ನವದೆಹಲಿ: ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಕ್ರೀಡೆಯೂ ಅತೀ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ದಿನ ಕಳೆದಂತೆ ಕ್ರಿಕೆಟ್ ನೋಡುವವರು ಮತ್ತು ಆಡವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಕ್ರೀಡೆಯನ್ನು ಮತ್ತಷ್ಟು ಅಭಿವೃದ್ದಿ ಪಡೆಸಲೆಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು ನಿರಂತರ ಶ್ರಮವಹಿಸುತ್ತಿದೆ. ಇದರ ಪರಿಣಾಮವಾಗಿ ಇಂದು ಹಲವಾರು ದೇಶಗಳಿಗೂ ಕ್ರಿಕೆಟ್ ವ್ಯಾಪಿಸಿ ಬೆಳವಣಿಗೆ ಕಾಣುತ್ತಿದೆ. ಆದರೆ ಕ್ರಿಕೆಟ್ ಬೆಳವಣಿಗೆ ಕಂಡಿರುವ ಏಷ್ಯಾದ ಈ ದೇಶದಲ್ಲಿ ಕ್ರಿಕೆಟ್ ಅನ್ನು ಬ್ಯಾನ್ ಮಾಡಲು ಅಲ್ಲಿಯ ಸರ್ಕಾರ ಆದೇಶ ಹೊರಡಿಸಿದೆ ಎಂಬ ವರದಿಗಳು ಬರುತ್ತಿವೆ.
BREAKING:
— Current Report (@Currentreport1) September 12, 2024
The Supreme Leader of Afghanistan's Taliban, Hibatullah Akhundzada has announced that he will introduce a gradual ban on cricket in the country.
The Taliban cleric believes cricket has harmful influence on the country and is against Sharia law. pic.twitter.com/vHi1rnjRY5
ಅಫ್ಘಾನಿಸ್ತಾನದಲ್ಲಿ ಬ್ಯಾನ್ ಆಗುತ್ತಾ ಕ್ರಿಕೆಟ್: ಹೌದು, ಅಫ್ಘಾನಿಸ್ತಾನ ದೇಶದಲ್ಲಿ ಈಗಾಗಲೇ ಕ್ರಿಕೆಟ್ ಜನಪ್ರಿಯತೆ ಪಡೆದುಕೊಂಡಿದ್ದು, ಆ ದೇಶವನ್ನು ಪ್ರತಿನಿದಿಸುವ ತಂಡವೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿದೆ. ವಿಶ್ವಕಪ್‌ನಲ್ಲೂ ಆಸ್ಟ್ರೇಲಿಯಾ, ನ್ಯೂಜಿಲೆಂಡ್ನಂತಹ ಬಲಿಷ್ಠ ತಂಡಗಳನ್ನು ಬಗ್ಗು ಬಡೆದಿರುವ ಈ ತಂಡ ಐಸಿಸಿ ರ್ಯಾಂಕಿಂಗ್ನಲ್ಲೂ ಟಾಪ್ 10ರಲ್ಲಿ ಸ್ಥಾನ ಪಡೆದುಕೊಂಡಿದೆ. ಇಂತಹ ಬಲಿಷ್ಠ ತಂಡವನ್ನು ಹೊಂದಿರುವ ಈ ರಾಷ್ಟ್ರದಲ್ಲಿ ಕ್ರಿಕೆಟ್ ಅನ್ನು ನಿಷೇಧಿಸಲಾಗುತ್ತಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ವಾಸ್ತವವಾಗಿ, ಅಲ್ಲಿಯ ತಾಲಿಬಾನ್ ಸರ್ಕಾರವೂ ಕ್ರಿಕೆಟ್ ನಿಷೇಧಿಸಲು ಆದೇಶ ಹೊರಡಿಸಿದೆ ಎಂದು ವರದಿಗಳೂ ಬಂದಿವೆ. ಈಗಾಗಲೇ ಮಹಿಳೆಯರಿಗೆ ಕ್ರಿಕೆಟ್ ಆಟವಾಡುವುದನ್ನು ನಿಷೇಧಿಸಿರುವ ಸರ್ಕಾರ ಇದೀಗ ಇಡೀ ದೇಶದಲ್ಲಿ ಕ್ರಿಕೆಟ್ ಅನ್ನು ಸಂಪೂರ್ಣವಾಗಿ ಬ್ಯಾನ್ ಮಾಡಬೇಕೆಂದು ನಿರ್ಧರಿಸಿದೆ ಎನ್ನಲಾಗುತ್ತುದೆ. ಈ ಬಗ್ಗೆ ತಾಲಿಬಾನ್ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲವಾದರೂ, ಸೋರಿಕೆಯಾಗಿರುವ ವರದಿ ಪ್ರಕಾರ, ಕ್ರಿಕೆಟ್ ಆಟವು ದೇಶದೊಳಗೆ ಕೆಟ್ಟ ವಾತಾವರಣವನ್ನು ಸೃಷ್ಟಿಸುತ್ತಿದೆ ಅಲ್ಲದೇ ಇದು ಷರಿಯಾ ವಿರುದ್ಧವಾಗಿದೆ ಎಂಬ ಕಾರಣದಿಂದ ನಿಷೇಧ ಹೊರಡಿಸಲಾಗುತ್ತಿದೆ ಎನ್ನಲಾಗಿದೆ.
🚨Shocking News🚨
— Cricket Manchurian (@Cric_man07) September 11, 2024
One Leader of Taliban Mulla Habitullah does not like cricket so he ban the Cricket.
Cricket is the only game in Afghanistan give happiness of Afghanes. #Cricket #CricketUpdate #AFGvNZ #Afghanistan pic.twitter.com/u9zoFG5j6J
ಬಲಿಷ್ಠ ತಂಡಗಳನ್ನು ಮಣಿಸಿದ ಟೀಂಗೆ ಇಂತಹ ಪರಿಸ್ಥಿತಿಯೇ?: ಸದ್ಯ ಅಫ್ಘಾನ್ ತಂಡವು ಕ್ರಿಕೆಟ್‌ನಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. 2024ರ ಟಿ 20 ವಿಶ್ವಕಪ್‌ನಲ್ಲೂ ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡವನ್ನು ಮಣಿಸಿ ಸೆಮಿಫೈನಲ್ ತಲುಪಿತ್ತು. ಆದರೇ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲನುಭವಿಸಿತು. ಆದರೆ ಟೂರ್ನಿ ಉದ್ದಕ್ಕೂ ಅಫ್ಘಾನ್ ಆಟಗಾರರು ಅತ್ಯುತ್ತಮ ಪ್ರದರ್ಶನ ತೋರಿದ್ದರು ಎಂಬುದು ಗಮನಾರ್ಹ.‘
ಇದಕ್ಕೂ ಮುನ್ನಾ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಐಸಿಸಿ ಅಧ್ಯಕ್ಷರಾದಾದ ಬೆನ್ನಲ್ಲೇ ಇಟಲಿಯ ಮೊನ್ಫಾಲ್ಕೋನ್ ನಗರದಲ್ಲಿ ಕ್ರಿಕೆಟ್ ಅನ್ನು ನಿಷೇಧಿಸಲಾಗಿದೆ. ಅಲ್ಲದೇ ಕ್ರಿಕೆಟ್ ಆಡಿದ್ದೇ ಆದಲ್ಲಿ 10,000ರೂ. ದಂಡವನ್ನು ವಿಧಿಸುವದಾಗಿ ಆದೇಶ ಹೊರಡಿಸಲಾಗಿದೆ.