ವಿರಾಟ್ ಕೊಹ್ಲಿ ಇನ್ಸ್ಟಾ ಪೋಸ್ಟ್ಗಳಿಗೆ 100 ಕೋಟಿ ಲೈಕ್ಸ್: ಮೊದಲ ಭಾರತೀಯನೆಂಬ ದಾಖಲೆ - ಇನ್ಸ್ಟಾಗ್ರಾಮ್ 100 ಕೋಟಿ ಲೈಕ್ಸ್
ಇನ್‌ಸ್ಟಾಗ್ರಾಮ್‌ನಲ್ಲಿ ವಿರಾಟ್ ಕೊಹ್ಲಿ ಹಂಚಿಕೊಂಡ ಪೋಸ್ಟ್ಗಳಿಗೆ ಬರೋಬ್ಬರಿ 100 ಕೋಟಿ ಲೈಕ್ಸ್ ಬಂದಿವೆ.
Published : Feb 26, 2024, 10:04 AM IST
ನವದೆಹಲಿ: ಭಾರತದ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮೈದಾನದಲ್ಲೂ ಮತ್ತು ಹೊರಗೂ ದಾಖಲೆಯ ವೀರನೇ ಸರಿ. ಕ್ರಿಕೆಟ್ನಲ್ಲಿ ಹಲವು ಮುರಿಯಲಾಗದ ರೆಕಾರ್ಡ್ಗಳನ್ನು ನಿರ್ಮಿಸಿರುವ ಬ್ಯಾಟಿಂಗ್ ಕಿಂಗ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಪೋಸ್ಟ್ಗಳಿಗೆ 10 ಮಿನಿಯನ್ (100 ಕೋಟಿ) ಲೈಕ್ಗಳನ್ನು ಪಡೆದುಕೊಂಡಿದ್ದಾರೆ. ಇದು ಯಾವುದೇ ಭಾರತೀಯ ಪಡೆದ ಅತಿದೊಡ್ಡ ಪ್ರಮಾಣದ ಮೆಚ್ಚುಗೆ ಇದಾಗಿದೆ.
ಫೆಬ್ರವರಿ 15 ರಂದು ಅನುಷ್ಕಾ ಮತ್ತು ವಿರಾಟ್ ಕೊಹ್ಲಿ ದಂಪತಿ 2ನೇ ಮಗುವಿಗೆ ಜನ್ಮ ನೀಡಿದರು. ಗಂಡು ಮಗುವಿಗೆ ಅಕಾಯ್ ಎಂದು ಹೆಸರಿಡಲಾಗಿದ್ದು, ಅದರ ಮಾಹಿತಿಯನ್ನು ವಿರಾಟ್ ಕೊಹ್ಲಿ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದರು. ಇದಕ್ಕೆ 100 ಕೋಟಿಯಷ್ಟು ಲೈಕ್ಸ್ಗಳು ಬಂದಿವೆ. ಇದು ಕೂಡ ದಾಖಲೆಯ ಪಟ್ಟಿಗೆ ಸೇರಿದೆ.
ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಏಕೈಕ ಭಾರತೀಯ ಕೂಡ ಹೌದು. ಸಾಮಾಜಿಕ ಮಾಧ್ಯಮ ಪೋರ್ಟಲ್‌ನಲ್ಲಿ 266 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿರುವ ಯಾವೊಬ್ಬ ಭಾರತೀಯನೂ ಈ ಸ್ಥಾನವನ್ನು ಪಡೆಯಲು ಸಾಧ್ಯವಾಗಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.
ಕುಟುಂಬಕ್ಕಾಗಿ ಇಂಗ್ಲೆಂಡ್ ಸರಣಿ ಮಿಸ್: ವಿರಾಟ್ ಕೊಹ್ಲಿ ಕುಟುಂಬಕ್ಕಾಗಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದಲೇ ದೂರ ಉಳಿದಿದ್ದಾರೆ. ಮೊದಲೆರಡು ಟೆಸ್ಟ್ಗಳಿಗೆ ಮೊದಲು ವಿಶ್ರಾಂತಿ ಪಡೆದಿದ್ದ ಅವರು ಬಳಿಕ ಉಳಿದ ಮೂರು ಪಂದ್ಯಗಳಿಗೂ ಅಲಭ್ಯರಾಗಿರುವುದಾಗಿ ತಿಳಿಸಿದ್ದರು. ಇದನ್ನು ಬೆಂಬಲಿಸಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕ್ರಿಕೆಟ್ನಿಂದ ದೀರ್ಘ ರಜೆ ನೀಡಿದೆ. ಇದರ ಬೆನ್ನಲ್ಲೇ ವಿರಾಟ್, ಪುತ್ರನ ಜನನದ ಮಾಹಿತಿ ಹಂಚಿಕೊಂಡಿದ್ದರು. ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೂಲಕ ಅವರು ಕ್ರಿಕೆಟ್ಗೆ ಮರಳುವ ನಿರೀಕ್ಷೆ ಇದೆ.
ವಿರಾಟ್ಗೆ ಡೀಪ್‌ಫೇಕ್ ಬಿಸಿ: ಟೀಂ ಇಂಡಿಯಾದ ಮಾಜಿ ನಾಯಕ ಮತ್ತು ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಡೀಪ್‌ಫೇಕ್ ವಿಡಿಯೋ ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಬೆಟ್ಟಿಂಗ್ ಆ್ಯಪ್ ಪ್ರಚಾರ ಮಾಡುತ್ತಿರುವುದನ್ನು ಬಿಂಬಿಸಲಾಗಿದೆ. ಡೀಪ್‌ಫೇಕ್ ಫೋಟೋಗಳು ಮತ್ತು ವಿಡಿಯೋಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮತ್ತು ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಕ್ರಮ ಕೈಗೊಳ್ಳುತ್ತಿವೆ. ಆದರೂ, ಸೈಬರ್ ಅಪರಾಧಿಗಳು ಪ್ರತಿನಿತ್ಯ ಸೆಲೆಬ್ರಿಟಿಗಳ ಡೀಪ್‌ಫೇಕ್‌ಗಳನ್ನು ಬಿಡುಗಡೆ ಮಾಡುತ್ತಿರುವುದು ಮುಜುಗರ, ಕಿರಿಕಿರಿಯನ್ನುಂಟು ಮಾಡುವಂತಿದೆ.
ಇದನ್ನೂ ಓದಿ: ಲಂಡನ್‌ನಿಂದ ಕೊಹ್ಲಿ ಫೋಟೋ ವೈರಲ್: ವಿರುಷ್ಕಾ ಪುತ್ರ 'ಅಕಾಯ್' ಹೆಸರಿನ ಅರ್ಥವೇನು ಗೊತ್ತಾ?