ETV Bharat / sports

ಟಿ20 ವಿಶ್ವಕಪ್‌ಗೆ ತಂಡ ಇನ್ನೂ ಅಂತಿಮಗೊಂಡಿಲ್ಲ: ರೋಹಿತ್​ ಶರ್ಮಾ

ಟಿ20 ವಿಶ್ವಕಪ್‌ಗೆ ಇನ್ನೂ ತಂಡವನ್ನು ಅಂತಿಮಗೊಳಿಸಿಲ್ಲ ಎಂದು ನಾಯಕ ರೋಹಿತ್​ ಶರ್ಮಾ ಹೇಳಿದ್ದಾರೆ.

ನಾಯಕ ರೋಹಿತ್​ ಶರ್ಮಾ
ನಾಯಕ ರೋಹಿತ್​ ಶರ್ಮಾ
author img

By ANI

Published : Jan 20, 2024, 7:39 AM IST

ನವದೆಹಲಿ: ಮುಂಬರುವ (2024) ಟಿ20 ವಿಶ್ವಕಪ್‌ಗೆ ತಂಡವನ್ನೂ ಇನ್ನೂ ಅಂತಿಮಗೊಳಿಸಿಲ್ಲ. ಆದರೆ, ಅದಕ್ಕೆ ಬೇಕಿರುವ ಸಿದ್ಧತೆ ನಡೆಯುತ್ತಿದೆ ಎಂದು ಭಾರತೀಯ ಕ್ರಿಕೆಟ್​ ತಂಡದ ನಾಯಕ ರೋಹಿತ್​ ಶರ್ಮಾ ಹೇಳಿದ್ದಾರೆ. ಭವಿಷ್ಯದ ಕ್ರಿಕೆಟ್​ ಕುರಿತು JioCinema ಜೊತೆ ಮಾತನಾಡಿದ ಅವರು, ಮುಂಬರುವ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಪ್ರಬಲ ಸ್ಪರ್ಧಿಯಾಗಿದೆ. ಭಾರತ ವಿಶ್ವಕಪ್ ಗೆಲ್ಲುವ ತಂಡ. ಅದಕ್ಕೆ ಬೇಕಾದ ಪ್ರಯತ್ನ ಕೂಡ ನಡೆದಿದೆ. ಆದರೆ, ಮಾತನಾಡುವುದರಿಂದ ಏನೂ ಆಗುವುದಿಲ್ಲ. ಅದಕ್ಕೆ ಬೇಕಿರುವ ಸಿದ್ಧತೆ ಮಾಡಿಕೊಳ್ಳಬೇಕಷ್ಟೇ. ಅದರಂತೆ ಒಂದಿಷ್ಟು ತಯಾರಿ ಕೂಡ ಆಗಿದೆ ಎಂದು ಅವರು ಹೇಳಿದ್ದಾರೆ.

ಟಿ20 ವಿಶ್ವಕಪ್‌ಗಾಗಿ ತಂಡ ಅಂತಿಮಗೊಳ್ಳದಿದ್ದರೂ ತಲೆಯಲ್ಲಿ 8 ರಿಂದ 10 ಜನ ಆಟಗಾರರ ಹೆಸರುಗಳಿದ್ದು, ಅವರು ತಂಡದಲ್ಲಿರಬಹುದು. ಆದರೆ, ಅವರು ಯಾರು ಎಂಬುದನ್ನು ಸದ್ಯಕ್ಕೆ ಬಹಿರಂಗಪಡಿಸಲ್ಲ. 15 ಆಟಗಾರರ ಪೈಕಿ 8 ರಿಂದ 10 ಆಟಗಾರರು ಫೈನಲ್ ಆಗಿದ್ದಾರೆ. ಬಾಕಿ ಐವರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಐಪಿಎಲ್ ಬಳಿಕ ಆ ಐದು ಜನ ಆಟಗಾರರ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಹ ರೋಹಿತ್​ ತಿಳಿಸಿದ್ದಾರೆ.

ಪ್ರವಾಸ ಮತ್ತು ಪರಿಸ್ಥಿತಿಗಳನ್ನು ಅನುಸರಿಸಿ ತಂಡ ಕಟ್ಟಬೇಕಿದೆ. ವೆಸ್ಟ್ ಇಂಡೀಸ್​​ನಲ್ಲಿ ಪಿಚ್ ನಿಧಾನ ಇರುತ್ತದೆ. ಇದಕ್ಕೆ ಅನುಗುಣವಾಗಿ ನಾವು ತಂಡವನ್ನು ಆಯ್ಕೆ ಮಾಡಬೇಕಿದೆ. ಮುಖ್ಯ ಕೋಚ್​ ರಾಹುಲ್ ದ್ರಾವಿಡ್ ಜೊತೆಗೂಡಿ ಒಂದು ಸ್ಪಷ್ಟತೆಗೆ ಬರಲಾಗುವುದು. ನಾವು ಪ್ರತಿ ಆಟಗಾರರಿಗೆ ಯಾಕೆ ಅಯ್ಕೆಯಾಗಿದ್ದೀರಿ ಮತ್ತು ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಯಾಕೆ ಆಯ್ಕೆಯಾಗಿಲ್ಲ ಎಂದು ಮನವರಿಕೆ ಮಾಡಲು ಯತ್ನಿಸುತ್ತೇವೆ. ಕೆಲವರು 15ರಲ್ಲಿ ಬಂದರೂ 11ರ ಬಳಗದಲ್ಲಿ ಬರದಿರಬಹುದು. ಎಲ್ಲರನ್ನೂ ಸಂತೋಷಪಡಿಸಲು ಸಾಧ್ಯವಿಲ್ಲ. ಇದು ನಾಯಕತ್ವ ವಹಿಸಿಕೊಂಡ ಬಳಿಕ ನಾನು ಕಲಿತ ಪಾಠ. ಎಲ್ಲವೂ ತಂಡದ ಅಗತ್ಯತೆಗಳ ಮೇಲೆ ನಡೆಯುತ್ತಿರುತ್ತದೆ. ಅಫ್ಘಾನಿಸ್ತಾನ ವಿರುದ್ಧದ ಸರಣಿ ಆರಂಭಕ್ಕೂ ಮುನ್ನ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ಈ ಬಗ್ಗೆ ಚರ್ಚಿಸಿರುವೆ ಎಂದು ರೋಹಿತ್​ ತಮ್ಮ ಅನುಭವದ ಬಗ್ಗೆ ಹಂಚಿಕೊಂಡರು.

ಇದೇ ವೇಳೆ ತಂಡದ ಬೌಲಿಂಗ್​ ವಿಧಾನ ಮತ್ತು ಯುವ ಆಟಗಾರರ ಬಗ್ಗೆಯೂ ಪ್ರಸ್ತಾಪ ಮಾಡಿದ ರೋಹಿತ್​, ಬೌಲಿಂಗ್ ದಾಳಿಯನ್ನು ವಿಭಿನ್ನ ರೀತಿಯಲ್ಲಿ ಬಳಸಬೇಕಿದೆ ಎಂದರು. ಹಲವು ಯುವ ಆಟಗಾರರು ತುಂಬಾ ಉತ್ಸುಹಕದಲ್ಲಿದ್ದಾರೆ. ಅವಕಾಶ ಮಾಡಿಕೊಡುವುದೇ ಸವಾಲಿನ ಕೆಲಸ. ಉತ್ತಮ ಪ್ರದರ್ಶನದ ಹೊರತಾಗಿಯೂ ಕೆಲವರು ಹೊರಗುಳಿಯುತ್ತಿರುವುದು ನಿರಾಸೆ ತಂದಿದೆ. ಆದರೆ, ತಂಡಕ್ಕೆ ಸ್ಪಷ್ಟತೆ ತರುವುದು ನಮ್ಮ ಕೆಲಸ. ನಾವು ಏನಾದರೂ ಮಾಡಬೇಕೆಂದು ಬಯಸಿದರೆ ಅದು ಇನ್ನೇನೋ ನಡೆಯುತ್ತಿದೆ. ಹೀಗಾಗಿ ಇರುವ 25-30 ಆಟಗಾರರ ಪೂಲ್‌ನಲ್ಲಿ ಪ್ರತಿ ಆಟಗಾರರಿಂದ ಏನನ್ನು ನಿರೀಕ್ಷಿಸಲಾಗಿದೆ ಎಂಬ ಬಗ್ಗೆ ಅವರಿಗೆ ತಿಳಿದಿದೆ ಎಂದು ವಿವರಿಸಿದರು.

ಇದನ್ನೂ ಓದಿ: ಗಬ್ಬಾ ಕೋಟೆ ಭೇದಿಸಿ ಆಸೀಸ್‌ ಬಗ್ಗುಬಡಿದ ಭಾರತ: ಐತಿಹಾಸಿಕ ಗೆಲುವಿಗೆ 3 ವರ್ಷ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.