ಹೈದರಾಬಾದ್: ಪ್ರತಿಯೊಂದು ಕ್ರೀಡೆಯಂತೆ ಕ್ರಿಕೆಟ್ ಕೂಡ ತನ್ನದೇ ಆದ ಆಡಳಿತ ಮಂಡಳಿಯನ್ನು ಹೊಂದಿದೆ. ಇದು ಕ್ರೀಡೆಯ ಹಣಕಾಸು ವ್ಯವಹಾರ ಸೇರಿದಂತೆ ಪಂದ್ಯಾವಳಿಗಳ ಆಯೋಜನೆ, ಆಟಗಾರರ ಒಪ್ಪಂದ, ಪ್ರಸಾರ ಹಕ್ಕುಗಳು ಮತ್ತು ಪ್ರಾಯೋಜಕತ್ವಗಳ ಕಾರ್ಯವನ್ನು ನೋಡಿಕೊಳ್ಳುತ್ತವೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ, ನಾವು ICC (ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್) ಅನ್ನು ಹೊಂದಿದ್ದೇವೆ. ಇದು ಜಾಗತಿಕವಾಗಿ ಕ್ರಿಕೆಟ್ ಕ್ರೀಡೆಯ ಮೇಲ್ವಿಚಾರಣೆ ಮಾಡುವುದರ ಜೊತೆಗೆ ವಿಶ್ವಕಪ್‌ನಂತಹ ಪ್ರಮುಖ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸುತ್ತದೆ.
ಐಸಿಸಿ ಹೊರತಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಕ್ರೀಡೆಯಲ್ಲಿ ಭಾಗಿಯಾಗವ ಪ್ರತಿಯೊಂದು ದೇಶವೂ ತನ್ನದೇ ಆದ ಕ್ರಿಕೆಟ್ ಮಂಡಳಿಗಳನ್ನು ಹೊಂದಿರುತ್ತವೆ. ಹಾಗಾದ್ರೆ ವಿಶ್ವದ ಅತ್ಯಂತ 10 ಶ್ರೀಮಂತ ಕ್ರಿಕೆಟ್ ಮಂಡಳಿಗಳು ಯಾವವು ಅವುಗಳ ನಿವ್ವಳ ಮೊತ್ತ ಎಷ್ಟು ಎಂಬುದರ ಬಗ್ಗೆ ಈ ಸುದ್ಧಿಯಲ್ಲಿ ತಿಳಿಯೋಣ.
ಟಾಪ್ 10 ಶ್ರೀಮಂತ ಕ್ರಿಕೆಟ್ ಮಂಡಳಿಗಳು;
1. BCCI: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸ್ವಾಯತ್ತವಾಗಿ ಕಾರ್ಯನಿರ್ವಹಿಸುವ ಇದು 1928ರಲ್ಲಿ ಚೆನ್ನೈನಲ್ಲಿ ಸ್ಥಾಪಿತವಾಯಿತು. ಸದ್ಯ ಮುಂಬೈನಲ್ಲಿ ನೆಲೆಗೊಂಡಿದೆ. ಇದು ಭಾರತದಲ್ಲಿ ಕ್ರಿಕೆಟ್ ಕ್ರೀಡಾ ವ್ಯವಹಾರಗಳನ್ನು ನೋಡಿಕೊಳ್ಳುತ್ತದೆ. ವರದಿಗಳ ಪ್ರಕಾರ ಬಿಸಿಸಿಐನ ನಿವ್ವಳ ಮೌಲ್ಯವು 2023-24ನೇ ಆರ್ಥಿಕ ವರ್ಷದಲ್ಲಿ $2.25 ಶತಕೋಟಿ ಡಾಲರ್ (18,700 ಕೋಟಿಗೂ ಹೆಚ್ಚು) ಆಗಿದೆ. 2022-23ನೇ ಹಣಕಾಸು ವರ್ಷದಲ್ಲಿ ಬಿಸಿಸಿಐ ₹4,298 ಕೋಟಿ ತೆರಿಗೆಯನ್ನು ಪಾವತಿಸಿದೆ.
ಆದಾಯ ಮೂಲಗಳು: ಬಿಸಿಸಿಐನ ಬೊಕ್ಕಸಕ್ಕೆ ಐಪಿಎಲ್ ಗಣನೀಯ ಕೊಡುಗೆ ನೀಡುತ್ತದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಇದು ಹೆಚ್ಚಿನ ಆದಾಯವನ್ನು ತಂದುಕೊಡುತ್ತದೆ. ಮಹಿಳಾ ಪ್ರೀಮಿಯರ್ ಲೀಗ್ನಿಂದಲು ಹಣ ಹರಿದು ಬರತೊಡಗಿದೆ. ಇದರ ಹೊರತಾಗಿಯೂ ಪ್ರಸಾರ ಹಕ್ಕುಗಳ ಮಾರಾಟ ಬಿಸಿಸಿಐ ಬೊಕ್ಕಸ ತುಂಬಿಸುತ್ತಿವೆ.
2. CA: ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಇದೆ. ಇದರ ಒಟ್ಟು ಮೌಲ್ಯ $79 ಮಿಲಿಯನ್ ಡಾಲರ್ (663 ಕೋಟಿಗೂ ಹೆಚ್ಚು)ಆಗಿದೆ. ಇದು ಬಿಗ್ ಬ್ಯಾಶ್ T20 ಲೀಗ್ ಮೂಲಕ ಹೆಚ್ಚಿನ ಹಣ ಗಳಿಸುತ್ತದೆ.
3. ECB: ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯೂ $59 ಮಿಲಿಯನ್ ಡಾಲರ್ (495 ಕೋಟಿಗೂ ಹೆಚ್ಚು) ಆಗಿದೆ. ಇದು ವಿಶ್ವದ ಮೂರನೇ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿಕೊಂಡಿದೆ.
4. PCB: ಪಾಕಿಸ್ತಾನ ಕ್ರಿಕೆಟ್ ಮಂಡಳಿ $55 ಮಿಲಿಯನ್ ಡಾಲರ್ (450 ಕೋಟಿಗೂ ಅಧಿಕ)
5. BCB: ಬಾಂಗ್ಲಾದೇಶ್ ಕ್ರಿಕೆಟ್ ಮಂಡಳಿ ಇತ್ತೀಚಿನ ದಿನಗಳಲ್ಲಿ ಗಮನಾರ್ಹ ಪ್ರಗತಿ ಕಂಡಿದೆ. ಇದರ ಒಟ್ಟು ನಿವ್ವಳ ಮೌಲ್ಯ $51 ಮಿಲಿಯನ್ ಡಾಲರ್ (400 ಕೋಟಿಗೂ ಹೆಚ್ಚು)
6. CSA: ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ $47 ಮಿಲಿಯನ್ ಡಾಲರ್ (350 ಕೋಟಿಗೂ ಹೆಚ್ಚು)
7. ZICB: ಜಿಂಬಾಬ್ವೆ ಕ್ರಿಕೆಟ್ ಮಂಡಳಿ $38 ಮಿಲಿಯನ್ ಡಾಲರ್ (300 ಕೋಟಿಗೂ ಅಧಿಕ)
8. SLC: ಶ್ರೀಲಂಕಾ ಕ್ರಿಕೆಟ್ ಮಂಡಳಿ $20 ಮಿಲಯನ್ ಡಾಲರ್ (150 ಕೋಟಿಗೂ ಹೆಚ್ಚು)
9. WICB: ವೆಸ್ಟ್ ಇಂಡೀಸ್ ಕ್ರಿಕೆಟ್ ನಿಯಂತ್ರಣ ಮಂಡಳಿ $15 ಮಿಲಿಯನ್ ಡಾಲರ್ (100 ಕೋಟಿಗೂ ಹೆಚ್ಚು)
10. NZC: ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ $9 ಮಿಲಿಯನ್ ಡಾಲರ್ (75 ಕೋಟಿಗೂ ಅಧಿಕ)
ಇದನ್ನೂ ಓದಿ: ವಿನೇಶ್ ಫೋಗಟ್ ಮೇಲ್ಮನವಿ ತೀರ್ಪಿನ ಗಡುವು ವಿಸ್ತರಣೆ: CAS ನಿರ್ಧಾರ ಪ್ರಕಟ ಯಾವಾಗ? - PARIS OLYMPICS 2024