ನವದೆಹಲಿ: ಭಾರತ ಎ ಮತ್ತು ಆಸ್ಟ್ರೇಲಿಯಾ ಎ ನಡುವೆ ನಾಲ್ಕು ದಿನಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ವೇಗದ ಶತಕ ಸಿಡಿಸಿದರು.
13 ವರ್ಷದ ವೈಭವ್ ಸೂರ್ಯವಂಶಿ ಕೇವಲ 58 ಎಸೆತಗಳಲ್ಲಿ ಶತಕದಾಟವಾಡಿದ್ದಾರೆ. ಇವರ ಆಕರ್ಷಕ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್‌ಗಳಿದ್ದವು. ಒಟ್ಟಾರೆ 62 ಎಸೆತಗಳನ್ನು ಎದುರಿಸಿ 104 ರನ್ ಗಳಿಸಿ ಔಟಾದರು.
ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವನ್ನು ಭಾರತೀಯರು 293 ರನ್‌ಗಳಿಗೆ ಕಟ್ಟಿ ಹಾಕಿದರು. ಇದಕ್ಕುತ್ತರವಾಗಿ ಭಾರತ 296 ರನ್ ಗಳಿಸಿ 3 ರನ್ಗಳ ಮುನ್ನಡೆ ಸಾಧಿಸಿತು. ಆರಂಭಿಕ ಆಟಗಾರ ವೈಭವ್ ಬ್ಯಾಟಿಂಗ್ ನೆರವಿನಿಂದ ಭಾರತ ಟೆಸ್ಟ್‌ನಲ್ಲಿ ಎರಡನೇ ವೇಗದ ಶತಕ ಸಿಡಿಸಿ ದಾಖಲೆ ಬರೆಯಿತು.
ನಿನ್ನೆ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್‌ನಲ್ಲಿ, ಭಾರತ ಹಿರಿಯರ ತಂಡ ವೇಗದ 100 ರನ್ ಗಳಿಸಿತ್ತು. ಕಿರಿಯರ ತಂಡ ಕೂಡ ಅವರ ದಾಖಲೆ ಬೆನ್ನತ್ತಲು ಪ್ರಯತ್ನಿಸಿದೆ. ಈ ನಿಟ್ಟಿನಲ್ಲಿ ಕೇವಲ 14 ಓವರ್‌ಗಳಲ್ಲಿ 7.36 ರನ್‌ರೇಟ್‌ನೊಂದಿಗೆ 103 ರನ್ ಕಲೆಹಾಕಿದ್ದಾರೆ. ವಿಹಾನ್ ಮಲ್ಹೋತ್ರಾ 37 ಎಸೆತಗಳಲ್ಲಿ 21 ರನ್ ಗಳಿಸಿ ಅಜೇಯರಾಗುಳಿದರೆ, ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ 47 ಎಸೆತಗಳಲ್ಲಿ ಅಜೇಯ 81 ರನ್ ಗಳಿಸಿ ದಿನದಾಟ ಅಂತ್ಯಗೊಳಿಸಿದ್ದರು.
ಇದೇ ಮಾದರಿಯಲ್ಲಿ ಎರಡನೇ ದಿನವಾದ ಇಂದು ಬ್ಯಾಟಿಂಗ್ ಆರಂಭಿಸಿದ ಸೂರ್ಯವಂಶಿ, ಶತಕ ಗಳಿಸಲು ಸಮಯ ವ್ಯರ್ಥ ಮಾಡಲಿಲ್ಲ. 11 ಎಸೆತಗಳಲ್ಲಿ 19 ರನ್ ಗಳಿಸಿ 58 ಎಸೆತಗಳಲ್ಲಿ ಈ ಸಾಧನೆ ಮಾಡಿದರು.
2005ರಲ್ಲಿ ಶ್ರೀಲಂಕಾ ವಿರುದ್ಧ ಮೊಯಿನ್ ಅಲಿ 56 ಎಸೆತಗಳಲ್ಲಿ 100 ರನ್ಗಳಿಸಿದ್ದರು. ಇದೀಗ ವೈಭವ್ ಸೂರ್ಯವಂಶಿ ವೇಗದ ಶತಕ ಸಿಡಿಸಿದ ಯುವ ಟೆಸ್ಟ್ ಆಟಗಾರನಾಗಿದ್ದಾರೆ. ಇದು ಅವರ ಎರಡನೇ ವೇಗದ ಶತಕವಾಗಿದೆ.