ETV Bharat / sports

ರೋಹಿತ್ ​ - ಯಶಸ್ವಿ ಬಿರುಸಿನ ಬ್ಯಾಟಿಂಗ್​: ಕೇವಲ 3 ಓವರ್​ನಲ್ಲೇ ವಿಶ್ವದಾಖಲೆ ಬರೆದ ಟೀಂ ಇಂಡಿಯಾ! - Team India New Record

author img

By ETV Bharat Sports Team

Published : 2 hours ago

ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಭಾರತ 2 ವಿಶ್ವದಾಖಲೆಗಳನ್ನು ಬರೆದಿದೆ. ಇದರೊಂದಿಗೆ ಈ ದಾಖಲೆ ಮಾಡಿದ ವಿಶ್ವದ ಏಕೈಕ ತಂಡವಾಗಿ ಹೊರಹೊಮ್ಮಿದೆ.

ರೋಹಿತ್​ ಶರ್ಮಾ ಮತ್ತು ಜೈಸ್ವಾಲ್​
ರೋಹಿತ್​ ಶರ್ಮಾ ಮತ್ತು ಜೈಸ್ವಾಲ್​ (AP)

ಹೈದರಾಬಾದ್​: ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಒಂದೇ ಇನ್ನಿಂಗ್ಸ್​ನಲ್ಲಿ ಎರಡು ದಾಖಲೆಗಳನ್ನು ಬರೆದು ವಿಶ್ವದ ಏಕೈಕ ತಂಡವಾಗಿ ಹೊರ ಹೊಮ್ಮಿದೆ.

ಹೌದು, ಕಾನ್ಪುರದ ಗ್ರೀನ್​ ಪಾರ್ಕ್​ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಬಾಂಗ್ಲಾದೇಶವನ್ನು 233 ರನ್‌ಗಳಿಗೆ ಆಲೌಟ್ ಮಾಡಿ, ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ, 2 ವಿಶ್ವ ದಾಖಲೆಗಳನ್ನು ನಿರ್ಮಿಸಿದೆ. ರೋಹಿತ್​ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್​ ಅವರ ಬಿರುಸಿನ ಬ್ಯಾಟಿಂಗ್​ನಿಂದಾಗಿ ಕೇವಲ 18 ಎಸೆತಗಳಲ್ಲಿ 50 ರನ್​ಗಳನ್ನು ಪೂರ್ಣಗೊಳಿಸುವ ಮೂಲಕ ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲೇ ವೇಗವಾಗಿ 50 ರನ್​ ಪೂರ್ಣಗೊಳಿಸಿದ ವಿಶ್ವದ ಮೊದಲ ತಂಡವಾಗಿ ದಾಖಲೆ ಬರೆಯಿತು.

ವೇಗದ 100 ರನ್​: ಬಳಿಕ ಟೆಸ್ಟ್​ನಲ್ಲಿ ವೇಗವಾಗಿ 100ರನ್​ಗಳನ್ನೂ ಪೂರ್ಣಗೊಳಿಸುವ ಮೂಲಕ ಎರಡನೇ ವಿಶ್ವ ದಾಖಲೆಯನ್ನೂ ಬರೆಯಿತು. 10.1 ಓವರ್​ನಲ್ಲೇ ಭಾರತ ತಂಡ 100 ರನ್​ ಕಲೆ ಹಾಕಿ ಈ ಸಾಧನೆ ಮಾಡಿತು. ಇದರೊಂದಿಗೆ ತನ್ನದೇ ಹೆಸರಿನಲ್ಲಿದ್ದ ಹಳೆಯ ದಾಖಲೆಯನ್ನು ಅಳಿಸಿಹಾಕಿದೆ. ಈ ಹಿಂದೆ ವೆಸ್ಟ್ ಇಂಡೀಸ್​​ ವಿರುದ್ಧ ನಡೆದಿದ್ದ ಟೆಸ್ಟ್​ ಪಂದ್ಯದಲ್ಲಿ 12.2 ಓವರ್​ಗಳಲ್ಲಿ 100 ರನ್​ ಪೂರ್ಣಗೊಳಿಸಿ ಅತ್ಯಂತ ವೇಗವಾಗಿ ನೂರು ರನ್​ಗಳನ್ನು ಪೂರೈಸಿದ ವಿಶ್ವದ ಏಕೈಕ ತಂಡವಾಗಿತ್ತು. ಇದೀಗ ತನ್ನದೇ ಆದ ದಾಖಲೆಯನ್ನು ಮುರಿದು ಹಾಕಿದೆ ಟೀಂ ಇಂಡಿಯಾ.

ಇದನ್ನೂ ಓದಿ: ಭಾರತ-ಬಾಂಗ್ಲಾ 2ನೇ ಟೆಸ್ಟ್‌: 300ನೇ ವಿಕೆಟ್‌ ಪಡೆದು ಸಂಭ್ರಮಿಸಿದ ರವೀಂದ್ರ ಜಡೇಜಾ! - Jadeja Test Cricket Record

ETV Bharat Logo

Copyright © 2024 Ushodaya Enterprises Pvt. Ltd., All Rights Reserved.