ಪ್ಯಾರಿಸ್ (ಫ್ರಾನ್ಸ್): ಪ್ಯಾರಿಸ್ ಒಲಿಂಪಿಕ್ 2024ರ ಮೂರನೇ ದಿನದಂದು ಭಾರತ ಬ್ಯಾಡ್ಮಿಂಟನ್‌ನಲ್ಲಿ ನಿರಾಸೆ ಅನುಭವಿಸಿದೆ. ಸೋಮವಾರ ಲಾ ಚಾಪೆಲ್ಲೆ ಅರೆನಾದಲ್ಲಿ ನಡೆದ ಬ್ಯಾಡ್ಮಿಂಟನ್ ಮಹಿಳೆಯರ ಡಬಲ್ಸ್‌ನ ಎರಡನೇ ಗುಂಪು ಹಂತದ ಪಂದ್ಯದಲ್ಲಿ ಭಾರತದ ಸ್ಟಾರ್ ಷಟ್ಲರ್ ಜೋಡಿ ತನಿಶಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ ಅವರು ಜಪಾನ್ ವಿರುದ್ಧ ಸೋಲನುಭವಿಸಿದ್ದಾರೆ.
ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ನಾಲ್ಕನೇ ಶ್ರೇಯಾಂಕದ ಜಪಾನಿನ ಜೋಡಿ ನಮಿ ಮತ್ಸುಯಾಮಾ ಮತ್ತು ಚಿಹಾರು 21-11, 21-12 ನೇರ ಸೆಟ್‌ಗಳಿಂದ ಭಾರತದ ತನಿಶಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ ಅವರ ವಿರುದ್ಧ ಗೆಲವು ಸಾಧಿಸಿದರು. 48 ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ಭಾರತd ಜೋಡಿ ಸೋಲನುಭವಿಸಿತು. ಇದಕ್ಕೂ ಮೊದಲು ವಿಶ್ವ 19ನೇ ಶ್ರೇಯಾಂಕದ ಭಾರತದ ಈ ಜೋಡಿ ರಿಪಬ್ಲಿಕ್ ಆಫ್ ಕೊರಿಯಾದ ಕಿಮ್ ಸೋ ಯೊಂಗ್ ಮತ್ತು ಕಾಂಗ್ ಹೀ ಯೋಂಗ್ ವಿರುದ್ಧ ಸೋಲನುಭವಿಸಿತ್ತು. ಈ ಪಂದ್ಯದಲ್ಲೂ ಕ್ರಾಸ್ಟೊ-ಪೊನ್ನಪ್ಪ ಜೋಡಿ 18-21, 10-21 ನೇರ ಸೆಟ್‌ಗಳಿಂದ ಸೋಲನ್ನು ಕಂಡಿದ್ದರು.
10m Air Rifle Final
— SAI Media (@Media_SAI) July 29, 2024
Ramita Jindal puts up a fighting show as she finishes 7th in the final with a score of 145.3.
Kudos to the shooter for her performance at the #Paris2024Olympics. pic.twitter.com/5umMWXSLxL
ಪಂದ್ಯ ಆರಂಭದಿಂದಲೂ ಭಾರತದ ಶಟ್ಲರ್‌ಗಳು ತಮ್ಮ ಎದುರಾಳಿಗಳ ಮೇಲೆ ಯಾವುದೇ ಒತ್ತಡ ಹೇರಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ, ಜಪಾನ್ ಜೋಡಿಯು ಆರಂಭದಿಂದಲೇ ಪಂದ್ಯದಲ್ಲಿ ಹಿಡಿತ ಸಾಧಿಸುತ್ತ ಸಾಗಿತ್ತು.
ಇನ್ನುಳಿದಂತೆ ಮುಂದಿನ ಪಂದ್ಯದಲ್ಲಿ ಭಾರತದ ಈ ಜೋಡಿ ಆಸ್ಟ್ರೇಲಿಯಾದ ಸೆಟಿಯಾನಾ ಮಪಾಸಾ ಹಾಗೂ ಏಂಜೆಲಾಯ ವಿರುದ್ಧ ಸೆಣಸಲಿದೆ. ಈ ಪಂದ್ಯದಲ್ಲಿ ಗೆದ್ದರೂ ಭಾರತ ಕ್ವಾರ್ಟರ್ ಫೈನಲ್ ತಲುಪುವುದು ಬಹುತೇಕ ಕಷ್ಟಕರವಾಗಿದೆ.
ಬ್ಯಾಡ್ಮಿಂಟನ್ ಮಹಿಳೆಯರ ಡಬಲ್ಸ್‌ನಲ್ಲಿ ಸತತ ಎರಡು ಸೋಲಿನ ನಂತರ, ಭಾರತದ ಜೋಡಿ ಅಶ್ವಿನಿ ಪೊನ್ನಪ್ಪ-ತನೀಶಾ ಕ್ರಾಸ್ಟೊ ಜಪಾನ್ ಮತ್ತು ದಕ್ಷಿಣ ಕೊರಿಯಾ ಜೋಡಿಗಳ ನಂತರ ಸಿ ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿದೆ. ಪ್ರತಿ ಗುಂಪಿನಿಂದ ಅಗ್ರ 2 ತಂಡಗಳು ಮುಂದಿನ ಸುತ್ತಿಗೆ ಪ್ರವೇಶ ಪಡೆಯುತ್ತವೆ. ಹೀಗಿರುವಾಗ ಈ ಕೂಟದಲ್ಲಿ ಭಾರತದ ಪದಕ ನಿರೀಕ್ಷೆಗೆ ದೊಡ್ಡ ಪೆಟ್ಟು ಬೀಳಬಹುದು.
ಅಶ್ವಿನಿ ಪೊನ್ನಪ್ಪ-ತನಿಶಾ ಕ್ರಾಸ್ಟೊ ಜೋಡಿಯು ಜುಲೈ 30 ರಂದು ಆಸ್ಟ್ರೇಲಿಯಾ ವಿರುದ್ಧ ತಮ್ಮ ಮುಂದಿನ ಪಂದ್ಯವನ್ನು ಆಡಲಿದೆ.
ಇದನ್ನೂ ಓದಿ: ಏರ್ ರೈಫಲ್ನಲ್ಲಿ ಭಾರತಕ್ಕೆ ನಿರಾಸೆ: ಅರ್ಜುನ್ ಬಾಬುತಾ ಕೈ ತಪ್ಪಿದ ಪದಕ - Paris olympics 2024