ETV Bharat / sports

ಇಂಗ್ಲೆಂಡ್​ ಸರಣಿ: ಉಳಿದ ಪಂದ್ಯಗಳಿಗೂ ಕೊಹ್ಲಿ ಅಲಭ್ಯ, ಅಯ್ಯರ್​ ಔಟ್​, ಆಕಾಶ್​ ದೀಪ್​, ಸಿರಾಜ್​ ಇನ್​

ಇಂಗ್ಲೆಂಡ್​ ವಿರುದ್ಧದ ಉಳಿದ ಮೂರು ಟೆಸ್ಟ್​​ ಪಂದ್ಯಗಳಿಗೆ ಭಾರತ ತಂಡ ಪ್ರಕಟವಾಗಿದೆ. ವಿರಾಟ್​ ಕೊಹ್ಲಿ ಸರಣಿಯಿಂದಲೇ ಹೊರಗುಳಿದಿದ್ದಾರೆ.

ಭಾರತ ತಂಡ ಪ್ರಕಟ
ಭಾರತ ತಂಡ ಪ್ರಕಟ
author img

By ETV Bharat Karnataka Team

Published : Feb 10, 2024, 12:42 PM IST

ನವದೆಹಲಿ: ಇಂಗ್ಲೆಂಡ್​ ವಿರುದ್ಧದ ಉಳಿದ ಮೂರು ಟೆಸ್ಟ್​ ಪಂದ್ಯಗಳಿಗೆ 17 ಸದಸ್ಯರ ಟೀಂ ಇಂಡಿಯಾವನ್ನು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ ಪ್ರಕಟಿಸಿದೆ. ಬ್ಯಾಟಿಂಗ್​ ಕಿಂಗ್​ ವಿರಾಟ್​ ಕೊಹ್ಲಿ ವೈಯಕ್ತಿಕ ಕಾರಣದಿಂದಾಗಿ ಸರಣಿಯಿಂದ ಹೊರಗುಳಿದಿದ್ದಾರೆ. ಗಾಯಗೊಂಡಿರುವ ಶ್ರೇಯಸ್​ ಅಯ್ಯರ್​ ತಂಡದಿಂದ ಹೊರಬಿದ್ದಿದ್ದು, ವೇಗಿ ಆಕಾಶ್​ ದೀಪ್​, ಮೊಹಮದ್​ ಸಿರಾಜ್​ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಆಂಧ್ರದ ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಭಾರತ ಗೆಲುವು ಸಾಧಿಸುವುದರೊಂದಿಗೆ ಸರಣಿಯನ್ನು 1-1 ರಿಂದ ಸಮಬಲ ಮಾಡಿಕೊಂಡಿದೆ. ಹೈದರಾಬಾದ್​ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್​ ಗೆಲುವು ಕಂಡಿತ್ತು. ಮೂರನೇ ಪಂದ್ಯ ಫೆಬ್ರವರಿ 15 ರಿಂದ ಗುಜರಾತ್​ನ ರಾಜ್‌ಕೋಟ್‌ನಲ್ಲಿ ಆರಂಭವಾಗಲಿದೆ.

ಜಡೇಜಾ, ರಾಹುಲ್​ ಅನುಮಾನ: ಬಿಸಿಸಿಐ ಪ್ರಕಟಿಸಿರುವ ತಂಡದಲ್ಲಿ ಸ್ಟಾರ್​ ಆಟಗಾರರಾದ ರವೀಂದ್ರ ಜಡೇಜಾ, ಕೆಎಲ್​ ರಾಹುಲ್​ ಸ್ಥಾನ ಪಡೆದಿದ್ದರೂ, ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ತಂಡದ ವೈದ್ಯರ ನಿಗಾದಲ್ಲಿ ಇಬ್ಬರೂ ಆಟಗಾರರೂ ವೈದ್ಯಕೀಯ ಅನುಮತಿಯ ಮೇರೆಗೆ ಅವರು ತಂಡದಲ್ಲಿ ಮುಂದುವರಿಯುತ್ತಾರೋ, ಇಲ್ಲವೋ ಎಂಬುದು ಆಧರಿಸಿದೆ. ಜಡೇಜಾ ಮತ್ತು ರಾಹುಲ್​ ಎರಡನೇ ಪಂದ್ಯದ ವೇಳೆ ಗಾಯಗೊಂಡಿದ್ದರು.

ಶ್ರೇಯಸ್​ ಔಟ್​, ಭರತ್​ಗೆ ಮತ್ತೆ ಚಾನ್ಸ್​: ತೊಡೆಸಂದು ಮತ್ತು ಕೆಳ ಬೆನ್ನಿನ ನೋವಿಗೆ ತುತ್ತಾಗಿರುವ ಬ್ಯಾಟರ್​ ಶ್ರೇಯಸ್ ಅಯ್ಯರ್ ತಂಡದಿಂದ ಹೊರಬಿದ್ದಿದ್ದಾರೆ. ಸತತ ವೈಫಲ್ಯ ಕಾಣುತ್ತಿರುವ ವಿಕೆಟ್​ ಕೀಪರ್​​ ಕೆಎಸ್ ಭರತ್ ಮತ್ತೊಂದು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. 7 ಟೆಸ್ಟ್ ಪಂದ್ಯಗಳಲ್ಲಿ ಅವರು ಅರ್ಧಶತಕ ಕೂಡ ದಾಖಲಿಸಿಲ್ಲ. ಆದಾಗ್ಯೂ ಆಯ್ಕೆ ಸಮಿತಿ ಮತ್ತೊಂದು ಅವಕಾಶ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ. ಇದೇ ಮೊದಲ ಬಾರಿಗೆ ಬಂಗಾಳದ ವೇಗಿ ಆಕಾಶ್​ ದೀಪ್​ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮೊಹಮದ್​ ಸಿರಾಜ್​, ಆವೇಶ್​ ಖಾನ್​ ಬದಲಿಗೆ ಮತ್ತೆ ಕಮ್​ಬ್ಯಾಕ್​ ಮಾಡಿದ್ದಾರೆ.

ಸರಣಿಗೆ ವಿರಾಟ್​ ಅಲಭ್ಯ: ವೈಯಕ್ತಿಕ ಕಾರಣಗಳಿಗಾಗಿ ಮೊದಲೆರಡು ಪಂದ್ಯಗಳಿಂದ ಬಿಡುವು ಪಡೆದಿದ್ದ ವಿರಾಟ್ ಕೊಹ್ಲಿ ಉಳಿದ ಪಂದ್ಯಗಳಿಂದ ಹಿಂದೆ ಸರಿದಿದ್ದಾರೆ ಎಂದು ಬಿಸಿಸಿಐ ದೃಢಪಡಿಸಿದೆ. ಈ ಬಗ್ಗೆ ವಿಶೇಷ ಟಿಪ್ಪಣಿ ನೀಡಿದ್ದು, ವೈಯಕ್ತಿಕ ಕಾರಣಗಳಿಂದಾಗಿ ಕೊಹ್ಲಿ ಸರಣಿಗೆ ಅಲಭ್ಯರಾಗಿದ್ದಾರೆ. ಅವರ ನಿರ್ಧಾರವನ್ನು ಸಂಪೂರ್ಣವಾಗಿ ತಂಡ ಗೌರವಿಸುತ್ತದೆ ಎಂದಿದೆ. ಕೌಟುಂಬಿಕ ವಿಚಾರಕ್ಕಾಗಿ ಕೊಹ್ಲಿ ಸದ್ಯ ವಿದೇಶದಲ್ಲಿದ್ದಾರೆ.

ತಂಡ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಕೆಎಲ್ ರಾಹುಲ್*, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್​ ಕೀಪರ್​), ಕೆಎಸ್ ಭರತ್ (ವಿಕೆಟ್​ ಕೀಪರ್​), ಆರ್. ಅಶ್ವಿನ್, ರವೀಂದ್ರ ಜಡೇಜಾ*, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್ ಮತ್ತು ಆಕಾಶ್ ದೀಪ್.

ಇದನ್ನೂ ಓದಿ: 3ನೇ ಟೆಸ್ಟ್: ಹೊಸ ದಾಖಲೆಯ ಹೊಸ್ತಿಲಲ್ಲಿ ಅಶ್ವಿನ್, ಆ್ಯಂಡರ್ಸನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.