಂಗ್ ಆಗಿ ಬ್ಯಾಟ್ ಸಮೀಪಕ್ಕೆ ಹೋಗಿತ್ತು. ಇದೇ ವೇಳೆ ಅಲೆಕ್ಸ್ ಕ್ಯಾರಿ ಚೆಂಡನ್ನು ಹಿಡಿದು ಔಟ್ಗಾಗಿ ಅಪೀಲ್ ಮಾಡಿದರು.
ಆದರೆ ಆನ್ಫಿಲ್ಡ್ ಅಂಪೈರ್ ರಿಚರ್ಡ್ ಕೆಟಿಲ್ ಔಟ್ ನೀಡಲು ನಿರಾಕರಿಸಿದ್ದರು. ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ DRS ತೆಗೆದುಕೊಂಡರು. 3ನೇ ಅಂಫೈರ್ ಹೆಚ್ಚಿನ ಪರಿಶೀಲನೆ ಮಾಡದೇ ಔಟ್ ಎಂದು ತೀರ್ಪು ನೀಡಿದರು. ಆದರೆ ಚೆಂಡು ಪಾಸ್ ಆಗುವಾಗ ಬ್ಯಾಟ್ ಪ್ಯಾಡ್ಗೆ ತಗುಲಿದ್ದು ಇದನ್ನು ಸರಿಯಾಗಿ ಪರಿಶೀಲಿಸದೇ ಅಂಪೈರ್ ಔಟ್ ನೀಡಿದ್ದಾರೆ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಸ್ವತಃ ರಾಹುಲ್ ಕೂಡ ಅಸಮಾಧಾನ ಹೊರಹಾಕಿದರು.
ಈ ವಿವಾದಾತ್ಮಕ ತೀರ್ಪಿನ ನಡುವೆಯೇ ಹಾಟ್‌ಸ್ಪಾಟ್ ಟೆಕ್ನಾಲಜಿ ವಿಷಯ ಮತ್ತೆ ಚರ್ಚೆಗೆ ಬಂದಿದೆ. ಒಂದು ವೇಳೆ ಹಾಟ್‌ಸ್ಪಾಟ್ ಟೆಕ್ನಾಲಜಿ ಬಳಸಿದ್ದರೆ ಚೆಂಡು ಬ್ಯಾಟ್ಗೆ ತಗುಲಿದೆಯೇ ಅಥವಾ ಇಲ್ಲವೇ ಎಂಬುದು ತಿಳಿಯುತಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ.
ಹಾಟ್‌ಸ್ಪಾಟ್ ಎಂದರೇನು?: ಹಾಟ್‌ಸ್ಪಾಟ್ ಟೆಕ್ನಾಲಜಿಯನ್ನು ಮಿಲಿಟರಿಯಲ್ಲಿ ಬಳಸಲಾಗುತ್ತದೆ. ಇದು ಥರ್ಮಲ್ ಇಮೇಜಿಂಗ್ ತಂತ್ರಜ್ಞಾನವಾಗಿದ್ದು ಯುದ್ಧ ಟ್ಯಾಂಕರ್ಗಳು ಮತ್ತು ಜೆಟ್ ವಿಮಾನಗಳನ್ನು ಪತ್ತೆ ಹಚ್ಚುವಲ್ಲಿ ಸಹಾಯ ಮಾಡುತ್ತದೆ. ಕತ್ತಲು ಅಥವಾ ದಟ್ಟವಾದ ಮಂಜು ಇರುವ ವಾತಾವಾರಣದಲ್ಲೂ ಈ ಟೆಕ್ನಾಲಜಿ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತದೆ.
ಕ್ರಿಕೆಟ್ನಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತದೆ?: ಹಾಟ್‌ಸ್ಪಾಟ್ ಟೆಕ್ನಾಲಜಿಯನ್ನು 2006-07 ಆ್ಯಶಸ್ ಸಮಯದಲ್ಲಿ ಕ್ರಿಕೆಟ್ಗೆ ಪರಿಚಯಿಸಲಾಯಿತು. ಇದು ಕ್ರಿಕೆಟ್ನಲ್ಲಿ ಚೆಂಡು ತಗುಲಿದ ಜಾಗವನ್ನು ನಿಖರವಾಗಿ ಗುರುತಿಸುತ್ತದೆ. ಉದಾಹರಣೆಗೆ, ಚೆಂಡು ಬ್ಯಾಟ್ಸ್‌ಮನ್‌ನ ದೇಹ ಅಥವಾ ಬ್ಯಾಟ್‌ನ ಯಾವ ಭಾಗದ ಸಂಪರ್ಕ ಹೊಂದಿದೆ ಎಂಬುದನ್ನು ನಿರ್ಧರಿಸಲು ಇದು ಸಹಾಯಕ.
ಇದಕ್ಕಾಗುವ ಖರ್ಚೆಷ್ಟು: ಈ ಟೆಕ್ನಾಲಜಿಯಲ್ಲಿ ಕ್ಯಾಮೆರಾಗಳನ್ನು ಕ್ರಿಕೆಟ್ನಲ್ಲಿ ಬಳಸಿದರೆ ಹೆಚ್ಚಿನ ಖರ್ಚಾಗುತ್ತದೆ. ಎರಡು ಹಾಟ್‌ಸ್ಪಾಟ್ ಟೆಕ್ನಾಲಜಿ 4 ಕ್ಯಾಮೆರಾಗಳನ್ನು ಬಳಸಿದರೆ ಒಂದು ದಿನಕ್ಕೆ $10,000 ಡಾಲರ್ (8.45 ಲಕ್ಷ ರೂ) ಖರ್ಚಾಗುತ್ತದೆ. ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಕೂಡ ಯಾವುದೇ ಈವೆಂಟ್‌ಗಳಲ್ಲಿ DRS ತಂತ್ರಜ್ಞಾನದ ಭಾಗವಾಗಿ ಹಾಟ್‌ಸ್ಪಾಟ್ ಬಳಸಲ್ಲ.
ಈ ತಂತ್ರಜ್ಞಾನ ತಯಾರಿಸಿದ್ದು ಯಾರು?: ಯುದ್ದದ ಸಂದರ್ಭಗಳಲ್ಲಿ ಸೈನಿಕರಿಗೆ ಟ್ಯಾಂಕರ್ ಮತ್ತು ಯುದ್ದ ವಿಮಾನ್ಗಳನ್ನು ಪತ್ತೆ ಹಚ್ಚಲು ಫ್ರೆಂಚ್ ವಿಜ್ಞಾನಿ ನಿಕೋಲಸ್ ಬಯೋನ್ ಎನ್ನುವವರು ಈ ಹಾಟ್‌ಸ್ಪಾಟ್ ಟೆಕ್ನಾಲಜಿಯನ್ನು ಅಭಿವೃದ್ಧಿಪಡಿಸಿದ್ದರು.
ಇದನ್ನೂ ಓದಿ: IPL 2025ರ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್‌ಗೆ ಆಘಾತ; ಪ್ರಮುಖ ಆಟಗಾರನಿಗೆ ನಿಷೇಧ!