ETV Bharat / sports

ಭಾರತ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರರು ಕೈಗೆ ಕಪ್ಪುಪಟ್ಟಿ ಧರಿಸಿದ್ದೇಕೆ? - IND VS AUS 2ND TEST

ಭಾರತದ ವಿರುದ್ಧ ನಡುಯುತ್ತಿರುವ ಎರಡನೇ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ಆಟಗಾರರು ಕೈಗೆ ಕಪ್ಪು ಪಟ್ಟಿ ಧರಿಸಿ ಪಂದ್ಯವನ್ನಾಡುತ್ತಿದ್ದಾರೆ.

INDIA VS AUSTRALIA TEST SERIES  PINK BALL TEST  BLACK ARMBANDS  ಭಾರತ ಆಸ್ಟ್ರೇಲಿಯಾ ಟೆಸ್ಟ್
ಮಿಚೆಲ್​ ಸ್ಟಾರ್ಕ್​ (AP)
author img

By ETV Bharat Sports Team

Published : Dec 6, 2024, 11:17 AM IST

Australian players wear black armbands: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದಿನಿಂದ ಎರಡನೇ ಟೆಸ್ಟ್​ ಪ್ರಾರಂಭವಾಗಿದೆ. ಅಡಿಲೇಡ್​ನಲ್ಲಿ ನಡೆಯುತ್ತಿರುವ ಈ ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್​ ಶರ್ಮಾ ಟಾಸ್​​ ಗೆದ್ದು ಮೊದಲಿಗೆ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಮೊದಲ ಇನ್ನಿಂಗ್ಸ್​ನಲ್ಲಿ ಆರಂಭಿಕ ಬ್ಯಾಟರ್​ ಆಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್​, ಸ್ಟಾರ್ಕ್​ ಎಸೆದ ಮೊದಲ ಎಸೆತದಲ್ಲೇ ಎಲ್​ಬಿ ಬಲೆಗೆ ಬಿದ್ದು ಶೂನ್ಯಕ್ಕೆ ಪೆವಿಲಿಯನ್​ ಸೇರಿದ್ದಾರೆ.

ಮೂರು ಬದಲಾವಣೆಯೊಂದಿಗೆ ಕಣಕ್ಕಿಳಿದ ಟೀಂ ಇಂಡಿಯಾ: ಈ ಪಂದ್ಯದಲ್ಲಿ ಭಾರತ 3 ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ರೋಹಿತ್ ಶರ್ಮಾ, ಶುಭಮನ್ ಗಿಲ್ ಮತ್ತು ರವಿಚಂದ್ರನ್ ಅಶ್ವಿನ್ ತಂಡಕ್ಕೆ ಮರಳಿದ್ದು, ದೇವದತ್ ಪಡಿಕ್ಕಲ್, ಧ್ರುವ್ ಜುರೆಲ್ ಮತ್ತು ವಾಷಿಂಗ್ಟನ್ ಸುಂದರ್ ಹೊರಗುಳಿದಿದ್ದಾರೆ. ಕಾಂಗರೂ ಪಡೆ ಕೂಡ ಒಂದು ಬದಲಾವಣೆಯೊಂದಿಗೆ ಪ್ರವೇಶಿಸಿದೆ. ಗಾಯಕ್ಕೆ ತುತ್ತಾಗಿರುವ ಜೋಶ್ ಹೇಜಲ್‌ವುಡ್ ಬದಲಿಗೆ ಸ್ಕಾಟ್ ಬೋಲ್ಯಾಂಡ್‌ಗೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

INDIA VS AUSTRALIA TEST SERIES  PINK BALL TEST  BLACK ARMBANDS  ಭಾರತ ಆಸ್ಟ್ರೇಲಿಯಾ ಟೆಸ್ಟ್​
Australia Cricket Team (AP)

ಈ ಕಾರಣಕ್ಕಾಗಿ ಕೈಗೆ ಕಪ್ಪು ಪಟ್ಟಿ ಕಟ್ಟಿದ ಆಸೀಸ್​ ಆಟಗಾರರು: ಏತನ್ಮಧ್ಯೆ, ಈ ಪಂದ್ಯದ ಮೊದಲ ದಿನದಂದು ಆಸ್ಟ್ರೇಲಿಯಾ ಆಟಗಾರರು ಕೈಗಳಿಗೆ ಕಪ್ಪುಪಟ್ಟಿಯನ್ನು ಧರಿಸಿ ಪಂದ್ಯವನ್ನಾಡುತ್ತಿದ್ದಾರೆ. ಸಾಮಾನ್ಯವಾಗಿ ಶೋಕವನ್ನು ತೋರಿಸಲು ಮತ್ತು ಗೌರವ ಸಲ್ಲಿಸಲು ಆಟಗಾರರು ಈ ರೀತಿ ಕಪ್ಪು ಪಟ್ಟಿಯನ್ನು ಕೈಗಳಿಗೆ ಧರಿಸುತ್ತಾರೆ. ಇದರಿಂದ ಕಾಂಗರೂ ಪಡೆ ಕೂಡ ಬ್ಯಾಂಡೇಜ್ ಹಾಕಿಕೊಂಡು ಪಂದ್ಯವನ್ನಾಡುತ್ತಿದೆ.

ವಾಸ್ತವವಾಗಿ, 10 ವರ್ಷಗಳ ಹಿಂದೆ, ಆಸ್ಟ್ರೇಲಿಯಾದ ಯುವ ಬ್ಯಾಟ್ಸ್‌ಮನ್ ಫಿಲಿಪ್ ಹ್ಯೂಸ್ ದೇಶೀಯ ಪಂದ್ಯವೊಂದರಲ್ಲಿ ಚೆಂಡು ತಲೆಗೆ ಬಡಿದು ಸಾವನ್ನಪ್ಪಿದ್ದರು. ಆಗ ಅವರಿಗೆ ಕೇವಲ 25 ವರ್ಷವಾಗಿತ್ತು. ಈ ದುರಂತ ಘಟನೆ ನಡೆದು ನ.27ಕ್ಕೆ 10 ವರ್ಷ ಕಳೆದಿದೆ. ಇದಲ್ಲದೆ, ಆಸ್ಟ್ರೇಲಿಯಾದ ಮಾಜಿ ದಿಗ್ಗಜ ಕ್ರಿಕೆಟಿಗ ಇಯಾನ್ ರೆಡ್‌ಪಾತ್ ಡಿಸೆಂಬರ್ 1 ರಂದು ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು ಅವರ ನಿಧನಕ್ಕೂ ಸಂತಾಪ ಸೂಚಿಸಲು ಕಾಂಗರೂ ತಂಡ ಈ ಆರ್ಮ್ ಬ್ಯಾಂಡ್ ಧರಿಸಿದೆ.

ಯಾರೀ ಈ ರೆಡ್‌ಪಾತ್: ಇವರು 1964 ರಿಂದ 1976 ರವರೆಗೆ ಆಸ್ಟ್ರೇಲಿಯಾ ಪರ ಟೆಸ್ಟ್ ಮತ್ತು ODI ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. ಅವರ ಕ್ರಿಕೆಟ್​ ವೃತ್ತಿಜೀವನದಲ್ಲಿ 66 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಇದರಲ್ಲಿ 8 ಶತಕ ಮತ್ತು 31 ಅರ್ಧ ಶತಕಗಳ ಸಹಾಯದಿಂದ 4837 ರನ್ ಗಳಿಸಿದ್ದರು, ಇದಲ್ಲದೆ 5 ODI ಪಂದ್ಯಗಳಲ್ಲಿ, 46 ರನ್ ಗಳಿಸಿದ್ದರು.

ದಿವಂಗತ ಫಿಲ್ ಹ್ಯೂಸ್ ದಾಕಲೆ ನೋಡುವುದಾದರೆ, ಅವರು ಆಸ್ಟ್ರೇಲಿಯಾ ಪರ 26 ಟೆಸ್ಟ್, 25 ODI ಮತ್ತು ಒಂದು T20I ಪಂದ್ಯವನ್ನು ಆಡಿದ್ದಾರೆ. ಅವರ ಹೆಸರಿನಲ್ಲಿ ಒಟ್ಟು 5 ಅಂತಾರಾಷ್ಟ್ರೀಯ ಶತಕಗಳು ದಾಖಲಾಗಿವೆ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 1535 ರನ್ ಮತ್ತು ಏಕದಿನದಲ್ಲಿ 826 ರನ್ ಗಳಿಸಿದ್ದಾರೆ.

ಇದನ್ನೂ ಓದಿ: 37 ಸಿಕ್ಸರ್​, 18 ಬೌಂಡರಿ, 349 ರನ್​: ಟಿ20 ಇತಿಹಾಸದಲ್ಲಿ ವಿಶ್ವದಾಖಲೆ ಬರೆದ ತಂಡ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.