ETV Bharat / sports

ಟಿ20 ವಿಶ್ವಕಪ್​: ಇಂದು ಭಾರತ - ಐರ್ಲೆಂಡ್​ ಹಣಾಹಣಿ; ಶುಭಾರಂಭಕ್ಕೆ ರೋಹಿತ್​ ಪಡೆ ಸಜ್ಜು - India vs Ireland

author img

By ETV Bharat Karnataka Team

Published : Jun 5, 2024, 7:36 AM IST

Updated : Jun 5, 2024, 8:18 AM IST

ಟಿ20 ವಿಶ್ವಕಪ್​ನಲ್ಲಿ ಭಾರತ ತಂಡವು ಬುಧವಾರ ಐರ್ಲೆಂಡ್ ವಿರುದ್ಧದ ಪಂದ್ಯದೊಂದಿಗೆ ಟೂರ್ನಿ ಆರಂಭಿಸಲಿದೆ. ಚುಟುಕು ಕ್ರಿಕೆಟ್​ ಅಭಿಯಾನದಲ್ಲಿ ಗೆಲುವಿನ ಆರಂಭ ಪಡೆಯುವ ನಿಟ್ಟಿನಲ್ಲಿ ಮೈದಾನಕ್ಕಿಳಿಯಲಿದೆ.

Team India
ಟಿ20 ವಿಶ್ವಕಪ್​ಗೆ ರೋಹಿತ್​ ಪಡೆ ಸಜ್ಜು (IANS)

ನ್ಯೂಯಾರ್ಕ್: ಟಿ20 ವಿಶ್ವಕಪ್ ಕದನಕ್ಕೆ ಸಜ್ಜುಗೊಂಡಿರುವ ಭಾರತ ತಂಡ ಇಂದು (ಬುಧವಾರ) ಐರ್ಲೆಂಡ್ ವಿರುದ್ಧ ಬಹು ನಿರೀಕ್ಷಿತ ಪಂದ್ಯದಲ್ಲಿ ಅಭಿಯಾನ ಆರಂಭಿಸಲಿದೆ. ನ್ಯೂಯಾರ್ಕ್‌ನ ಲಾಂಗ್ ಐಲ್ಯಾಂಡ್‌ನಲ್ಲಿರುವ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತದ ಮೊದಲ ಗ್ರೂಪ್​ ಹಂತದ ಹಣಾಹಣಿ ನಡೆಯಲಿದೆ.

ನಾಯಕ ರೋಹಿತ್ ಶರ್ಮಾ ಅನುಭವಿಗಳು ಮತ್ತು ಭರವಸೆಯ ಯುವ ಪ್ರತಿಭೆಗಳಿಂದ ಕೂಡಿರುವ ಮಿಶ್ರ ತಂಡವನ್ನು ನಿರ್ಣಾಯಕ ಆರಂಭಿಕ ಆಟಗಾರನಾಗಿ ಮುನ್ನಡೆಸಲಿದ್ದಾರೆ. ಐತಿಹಾಸಿಕವಾಗಿ ಕೆಲ ಅಚ್ಚರಿಯ ಫಲಿತಾಂಶ ನೀಡಿರುವ ಎದುರಾಳಿ ಎಂದೇ ಪರಿಗಣಿಸಲಾದ ಐರ್ಲೆಂಡ್ ವಿರುದ್ಧ ಭಾರತ ಭರ್ಜರಿಯಾಗಿ ಗೆದ್ದು ಮುಂಬರುವ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಇನ್ನಷ್ಟು ಆತ್ಮವಿಶ್ವಾಸ ಹೆಚ್ಚಿಕೊಳ್ಳುವ ಗುರಿ ಹೊಂದಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ 50 ಓವರ್‌ಗಳ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ಬಳಿಕ ಭಾರತವು ಸಾಮರ್ಥ್ಯ ಸಾಬೀತುಪಡಿಸಲು ಈ ಟೂರ್ನಿ ಮಹತ್ವದ್ದಾಗಿದೆ. ಗೆಲುವಿನೊಂದಿಗೆ ಟಿ20 ವಿಶ್ವಕಪ್​ನಲ್ಲಿ ಶುಭಾರಂಭ ಮಾಡಲು ರೋಹಿತ್​ ಪಡೆ ಸಜ್ಜಾಗಿದೆ.

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇದು ಕೊನೆಯ ಟಿ20 ವಿಶ್ವಕಪ್ ಎಂದೇ ಹೇಳಲಾಗುತ್ತಿದೆ. ಕೊಹ್ಲಿ, 9000 ಟಿ20 ರನ್‌ ಬಾರಿಸಿದ್ದು, ರೋಹಿತ್​ ಇತ್ತೀಚಿನ ಫಾರ್ಮ್‌ನಲ್ಲಿ ಕುಸಿತ ಕಂಡರೂ ಟಾಪ್​ ಆರ್ಡರ್‌ನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಇತ್ತ ಐರ್ಲೆಂಡ್ ಭಾರತದಂತಹ ಉನ್ನತ ತಂಡದ ಎದುರು ದುರ್ಬಲವಾಗಿ ಕಂಡರೂ ಸಹ ಕೆಲವೊಮ್ಮೆ ಅಂದಾಜಿಸಲಾಗದ ಆಘಾತ ನೀಡಿದೆ. ಸ್ಫೋಟಕ ಬ್ಯಾಟರ್​ ಪೌಲ್ ಸ್ಟಿರ್ಲಿಂಗ್, ಆಂಡ್ರ್ಯೂ ಬಾಲ್ಬಿರ್ನಿ ಜೊತೆಗೆ ಇನ್ನೂ ಹಲವರು ತಂಡಕ್ಕೆ ಬ್ಯಾಟಿಂಗ್​ ಬಲ ನೀಡಬಲ್ಲ ಆಟಗಾರರಿದ್ದಾರೆ.

ನೆದರ್ಲೆಂಡ್ಸ್ ವಿರುದ್ಧ ಕ್ಯಾಂಫರ್‌ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್‌ ಕಿತ್ತು ಗಮನಾರ್ಹ ಸಾಧನೆ ಮಾಡಿದ್ದು, ಇದು ಐರ್ಲೆಂಡ್‌ನ ಬೌಲಿಂಗ್ ಶಕ್ತಿಗೆ ಸಾಕ್ಷಿಯಾಗಿದೆ. ಭಾರತ ತಂಡದ ಉಪನಾಯಕ ಹಾರ್ದಿಕ್ ಪಾಂಡ್ಯ ಫಾರ್ಮ್‌ಗೆ ಮರಳಿರುವುದು ತಂಡಕ್ಕೆ ಪುಷ್ಟಿ ನೀಡಿದೆ. ಕಳೆ ಕ್ರಮಾಂಕದಲ್ಲಿ ಉತ್ತಮ ಬ್ಯಾಟರ್​​ ಮತ್ತು ವಿಶ್ವಾಸಾರ್ಹ ನಾಲ್ಕನೇ ಬೌಲಿಂಗ್ ಆಯ್ಕೆಯಾಗಿ ಪಾಂಡ್ಯ ದ್ವಿಪಾತ್ರವು ಪ್ರಮುಖವಾಗಿದೆ. ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಪ್ರಭಾವಶಾಲಿ ಪ್ರದರ್ಶನ ತೋರಿದ್ದರು. ಜೊತೆಗೆ ವಿಶೇಷವಾಗಿ ರಿಷಭ್​ ಪಂತ್ ಮತ್ತು ಶಿವಂ ದುಬೆ ಕೂಡ ಮಿಂಚಿದ್ದರು.

ಒಂದು ವರ್ಷದ ಅವಧಿಯ ಗಾಯದ ವಿರಾಮದಿಂದ ಹಿಂದಿರುಗಿದ ಪಂತ್ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಆತ್ಮವಿಶ್ವಾಸದಿಂದ ಬ್ಯಾಟ್​ ಮಾಡುವುದು ಅತ್ಯಗತ್ಯವಾಗಿದೆ. ಇತ್ತೀಚಿನ ಫಾರ್ಮ್ ಪರಿಗಣಿಸಿದರೆ, ಅವರು ಈ ಹಿಂದಿನ 11 ಇನ್ನಿಂಗ್ಸ್‌ಗಳಲ್ಲಿ ಮೂರು ಅರ್ಧಶತಕ ಮತ್ತು ಒಂದು ಶತಕ ಬಾರಿಸಿದ್ದಾರೆ.

ಬೌಲಿಂಗ್​ ವಿಭಾಗದಲ್ಲಿ ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್​ ಅವರಲ್ಲಿ ಯಾರು ಕಣಕ್ಕಿಳಿಯಲಿದ್ದಾರೆ ಎಂದು ಕುತೂಹಲವಿದೆ. ನಸ್ಸೌ ಕೌಂಟಿ ಪಿಚ್​​ ತಿರುವಿಗೆ ನೆರವಾಗುವ ನಿರೀಕ್ಷೆಯಿದೆ. ಉತ್ತಮ ಗುಣಮಟ್ಟದ ಸ್ಪಿನ್ ವಿರುದ್ಧ ಹೋರಾಡಬೇಕಾದ ಅನಿವಾರ್ಯತೆ ಐರಿಶ್ ತಂಡಕ್ಕಿದೆ. ಜೊತೆಗೆ, ಸದಾ ವಿಶ್ವಾಸಾರ್ಹ ಬೌಲಿಂಗ್​ ತೋರುವ ಜಸ್ಪ್ರೀತ್ ಬುಮ್ರಾ ನೇತೃತ್ವದ ವೇಗದ ದಾಳಿಯು ಮೊಹಮ್ಮದ್ ಸಿರಾಜ್ ಮತ್ತು ಅರ್ಶ್ದೀಪ್ ಸಿಂಗ್ ಮೇಲೆಯೂ ಅವಲಂಬಿತವಾಗಿದೆ.

ಎರಡೂ ತಂಡಗಳು ನ್ಯೂಯಾರ್ಕ್‌ನ ಕ್ರಿಕೆಟ್​ ಮೈದಾನದಲ್ಲಿ ಚೊಚ್ಚಲ ಪಂದ್ಯವಾಡುತ್ತಿದ್ದು, ಪರಿಸ್ಥಿತಿ ಹೇಗೆ ಸದ್ಬಳಕೆ ಮಾಡಿಕೊಳ್ಳುತ್ತಾರೆ ಎಂಬುದರ ಮೇಲೆ ಯಶಸ್ಸು ಅವಲಂಬಿತವಾಗಿದೆ. ಭಾರತವು ಗೆಲುವಿನೊಂದಿಗೆ ಅಭಿಯಾನ ಪ್ರಾರಂಭಿಸುವ ಗುರಿಯನ್ನು ಹೊಂದಿದ್ದು, ಇತ್ತ ಐರ್ಲೆಂಡ್‌ ತಂಡಕ್ಕೆ ಜಾಗತಿಕ ವೇದಿಕೆಯಲ್ಲಿ ವಿಶ್ವದರ್ಜೆಯ ತಂಡದೆದುರು ತಮ್ಮ ಕೌಶಲ್ಯ ಪ್ರದರ್ಶಿಸಲು ಇದೊಂದು ಸುವರ್ಣಾವಕಾಶವಾಗಿದೆ. ರೋಚಕ ಟಿ20 ವಿಶ್ವಕಪ್​ ಪಂದ್ಯದ ಭರವಸೆಯಲ್ಲಿ ಐರ್ಲೆಂಡ್ ಪಡೆಯಿದೆ.

ಪಂದ್ಯದ ಆರಂಭ: ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ

ಭಾರತದ ಸಂಭಾವ್ಯ 11: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್.

ಸಂಭವನೀಯ ಐರ್ಲೆಂಡ್​ 11: ಆಂಡಿ ಬಾಲ್ಬಿರ್ನಿ, ಪಾಲ್ ಸ್ಟಿರ್ಲಿಂಗ್ (ನಾಯಕ), ಲೋರ್ಕನ್ ಟಕರ್, ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಗರೆಥ್ ಡೆಲಾನಿ, ಮಾರ್ಕ್ ಅಡೇರ್, ಬ್ಯಾರಿ ಮೆಕಾರ್ಥಿ, ಕ್ರೇಗ್ ಯಂಗ್/ಬೆನ್ ವೈಟ್, ಜೋಶ್ ಲಿಟಲ್.

ಇದನ್ನೂ ಓದಿ: ಟಿ20 ವಿಶ್ವಕಪ್​ ಇತಿಹಾಸದಲ್ಲೇ ದಾಖಲೆಯ ಬಹುಮಾನ ಘೋಷಿಸಿದ ಐಸಿಸಿ: ಗೆದ್ದವರಿಗೆ ಎಷ್ಟು ಕೋಟಿ ಗೊತ್ತಾ? - T20 World Cup Prize Money

Last Updated : Jun 5, 2024, 8:18 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.