ETV Bharat / sports

ಹಿರಿಯರ ರಾಷ್ಟ್ರೀಯ ಕುಸ್ತಿ ಚಾಂಪಿಯನ್​ಶಿಪ್​ನಲ್ಲಿ ವಿನೇಶ್ ಫೋಗಟ್​ಗೆ ಚಿನ್ನ - ವಿನೇಶ್ ಫೋಗಟ್

ಕುಸ್ತಿಪಟು ವಿನೇಶ್ ಫೋಗಟ್ ಅವರು ಐಒಎ ರಚಿಸಿರುವ ತಾತ್ಕಾಲಿಕ ಸಮಿತಿ ನಡೆಸಿದ ಹಿರಿಯರ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನ 55 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಪಡೆದರು.

vinesh-phogat-clinches-gold-in-national-wrestling-championship-organised-by-ad-hoc-committee
ಹಿರಿಯರ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಶಿಪ್​ನಲ್ಲಿ ವಿನೇಶ್ ಫೋಗಟ್​ಗೆ ಚಿನ್ನ
author img

By ETV Bharat Karnataka Team

Published : Feb 4, 2024, 10:21 PM IST

ಜೈಪುರ(ರಾಜಸ್ಥಾನ): ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ವಿನೇಶ್ ಫೋಗಟ್ ಅವರು, ಭಾನುವಾರ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ರಚಿಸಿರುವ ತಾತ್ಕಾಲಿಕ ಸಮಿತಿಯು ನಡೆಸಿದ ಹಿರಿಯರ ರಾಷ್ಟ್ರೀಯ ಕುಸ್ತಿ ಚಾಂಪಿಯನ್​ಶಿಪ್​ನ 55 ಕೆಜಿ ವಿಭಾಗದಲ್ಲಿ ಗೆಲುವು ಸಾಧಿಸಿದ್ದಾರೆ. ವಿನೇಶ್ ಫೋಗಟ್ ತಮ್ಮ ಕೌಶಲ್ಯ ಮತ್ತು ಅನುಭವವನ್ನು ಪ್ರದರ್ಶಿಸಿ ಮಧ್ಯಪ್ರದೇಶದ ಜ್ಯೋತಿ ಅವರನ್ನು 4-0 ಅಂತರದಲ್ಲಿ ಮಣಿಸಿದರು. ವಿಶೇಷವಾಗಿ ಅವರು ಇಂದು ಹೆಚ್ಚಿನ ತೂಕ ವಿಭಾಗದಲ್ಲಿ ಸ್ಪರ್ಧಿಸಿದ್ದರು.

ಮತ್ತೊಂದು ಪಂದ್ಯದಲ್ಲಿ, 2021ರ ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ, ಹರಿಯಾಣದ ಅಂಶು ಮಲಿಕ್ 59 ಕೆಜಿ ವಿಭಾಗದಲ್ಲಿ 2020ರ ಏಷ್ಯನ್ ಚಾಂಪಿಯನ್‌ಶಿಪ್ ಚಿನ್ನದ ಪದಕ ವಿಜೇತೆ ಸರಿತಾ ಮೋರ್ (ರೈಲ್ವೇಸ್) ಅವರನ್ನು 8-3 ರಿಂದ ಮಣಿಸಿದರು. ಈ ಮೂಲಕ ಹರಿಯಾಣದ ಕುಸ್ತಿಪಟುಗಳು 189 ಅಂಕಗಳೊಂದಿಗೆ ಅಗ್ರಸ್ಥಾನವನ್ನು ಪಡೆದರು ಮತ್ತು ಆರ್​ಎಸ್​ಪಿಬಿ 187 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆಯಿತು. ಪಾಂಡಿಚೆರಿ 81 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತು.

ಪುರುಷರ ಗ್ರೀಕೋ-ರೋಮನ್ ವಿಭಾಗದಲ್ಲಿ ಆರ್‌ಎಸ್‌ಪಿಬಿ 208 ಅಂಕಗಳೊಂದಿಗೆ ಜಯಗಳಿಸಿತು. ಸರ್ವಿಸಸ್ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್ (127 ಅಂಕಗಳು) ಮತ್ತು ಮಹಾರಾಷ್ಟ್ರ (113 ಅಂಕಗಳು) ಗಳೊಂದಿಗೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದವು. ಸ್ಪರ್ಧೆಯ ಕೊನೆಯ ದಿನವಾದ ಸೋಮವಾರ ಪುರುಷರ ಫ್ರೀಸ್ಟೈಲ್ ಸ್ಪರ್ಧೆಗಳು ನಡೆಯಲಿವೆ.

ಇದಕ್ಕೂ ಮುನ್ನ, ಅಮಾನತುಗೊಂಡಿರುವ ಭಾರತದ ಕುಸ್ತಿ ಫೆಡರೇಶನ್‌ನ ಮರುಚುನಾವಣೆಗೆ ಹೋರಾಡುತ್ತಿರುವ ಪ್ರಮುಖ ಕುಸ್ತಿಪಟು ವಿನೇಶ್ ಫೋಗಟ್, ಯಾವ ಪಂದ್ಯಾವಳಿಗಳಲ್ಲಿ ಸ್ಪರ್ಧಿಸಬೇಕು ಮತ್ತು ಯಾವುದರಲ್ಲಿ ಸ್ಪರ್ಧಿಸಬಾರದು ಎಂಬುದರ ಕುರಿತು ಮಾರ್ಗಸೂಚಿಗಳನ್ನು ಹೊರಡಿಸುವಂತೆ ಕೇಂದ್ರವನ್ನು ಒತ್ತಾಯಿಸಿದರು.

ಕುಸ್ತಿಪಟು ವಿನೇಶ್ ಫೋಗಟ್ ಪ್ರತಿಕ್ರಿಯಿಸಿ, "ನಾವು ನಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದೇವೆ. ನಾವು ನಮಗೆ ಮತ್ತು ಇತರ ಕ್ರೀಡಾಪಟುಗಳಿಗೆ ಉತ್ತಮವಾದದ್ದನ್ನು ಬಯಸುತ್ತೇವೆ. ಅವರು (ಡಬ್ಲ್ಯುಎಫ್ಐ) ಆಯೋಜಿಸಿದ್ದ ರಾಷ್ಟ್ರೀಯ ಪಂದ್ಯಾವಳಿಗಳಿಗೆ ಯಾವುದೇ ಮಹತ್ವವಿಲ್ಲ. ಕ್ರೀಡಾಪಟುಗಳಿಗೆ ಸ್ಪರ್ಧೆಗಳ ಬಗ್ಗೆಯೂ ತಿಳಿಸಬೇಕು, ಇದು ಸ್ಪರ್ಧೆಗಳಿಗೆ ಭವಿಷ್ಯದಲ್ಲಿ ವಿಶ್ವದಾದ್ಯಂತ ವಿವಿಧ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ. ಸರ್ಕಾರವು ಸ್ಪಷ್ಟಪಡಿಸಬೇಕಾದ ಕೆಲವು ವಿಷಯಗಳಿವೆ ಎಂದು ನಾನು ಹೇಳಲು ಬಯಸುತ್ತೇನೆ. ಆದರೆ, ಇದೀಗ ಜೈಪುರದಲ್ಲಿ ನಡೆಯುತ್ತಿರುವ ಪಂದ್ಯಾವಳಿ ಬಗ್ಗೆ ನನಗೆ ಸಂತೋಷವಾಗಿದೆ" ಎಂದು ಹೇಳಿದರು.

ಇನ್ನು, ರೈಲ್ವೇ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್ (ಆರ್‌ಎಸ್‌ಪಿಬಿ) ಪ್ರತಿನಿಧಿಸುತ್ತಿದ್ದ 29 ವರ್ಷದ ವಿನೇಶ್, 2018 ರ ಜಕಾರ್ತಾ ಏಷ್ಯನ್ ಗೇಮ್ಸ್‌ನ 50 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು ಮತ್ತು 2022ರ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 53 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು.

ಇದನ್ನೂ ಓದಿ: ರಣಜಿ ಟ್ರೋಫಿ: ಮನೀಶ್​ ಅಜೇಯ ಆಟ, ರೈಲ್ವೇಸ್​ ವಿರುದ್ಧ ಕರ್ನಾಟಕಕ್ಕೆ 1 ವಿಕೆಟ್​ ರೋಚಕ ಜಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.