ಪ್ಯಾರಿಸ್/ನವದೆಹಲಿ: ಭಾರತದ ತಾರಾ ಕುಸ್ತಿಪಟು ವಿನೇಶ್ ಪೋಗಟ್ ಅವರು ಪ್ಯಾರಿಸ್ ಒಲಿಂಪಿಕ್ಸ್ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ ತಲುಪಿದ್ದಾರೆ. ಈ ಮೂಲಕ ಭಾರತಕ್ಕೆ ಮತ್ತೊಂದು ಪದಕ ಖಚಿತಪಡಿಸಿದ್ದಾರೆ. ಮಂಗಳವಾರ ನಡೆದ 50 ಕೆಜಿ ಸ್ಪರ್ಧೆಯ ಮಹಿಳೆಯರ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ವಿರುದ್ಧ ಭಾರತದ ವಿನೇಶಾ 5-0 ಅಂತರದಲ್ಲಿ ಜಯಗಳಿಸಿದರು.
ಈ ಗೆಲುವಿನೊಂದಿಗೆ ಒಲಿಂಪಿಕ್ಸ್‌ನಲ್ಲಿ ಕುಸ್ತಿಯಲ್ಲಿ ಫೈನಲ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳಾ ಮತ್ತು ಎರಡನೇ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು ಸುಶೀಲ್ ಕುಮಾರ್ ಅವರು ಫೈನಲ್ ತಲುಪಿದ್ದರು.
ವಿನೇಶ್ ಪೋಗಟ್ ಅವರು ಆರಂಭದಿಂದಲೇ ಎದುರಾಳಿಯ ವಿರುದ್ಧ ಬಿಗಿಪಟ್ಟು ಹಾಕಿದರು. ಕ್ಯೂಬಾದ ಕುಸ್ತಿಪಟು ಭಾರತದ ಪೈಲ್ವಾನ್ ಮುಂದೆ ಮಿಸುಕಾಡಲು ಆಗಲಿಲ್ಲ. ಇದರಿಂದ ಸತತ ಅಂಕ ಪಡೆಯುತ್ತಾ ಸಾಗಿದ ವಿನೇಶ್ 5 ಅಂಕ ಪಡೆದು ಏಕಮೇವಾಗಿ ಜಯ ಸಾಧಿಸಿದರು.
🇮🇳 Result Update: Women’s Wrestling Freestyle 50KG SF👇@Phogat_Vinesh on a winning spree, continues her quest for glory & assures a medal🏅 for 🇮🇳 💯🔥
— SAI Media (@Media_SAI) August 6, 2024
The seasoned grappler picked up two historic wins earlier today and went past her Cuban opponent Yusneylis Guzman Lopez in… pic.twitter.com/Kd0pgYtNEF
ವಿನೇಶ್ ಪೋಗಟ್ ಭಾರತದ ಸಿಂಹಿಣಿ: ಕುಸ್ತಿಯ ಅಖಾಡದಲ್ಲಿ ವಿಶ್ವದ ಖ್ಯಾತ ಜಟ್ಟಿಗಳಿಗೆ ಮಣ್ಣು ಮುಕ್ಕಿಸುತ್ತಿರುವ ಭಾರತದ ಪೈಲ್ವಾನ್ ಬಗ್ಗೆ ಪುರುಷರ ಸ್ಟಾರ್ ಕುಸ್ತಿಪಟು ಬಜರಂಗ್ ಪೂನಿಯಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿನೇಶ್ 'ಭಾರತದ ಸಿಂಹಿಣಿ' ಎಂದು ಬಣ್ಣಿಸಿದ್ದಾರೆ.
ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಬಜರಂಗ್ ಪೂನಿಯಾ, ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ಅವರು 4 ಬಾರಿಯ ವಿಶ್ವ ಚಾಂಪಿಯನ್ ಜಪಾನ್ನ ಯುಇ ಸುಸಾಕಿ ಅವರನ್ನು ಮೊದಲ ಪಂದ್ಯದಲ್ಲೇ ಸೋಲಿಸಿದ್ದಾರೆ. ಎರಡನೇ ಸುತ್ತಿನಲ್ಲಿ ಮಾಜಿ ವಿಶ್ವ ಚಾಂಪಿಯನ್ ಉಕ್ರೇನ್ ಸ್ಪರ್ಧಿಗೆ ಮಣ್ಣು ಮುಕ್ಕಿಸಿದ್ದಾರೆ. ಆಕೆ ಜಗತ್ತನ್ನೇ ಗೆಲ್ಲಲು ಹೊರಟಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಖುಷಿ ಸಮಯದಲ್ಲಿ ಖೇದ: ಇಂತಹ ಖುಷಿ ಸಮಯದಲ್ಲಿ ನಿಮಗೊಂದು ಖೇದಕರ ವಿಷಯ ಹೇಳಲು ಬಯಸುವೆ. ಜಗತ್ತನ್ನೇ ಗೆಲ್ಲಲು ಹೊರಟಿರುವ ಹುಡುಗಿಯನ್ನು ಭಾರತದ ನೆಲದಲ್ಲಿಯೇ ಅವಮಾನಿಸಲಾಯಿತು. ರಸ್ತೆಯ ಮೇಲೆ ಎಳೆದಾಡಿದರು. ಲಾಠಿಯಿಂದ ಬಡಿದರು. ಆಕೆ ಜಗತ್ತಿನ ಎದುರು ಪರಾಕ್ರಮಿಯಾದರೂ, ಈ ದೇಶದ ವ್ಯವಸ್ಥೆಯಲ್ಲಿ ಸೋತಿದ್ದಾಳೆ ಎಂದು ಭಾವುಕ ಮಾತುಗಳನ್ನಾಡಿದ್ದಾರೆ.
ಕಳೆದ ವರ್ಷ ಭಾರತ ಕುಸ್ತಿ ಸಂಸ್ಥೆಯ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಅವರ ವಿರುದ್ಧ ಮಹಿಳಾ ಕುಸ್ತಿಪಟುಗಳು ದೊಡ್ಡ ಮಟ್ಟದಲ್ಲಿ ಧರಣಿ ನಡೆಸಿದ್ದರು.
ಇದನ್ನೂ ಓದಿ: ಒಲಿಂಪಿಕ್ಸ್ ಕುಸ್ತಿ: ವಿನೇಶ್ ಫೋಗಟ್ಗೆ 2ನೇ ಗೆಲುವು; ಸೆಮಿಫೈನಲ್ ಪ್ರವೇಶ - Vinesh Phogat