ETV Bharat / sports

ಪ್ರೈವೇಟ್​ ಜೆಟ್​ ಹೊಂದಿರುವ ಭಾರತೀಯ ಕ್ರಿಕೆಟರ್​ಗಳು: ಯಾರ ಬಳಿ ಎಷ್ಟು ಬೆಲೆಯ ಜೆಟ್​ ಇವೆ ಗೊತ್ತಾ? - Indian cricketer owns a private jet - INDIAN CRICKETER OWNS A PRIVATE JET

ಬಿಸಿಸಿಐ ಅಂದ್ರೆನೆ ಶ್ರೀಮಂತ ಕ್ರೀಡಾ ಸಂಸ್ಥೆ. ಇಲ್ಲಿ ಹಹಣದ ಹೊಳೆಯೇ ಹರಿಯುತ್ತದೆ ಅನ್ನೋದು ಅತಿಶಯೋಕ್ತಿ ಅಲ್ಲ. ಹಾಗೆಯೇ ಕ್ರಿಕೆಟಿಗರು ಕೂಡ ಒಂದು ಬಾರಿ ತಂಡಕ್ಕೆ ಆಯ್ಕೆ ಆದ್ರೆ ಅವರ ಲಕ್​ ಬದಲಾದಂತೆಯೇ ಎಂಬ ಮಾತುಗಳು ಕೇಳಿಬರೋದು ಸಹಜ. ಭಾರತ ಕ್ರಿಕೆಟ್​ ತಂಡದ ಹಾಲಿ, ಮಾಜಿ ಆಟಗಾರರು ಪ್ರೈವೇಟ್​ ಜೆಟ್​ ಅನ್ನು ಹೊಂದಿದ್ದಾರೆ. ಯಾರು ಅವರು ಎಂಬುದನ್ನು ಇಲ್ಲಿ ತಿಳಿಯೋಣ..

ಜೆಟ್​ ವಿಮಾನ
ಜೆಟ್​ ವಿಮಾನ (Flickr Images)
author img

By ETV Bharat Sports Team

Published : Sep 1, 2024, 6:08 PM IST

Updated : Sep 2, 2024, 1:00 PM IST

ಹೈದರಾಬಾದ್​: ಸಚಿನ್​ ತೆಂಡೂಲ್ಕರ್​, ಎಮ್​.ಎಸ್​ ಧೋನಿ, ವಿರಾಟ್​ ಕೊಹ್ಲಿ ವಿಶ್ವದ ಅಗ್ರ ಮೂವರು ಶ್ರೀಮಂತ ಕ್ರಿಕೆಟರ್​ ಆಗಿದ್ದಾರೆ. ಕ್ರಿಕೆಟ್​ ಮೂಲಕ ಹೆಚ್ಚಿನ ಆದಾಯ ಗಳಿಸಿರುವ ಇವರು ಐಷಾರಾಮಿ ಜೀವನದಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. ಬೆಲೆ ಬಾಳುವ ಬಂಗ್ಲೆ, ಕಾರುಗಳನ್ನು ಹೊಂದಿರುವ ಇವರು ಪ್ರೈವೇಟ್​ ಜೆಟ್​ಗಳನ್ನು ಸಹ ಹೊಂದಿದ್ದಾರೆ. ಹಾಗಾದ್ರೆ ಭಾರತದ ಯಾವ ಕ್ರಿಕೆಟರ್​ ಬಳಿ ಪ್ರೈವೇಟ್​ ಜೆಟ್​ ಇದೆ ಎಂಬುದನ್ನು ಈ ಸುದ್ದಿಯಲ್ಲಿ ತಿಳಿಯೋಣ.

ಪ್ರೈವೇಟ್​ ಜೆಟ್​ ಹೊಂದಿರುವ ಭಾರತೀಯ ಕ್ರಿಕೆಟರ್​ಗಳು;

  1. ಕಪಿಲ್​ ದೇವ್​: ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರೆಂದು ಕಪಿಲ್ ದೇವ್ ಅವರನ್ನು ಪರಿಗಣಿಸಲಾಗಿದೆ ಮತ್ತು ಅವರ ನಾಯಕತ್ವದಲ್ಲಿ 1983ರಲ್ಲಿ ಭಾರತ ಮೊದಲ ಬಾರಿಗೆ ವಿಶ್ವಕಪ್ ಗೆದ್ದುಕೊಂಡಿತ್ತು. ಸ್ವಾತಂತ್ರ್ಯ ನಂತರ ಖಾಸಗಿ ಜೆಟ್​ ಖರೀದಿಸಿದ ಮೊದಲ ಕ್ರಿಕೆಟರ್​ ಕಪಿಲ್ ದೇವ್ ಆಗಿದ್ದಾರೆ. ಕಪಿಲ್ ದೇವ್ ಬಳಿ ಇರುವ ಖಾಸಗಿ ಜೆಟ್​ನ ಬೆಲೆ 110 ಕೋಟಿ ರೂ. ಆಗಿದೆ.
    ಕಪಿಲ್​ ದೇವ್​
    ಕಪಿಲ್​ ದೇವ್​ (IANS Photos)
  2. ಸಚಿನ್​ ತೆಂಡೂಲ್ಕರ್​: ಕ್ರಿಕೆಟ್ ದೇವರು ಎಂದೇ ಖ್ಯಾತಿ ಗಳಿಸಿರುವ ಸಚಿನ್ ತೆಂಡೂಲ್ಕರ್ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ಜತೆಗೆ ವಿಶ್ವದ ಶ್ರೀಮಂತ ಕ್ರಿಕೆಟರ್​ ಕೂಡ ಆಗಿದ್ದು, ಖಾಸಗಿ ಜೆಟ್ ಅನ್ನು ಹೊಂದಿದ್ದಾರೆ. ಇವರು ಬಳಿ ಇರುವ ಜೆಟ್​ ಅತ್ಯಂತ ದುಬಾರಿಯದ್ದಾಗಿದೆ. ಇದರ ಬೆಲೆ 250 ಕೋಟಿ ರೂ.​ ಆಗಿದೆ.
    ಸಚಿನ್​ ತೆಂಡೂಲ್ಕರ್​
    ಸಚಿನ್​ ತೆಂಡೂಲ್ಕರ್​ (IANS Photos)
  3. ಎಂಎಸ್ ಧೋನಿ: ಎಲ್ಲಾ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದ ವಿಶ್ವದ ಏಕೈಕ ನಾಯಕ ಎಂಎಸ್ ಧೋನಿ ಆಗಿದ್ದಾರೆ. ಅವರ ಶ್ರೇಷ್ಠ ನಾಯಕನ ಜೊತೆ ವಿಶ್ವದ ಶ್ರೀಮಂತ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದಾರೆ. ಎಂಎಸ್ ಧೋನಿ ಖಾಸಗಿ ಜೆಟ್ ಮಾಲೀಕ ಸಹ ಆಗಿದ್ದಾರೆ. ಇವರ ಬಳಿಯಿರುವ ಜೆಟ್​ನ ಬೆಲೆ 110 ಕೋಟಿ ಮೌಲ್ಯದ್ದಾಗಿದೆ.
  4. ವಿರಾಟ್ ಕೊಹ್ಲಿ: ರನ್​ ಮಶಿನ್​ ವಿರಾಟ್​ ಕೊಹ್ಲಿ ಐಷಾರಾಮಿ ಜೀವನದಿಂದ ಸದಾ ಸುದ್ದಿಯಲ್ಲಿರುತ್ತಾರೆ. ಇವರ ಬಳಿ ದುಬಾರಿ ಬೆಲೆಯ ಕಾರು ಸೇರಿದಂತೆ ಪ್ರೈವೇಟ್​ ಜೆಟ್​ ಕೂಡ ಇದೆ. ಕೊಹ್ಲಿ ಅವರ ಖಾಸಗಿ ಜೆಟ್​ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿದ್ದು, ಆರಾಮದಾಯಕ ಪ್ರಯಾಣದ ಅನುಭವವನ್ನು ಒದಗಿಸುತ್ತದೆ. ಇದರ ಬೆಲೆ 120 ಕೋಟಿ ರೂ. ಆಗಿದೆ.
    ವಿರಾಟ್​ ಕೊಹ್ಲಿ
    ವಿರಾಟ್​ ಕೊಹ್ಲಿ (IANS Photos)
  5. ಹಾರ್ದಿಕ್​ ಪಾಂಡ್ಯ: ಟೀಂ ಇಂಡಿಯಾದ ಸ್ಟಾರ್​ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಅತ್ಯುತ್ತಮ ಕ್ರಿಕೆಟ್​ರಗಳಲ್ಲಿ ಒಬ್ಬರಾಗಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್​ನಲ್ಲಿ ಅದ್ಭುತ ಪ್ರದರ್ಶನ ತೋರಿರುವ ಪಾಂಡ್ಯ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಾರ್ದಿಕ್​ ಭಾರತದ ಶ್ರೀಮಂತ ಕ್ರಿಕೆಟ್​ರಗಳಲ್ಲಿ ಒಬ್ಬರಾಗಿದ್ದು, ಖಾಸಗಿ ಜೆಟ್​ನ ಮಾಲೀಕರೂ ಆಗಿದ್ದಾರೆ. ಇವರ ಬಳಿ 40 ಕೋಟಿ ಮೌಲ್ಯದ ಜೆಟ್​ ಇದೆ.
    ಹಾರ್ದಿಕ್​ ಪಾಂಡ್ಯ
    ಹಾರ್ದಿಕ್​ ಪಾಂಡ್ಯ (IANS Photos)

ಇದನ್ನೂ ಓದಿ: ಸಚಿನ್​ ನಿರ್ಮಿಸಿರುವ ಈ 3 ದಾಖಲೆ ಮುರಿಯುವುದು ಕೊಹ್ಲಿಗೆ ಅಸಾಧ್ಯವೇ? - Sachin Tendlukar Records

Last Updated : Sep 2, 2024, 1:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.