CSK Skipper Ruturaj Gaikwad Trolls RCB: ವಿಶ್ವದ ಅತ್ಯಂತ ಜನಪ್ರಿಯ ಟಿ20 ಕ್ರಿಕೆಟ್ ಲೀಗ್‌ಗಳಲ್ಲಿ ಒಂದಾದ ಐಪಿಎಲ್‌ನ ಮೆಗಾ ಹರಾಜು ಇತ್ತೀಚೆಗೆ ಮುಕ್ತಾಯಗೊಂಡಿದ್ದು, ಇದೀಗ ಎಲ್ಲರ ಕಣ್ಣು ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಆರಂಭವಾಗಲಿರುವ 18ನೇ ಆವೃತ್ತಿಯ ಐಪಿಎಲ್ನತ್ತ ನೆಟ್ಟಿದೆ. ಇದಕ್ಕೂ ಮುನ್ನವೇ ಕೆಲ ತಂಡಗಳ ಮುಂದಿನ ನಾಯಕರ ಕುರಿತು ಭಾರೀ ಚರ್ಚೆಗಳು ನಡೆಯುತ್ತಿವೆ.
ಇವುಗಳ ನಡುವೆಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳ ವಿರುದ್ಧ ಸುಳ್ಳು ಆರೋಪ ಮಾಡಿದ್ದು RCBಗರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ರುತುರಾಜ್ ಮಾಡಿರುವ ಆರೋಪದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಬೆಂಗಳೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ರುತುರಾಜ್ ಗಾಯಕ್ವಾಡ್ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ, ಗಾಯಕ್ವಾಡ್ ಅವರನ್ನು ವೇದಿಕೆ ಆಹ್ವಾನಿಸಲಾಯಿತು. ಬಳಿಕ ಅವರನ್ನು ಮಾತನಾಡಿಸಲು ನಿರೂಪಕರು ಪ್ರಾರಂಭಿಸಿದರು. ಪ್ರಶ್ನೆಯೊಂದನ್ನು ಕೇಳಿದರು. ಆದರೆ ಅದಕ್ಕೆ ಪ್ರತಿಕ್ರಿಯೆ ನೀಡಲು ಮುಂದಾದ ರುತುರಾಜ್ ಅವರ ಮೈಕ್ ಆಫ್ ಆಗಿತ್ತು. ಇದರಿಂದ ರುತುರಾಜ್ ಕೊಂಚ ಇರಿಸು ಮುರಿಸುಗೊಂಡರು.
ಬಳಿಕ ನಿರೂಪಕರು, "ರುತುರಾಜ್ ಅವರ ಮೈಕ್ ಅನ್ನು ನೀವು ಹೇಗೆ ಆಫ್ ಮಾಡಬಹುದು ಎಂದು ಮೈಕ್ ಆಪ್ರೇಟರ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿದ ಗಾಯಕ್ವಾಡ್, ಬಹುಶ ಆರ್‌ಸಿಬಿಯವರು ಯಾರೋ ಮೈಕ್ ಆಫ್ ಮಾಡಿರಬೇಕು ಎಂದು ಹೇಳಿದ್ದಾರೆ.
Ruturaj Gaikwad's mic was turned off.
— Mufaddal Vohra (@mufaddal_vohra) December 19, 2024
Ruturaj - might be someone from RCB.pic.twitter.com/Xc79fyV3iS
ಇದರ ಬೆನ್ನಲ್ಲೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ರುತುರಾಜ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ RCBಗರು, ಚಿನ್ನಸ್ವಾಮಿ ಮೈದಾನದ ಮುಂದಿನ ವಾಟರ್ ಬಾಟಲ್ ಸಪ್ಲೈಯರ್ ಎಂದು ಚಾಟೀ ಬೀಸಿದ್ದಾರೆ.
Bro is cooking off the field 😂🤣 pic.twitter.com/Hkl6LOjJqF
— VIRAT LOVER (@GAMINGW31941664) December 19, 2024
ರುತುರಾಜ್ ನಾಯಕತ್ವದಲ್ಲಿ ಫ್ಲೇ ಆಫ್‌ಗೂ ತಲುಪದ CSK: ಐಪಿಎಲ್ 2024ರಲ್ಲಿ, ರುತುರಾಜ್ ಗಾಯಕ್ವಾಡ್ ಅವರು ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿದ್ದರು. ಧೋನಿ ನಂತರ ಗಾಯಕ್ವಾಡ್ ಅವರನ್ನು ನಾಯಕರನ್ನಾಗಿ ಮಾಡಲಾಗಿತ್ತು. ಆದರೆ, ಗಾಯಕ್ವಾಡ್ ನಾಯಕತ್ವದಲ್ಲಿ 5 ಬಾರಿಯ ಚಾಂಪಿಯನ್ CSK ಪ್ಲೇ ಆಫ್‌ಗೂ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಅಂಕಪಟ್ಟಿಯಲ್ಲಿ ತಂಡ ಐದನೇ ಸ್ಥಾನದಲ್ಲಿತ್ತು. ಈ ತಂಡ 7 ಪಂದ್ಯಗಳಲ್ಲಿ 7ರಲ್ಲಿ ಗೆದ್ದು 7ರಲ್ಲಿ ಸೋತಿತ್ತು.
ಸಿಎಸ್ಕೆ ಹೊರ ಹಾಕಿದ್ದ ಆರ್‌ಸಿಬಿ: ಈ ವರ್ಷ ನಡೆದ ಐಪಿಎಲ್ನಲ್ಲಿ RCB ಪ್ಲೇಆಫ್‌ಗೆ ಅರ್ಹತೆ ಪಡೆದಿತ್ತು. ಕೊನೆಯ ಲೀಗ್ ಪಂದ್ಯದಲ್ಲಿ ಚೆನ್ನೈ ತಂಡವನ್ನು ಸೋಲಿಸಿ ಪ್ಲೇಆಫ್ ಪ್ರವೇಶಿಸಿತ್ತು. ಆರ್‌ಸಿಬಿ ಕೂಡ 7 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿತ್ತು.
ಇದನ್ನೂ ಓದಿ: ರೋಹಿತ್, ಕೊಹ್ಲಿ, ಅಶ್ವಿನ್ ಸೇರಿ 2024ರಲ್ಲಿ ಒಟ್ಟು 11 ಕ್ರಿಕೆಟಿಗರಿಂದ ನಿವೃತ್ತಿ ಘೋಷಣೆ