ETV Bharat / sports

ಯುವ ಕ್ರಿಕೆಟಿಗರು ತಾವು ಪ್ರವೇಶಿಸಿದ ತಕ್ಷಣವೇ ತೋರಿದ ಪ್ರದರ್ಶನ ನೋಡಿ ಖುಷಿಯಾಯಿತು: ಕೋಚ್​ ಅನುಭವ ಬಿಚ್ಚಿಟ್ಟ ದ್ರಾವಿಡ್ - Dravid On Youngsters Performance - DRAVID ON YOUNGSTERS PERFORMANCE

ಟೀಂ ಇಂಡಿಯಾದ ಕೋಚ್​ ಆಗಿ ತಮ್ಮ ಅವಧಿಯಲ್ಲಿ ಯುವಕ ಕ್ರಿಕೆಟಿಗರು ನೀಡಿದ ಪ್ರದರ್ಶನದ ಬಗ್ಗೆ ರಾಹುಲ್ ದ್ರಾವಿಡ್ ಮಾತನಾಡಿದ್ದಾರೆ. ಅನೇಕ ಯುವಕರು ತಾವು ಪ್ರವೇಶಿಸಿದ ತಕ್ಷಣವೇ ತೋರಿದ ಪ್ರದರ್ಶನವನ್ನು ನೋಡಿ ಸಂತೋಷವಾಯಿತು. ಇದು ರಣಜಿ ಟ್ರೋಫಿ ಮತ್ತು ಇಂತಹ ದೇಶೀಯ ಕ್ರಿಕೆಟ್​ ವ್ಯವಸ್ಥೆಗೆ ನಿಜವಾದ ಗೌರವ ಎಂದು ತಿಳಿಸಿದ್ದಾರೆ.

RAHUL DRAVID
ರಾಹುಲ್ ದ್ರಾವಿಡ್ (IANS)
author img

By ETV Bharat Karnataka Team

Published : Jul 6, 2024, 8:52 PM IST

Updated : Jul 6, 2024, 10:32 PM IST

ಹೈದರಾಬಾದ್: ಭಾರತೀಯ ಯುವ ಕ್ರಿಕೆಟಿಗರು ಶ್ರೇಯಾಂಕಗಳ ಮೂಲಕ ಬೆಳೆಯುತ್ತಿರುವುದು ಮತ್ತು ಜಾಗತಿಕ ವೇದಿಕೆಯಲ್ಲಿ ದೊಡ್ಡ ಸಾಧನೆ ಮಾಡುತ್ತಿರುವುದು ಇಡೀ ಭಾರತದ ಕ್ರಿಕೆಟ್ ರಚನೆಗೆ ನಿಜವಾದ ಗೌರವ ಎಂದು ಮಾಜಿ ಕ್ರಿಕೆಟಿಗ, ಕೋಚ್ ರಾಹುಲ್ ದ್ರಾವಿಡ್ ಪ್ರತಿಪಾದಿಸಿದ್ದಾರೆ.

2024ರ ಟಿ-20 ವಿಶ್ವಕಪ್‌ನೊಂದಿಗೆ ರಾಹುಲ್ ದ್ರಾವಿಡ್ ಅವರ ಟೀಂ ಇಂಡಿಯಾದ ಮುಖ್ಯ ಕೋಚ್‌ ಅವಧಿಯು ಮುಕ್ತಾಯವಾಗಿದೆ. ಕೋಚ್​ ಆಗಿ ತಮ್ಮ ಎರಡೂವರೆ ವರ್ಷಗಳ ಪ್ರಯಾಣದ ಬಗ್ಗೆ ಅವರು ಮಾತನಾಡಿದ್ದಾರೆ. ಇದರ ವಿಡಿಯೋವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಂಚಿಕೊಂಡಿದೆ.

ಬಹಳಷ್ಟು ಯುವಕರನ್ನು ತಂಡಕ್ಕೆ ತರಲು ಸಾಧ್ಯವಾಗಿದೆ: ''ಕಳೆದ ವರ್ಷದಲ್ಲಿ ನಾವು ಯುವ ಆಟಗಾರರಿಗೆ ಕೆಂಪು ಚೆಂಡು ಮತ್ತು ಬಿಳಿ ಚೆಂಡು ಕ್ರಿಕೆಟ್ ಎರಡರಲ್ಲೂ ಸಾಕಷ್ಟು ಅವಕಾಶಗಳನ್ನು ನೀಡಲು ಹಾಗೂ ಬಹಳಷ್ಟು ಯುವಕರನ್ನು ತಂಡಕ್ಕೆ ತರಲು ಸಾಧ್ಯವಾಗಿದೆ. ಅವರು ಎಷ್ಟೇ ಬೇಗನೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹೊಂದಿಕೊಂಡರು. ಈ ರೀತಿಯ ಅನೇಕ ಯುವಕರು ತಾವು ಪ್ರವೇಶಿಸಿದ ತಕ್ಷಣವೇ ತೋರಿದ ಪ್ರದರ್ಶನವನ್ನು ನೋಡಿ ಸಂತೋಷವಾಯಿತು. ಇದು ರಣಜಿ ಟ್ರೋಫಿ ಮತ್ತು ಇಂತಹ ದೇಶೀಯ ಕ್ರಿಕೆಟ್​ ವ್ಯವಸ್ಥೆಗೆ ನಿಜವಾದ ಗೌರವ ಎಂದು ನಾನು ಭಾವಿಸುತ್ತೇನೆ'' ಎಂದು ದ್ರಾವಿಡ್ ಹೇಳಿದ್ದಾರೆ.

ಯುವಕರಿಗೆ ಅವಕಾಶಗಳ ನೀಡುವುದರ ಬಗ್ಗೆ ಮತ್ತು ಅವರು ಎದುರಿಸಿದ ಸವಾಲುಗಳು ಕುರಿತು ಮಾತನಾಡುತ್ತಾ, ''ಇವರಲ್ಲಿ ಕೆಲವರು ಸಹಜವಾಗಿ ಪ್ರಗತಿ ಹೊಂದಿ ತಂಡದಲ್ಲಿ ಸ್ವಲ್ಪ ಸಮಯದವರೆಗೆ ಇದ್ದರು. ಆದರೆ, ಅವರಲ್ಲೂ ಕೆಲವರು ಕೆಲ ಹಿರಿಯರು ವಿಶ್ರಾಂತಿ ಪಡೆಯುವ ಸಮಯ ತಂಡವನ್ನು ಸೇರಿದ್ದರು. ಅವರು ತಮ್ಮ ಅವಕಾಶಗಳನ್ನು ಪಡೆಯುತ್ತಾರೆ ಎಂದು ನನಗೆ ಖಾತ್ರಿಯಿದೆ'' ಎಂದು ತಿಳಿಸಿದ್ದಾರೆ.

''ನಾನು ತಂಡದ ಒಂದು ಭಾಗವಾಗಿದ್ದೆ. ಜವಾಬ್ದಾರಿಯು ಸರಿಯಾದ ವೃತ್ತಿಪರ, ಸುರಕ್ಷಿತ ಮತ್ತು ಸುಭದ್ರ ವಾತಾವರಣವನ್ನು ಸೃಷ್ಟಿಸುತ್ತದೆ. ಇದು ವೈಫಲ್ಯದ ಭಯವನ್ನು ಹೊಂದಿರಲ್ಲ. ನಾನು ನಿರಂತರತೆಯನ್ನು ಇಷ್ಟಪಡುವವನು. ಅನೇಕ ವಿಷಯಗಳನ್ನು ಬದಲಾಯಿಸಲು ಇಷ್ಟಪಡುವುದಿಲ್ಲ. ಏಕೆಂದರೆ, ಅದು ಸಾಕಷ್ಟು ಸ್ಥಿರತೆ ಮತ್ತು ಉತ್ತಮ ವಾತಾವರಣ ಸೃಷ್ಟಿಸುವುದಿಲ್ಲ ಎಂದು ನಾನು ನಂಬುತ್ತೇನೆ'' ಎನ್ನುವ ಮೂಲಕ ರಾಹುಲ್​ ದ್ರಾವಿಡ್ ತಂಡದಲ್ಲಿ ಹೆಚ್ಚಿನ ಬದಲಾವಣೆಗಳ ಅವಶ್ಯಕತೆ ಇಲ್ಲ ಎಂಬುವುದನ್ನೂ ಪ್ರತಿಪಾದಿಸಿದ್ದಾರೆ.

ಇದೇ ವೇಳೆ, ಈ ವರ್ಷದ ಆರಂಭದಲ್ಲಿ ತವರಿನಲ್ಲಿ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ತಾವು ಮತ್ತು ತಮ್ಮ ಕೋಚಿಂಗ್ ಸಿಬ್ಬಂದಿಯ ನಿಜವಾದ ಸವಾಲು ಎಂದು ಪರಿಗಣಿಸಿದ್ದೆವು. ಆದರೆ, ತಂಡವು 4-1 ಅಂತರದಲ್ಲಿ ಗೆದ್ದಿರುವುದು ಅತ್ಯುತ್ತಮ ಸಾಧನೆ ಎಂದು ಅವರು ಹೇಳಿದ್ದಾರೆ. ಯಾಕೆಂದರೆ, ಸ್ಟಾರ್​ ಆಟಗಾರ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣ ಮತ್ತು ಕೆ.ಎಲ್.ರಾಹುಲ್ ಮತ್ತು ರವೀಂದ್ರ ಜಡೇಜಾ ಗಾಯದ ಕಾರಣ ತಂಡದಿಂದ ದೂರ ಉಳಿದಿದ್ದರು. ಆದರೆ, ಇದರಿಂದ ಯುವ ಆಟಗಾರರಾದ ಸರ್ಫರಾಜ್ ಖಾನ್, ರಜತ್ ಪಾಟಿದಾರ್, ಧ್ರುವ್ ಜುರೆಲ್, ದೇವದತ್ ಪಡ್ಡಿಕಲ್, ಆಕಾಶ್ ದೀಪ್ ಸಿಂಗ್ ಟೆಸ್ಟ್​ಗೆ ಪದಾರ್ಪಣೆ ಮಾಡಲು ಸಾಧ್ಯವಾಯಿತು.

''ತವರಿನಲ್ಲಿನ ಇಂಗ್ಲೆಂಡ್ ಸರಣಿಯನ್ನು 1-0ರಲ್ಲಿ ಗೆದ್ದು ನಂತರ ಗಾಯ ಮತ್ತು ಇತರ ಕಾರಣಗಳಿಂದ ಬಹಳಷ್ಟು ಆಟಗಾರರು ದೂರ ಉಳಿದರು. ತಂಡಕ್ಕೆ ಸೇರಿಸಿಕೊಳ್ಳಲು ಬಹಳಷ್ಟು ಯುವಕರತ್ತ ಗಮನ ಹರಿಸಬೇಕಾಗಿತ್ತು. ನಂತರ ಆ ಸರಣಿಯನ್ನು 4-1ರಿಂದ ಗೆದ್ದೆವು. ಆದರೆ, ನಾವು ಕೋಚಿಂಗ್ ಸಿಬ್ಬಂದಿಯಾಗಿ ಮತ್ತು ಗುಂಪಿನಂತೆ ಪರೀಕ್ಷೆ ಎದುಸಿದ್ದೆವು ಮತ್ತು ಸವಾಲಿಗೆ ಒಳಪಟ್ಟಿದ್ದೇವೆ ಎಂದು ಅರಿತುಕೊಂಡೆವು. ಸರಣಿಯ ಸಮಯದಲ್ಲಿ ನಾವು ಬಹುಶಃ ನಮ್ಮ ಕೆಲವು ಅತ್ಯುತ್ತಮ ಕೆಲಸವನ್ನು ಮಾಡುತ್ತಿದ್ದೇವೆ ಎಂಬ ಭಾವನೆ ಇತ್ತು'' ಎಂದು ಮಾಜಿ ಕೋಚ್​ ದ್ರಾವಿಡ್ ನೆನಪಿಸಿಕೊಂಡರು.

ಈ ಸರಣಿ ಗೆಲುವಿನಲ್ಲಿ ಸರ್ಫರಾಜ್ ಖಾನ್, ಧ್ರುವ್ ಜುರೆಲ್ ಮತ್ತು ದೇವದತ್ ಪಡ್ಡಿಕಲ್ ಅವರ ನಿರ್ಣಾಯಕ ಇನ್ನಿಂಗ್ಸ್‌ಗಳು ಕಾರಣವಾಗಿದ್ದವು. ಸರ್ಫರಾಜ್ 5 ಇನ್ನಿಂಗ್ಸ್‌ಗಳಲ್ಲಿ 50 ಸರಾಸರಿಯಲ್ಲಿ 200 ರನ್, ಜುರೆಲ್ 4 ಇನ್ನಿಂಗ್ಸ್‌ಗಳಲ್ಲಿ 190 ರನ್ ಮತ್ತು ಪಡ್ಡಿಕಲ್ ಏಕೈಕ ಇನ್ನಿಂಗ್ಸ್‌ನಲ್ಲಿ 65 ರನ್ ಗಳಿಸಿದ್ದರು. ಬ್ಯಾಟರ್‌ಗಳ ಅದ್ಭುತ ಪ್ರದರ್ಶನದ ಜೊತೆಗೆ, ನಾಲ್ಕನೇ ಟೆಸ್ಟ್‌ನಲ್ಲಿ ತಂಡಕ್ಕೆ ಪದಾರ್ಪಣೆ ಮಾಡಿದ್ದ ಆಕಾಶ್ ದೀಪ್ ಸಹ ತಮ್ಮ ವೇಗದ ಬೌಲಿಂಗ್‌ ಮೂಲಕ ಉತ್ತಮ ಪ್ರದರ್ಶನ ನೀಡಿದ್ದರು.

ಇದನ್ನೂ ಓದಿ: ಹೈದರಾಬಾದ್​ನಲ್ಲಿ ಮೊಹಮ್ಮದ್ ಸಿರಾಜ್​ಗೆ ಅದ್ಧೂರಿ ಸ್ವಾಗತ ಕೋರಿದ ಫ್ಯಾನ್ಸ್

Last Updated : Jul 6, 2024, 10:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.