ಹೈದರಾಬಾದ್: ಕ್ರಿಕೆಟ್ನಲ್ಲಿ ಕ್ಯಾಚ್ಗಳು ಎಷ್ಟು ಮಹತ್ವ ಎಂದರೆ ಇಡೀ ಪಂದ್ಯದ ದಿಕ್ಕನ್ನೇ ಬದಲಿಸಿ, ಗೆಲುವು ತಂದುಕೊಡಬಲ್ಲವು. ಕೈಚೆಲ್ಲುವ ಒಂದು ಕ್ಯಾಚ್ ಪಂದ್ಯವನ್ನೇ ಸೋಲಿನ ದವಡೆಗೆ ಸಿಲುಕಿಸುವ ತಾಕತ್ತೂ ಇರುತ್ತವೆ. ಅದಕ್ಕೆ ಹೇಳೋದು 'ಕ್ಯಾಚ್ ವಿನ್ ದ ಮ್ಯಾಚ್' ಅಂತ.
ಈ ವಿಶ್ವಕಪ್ನಲ್ಲಿ ಭಾರತ ತಂಡವೂ ಕೂಡ ಹಲವು ಅದ್ಭುತ ಕ್ಯಾಚ್ಗಳನ್ನು ಹಿಡಿದು ಸೈ ಎನಿಸಿಕೊಂಡಿದೆ. ಕ್ಯಾಚ್ ಹಿಡಿಯುವ ಪ್ರಮಾಣದಲ್ಲಿ ಎಲ್ಲ ತಂಡಗಳಂತೆ ಭಾರತವೂ ರೇಟಿಂಗ್ನಲ್ಲಿ ಮುಂದಿದೆ. ಶೇಕಡಾ 75ರಷ್ಟು ನಿಖರವಾಗಿ ಪಂದ್ಯದಲ್ಲಿ ಕ್ಯಾಚ್ಗಳನ್ನು ಹಿಡಿದ ದಾಖಲೆ ಹೊಂದಿದೆ.
ಅದರಲ್ಲೂ ಸೆಮಿಫೈನಲ್ನಲ್ಲಿ ಅಕ್ಷರ್ ಪಟೇಲ್, ಫೈನಲ್ನಲ್ಲಿ ಸೂರ್ಯಕುಮಾರ್ ಹಿಡಿದ ಕ್ಯಾಚ್ಗಳು ಬಹುಕಾಲ ನೆನಪು ಉಳಿಯುವ ಹಿಡಿತಗಳಾಗಿವೆ. ಇವೆರಡೂ ತಂಡದ ಫಲಿತಾಂಶವನ್ನೂ ಬದಲಿಸಿವೆ. ಸಲೀಸಾಗಿ ಕ್ಯಾಚ್ಗಳನ್ನು ಬಿಟ್ಟ ಅದೆಷ್ಟೋ ತಂಡಗಳು ಪಂದ್ಯವನ್ನೇ ಕಳೆದುಕೊಂಡಿವೆ.
ಅಕ್ಷರ್ ಅಕ್ಷರಶಃ ಸ್ಟನ್ನಿಂಗ್ ಕ್ಯಾಚ್: ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ಅಕ್ಷರ್ ಪಟೇಲ್ ಹಿಡಿದ ಕ್ಯಾಚ್ ಟೂರ್ನಿಯಲ್ಲಿ ಹಿಡಿದ ಅತ್ಯುತ್ತಮ ಕ್ಯಾಚ್ಗಳಲ್ಲಿ ಒಂದಾಗಿದೆ. ಮೊದಲು ಬ್ಯಾಟ್ ಮಾಡಿದ್ದ ಭಾರತ 206 ರನ್ ಗುರಿ ನೀಡಿತ್ತು. ಇದನ್ನು ಬೆನ್ನಟ್ಟಿದ್ದ ಆಸ್ಟ್ರೇಲಿಯಾ 8 ಓವರ್ ವೇಳೆಗೆ 1 ವಿಕೆಟ್ ಕಳೆದುಕೊಂಡು 87 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. 42 ಗಳಿಸಿ ಆಡುತ್ತಿದ್ದ ಟ್ರಾವಿಸ್ ಹೆಡ್, 37 ರನ್ ಗಳಿಸಿದ್ದ ನಾಯಕ ಮಿಚೆಲ್ ಮಾರ್ಷ್ ಕ್ರೀಸ್ನಲ್ಲಿದ್ದರು.
Give Axar Patel the Gold Medal🏅
— Richard Kettleborough (@RichKettle07) June 24, 2024
This Flying Catch from Axar Patel literally changed the match in favour of Team India 🇮🇳#INDvsAUS pic.twitter.com/c8mx4CXBql
ಇಬ್ಬರೂ ಬಿಡುಬೀಸಾಗಿ ಬ್ಯಾಟ್ ಮಾಡುತ್ತಿದ್ದರು. ಈ ವೇಳೆ ಕುಲದೀಪ್ ಯಾದವ್ ಎಸೆದ 9ನೇ ಓವರ್ನ ಕೊನೆಯ ಎಸೆತದಲ್ಲಿ ಮಿಚೆಲ್ ಮಾರ್ಷ್ ದೊಡ್ಡ ಹೊಡೆತಕ್ಕೆ ಕೈಹಾಕಿದರು. ಬೌಂಡರಿ ಗೆರೆಯಲ್ಲಿದ್ದ ಅಕ್ಷರ್ ಪಟೇಲ್ ಗಾಳಿಯಲ್ಲಿ ಹಾರಿ ಒಂಟಿ ಕೈಯಲ್ಲಿ ಚೆಂಡನ್ನು ಹಿಡಿದು ದೊಪ್ಪನೆ ನೆಲಕ್ಕೆ ಬಿದ್ದರು. ಅಷ್ಟೇ ಇಡೀ ಕ್ರೀಡಾಂಗಣವೇ ಸ್ಟನ್. ಗಾಳಿಯ ವೇಗದಲ್ಲಿ ಓಡುತ್ತಿದ್ದ ಚೆಂಡನ್ನು ಅಕ್ಷರ್ ತಡೆದು ನಿಲ್ಲಿಸಿದ್ದೇ ಸಾಹಸ. ಇದರ ಫಲಿತ ಆಸೀಸ್ ಆಟಗಾರ ಔಟ್. ಇದಾದ ಬಳಿಕ ತಂಡ ಒತ್ತಡಕ್ಕೆ ಸಿಲುಕಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿ ಪಂದ್ಯವನ್ನೇ ಸೋಲಬೇಕಾಯಿತು.
This catch and Surya Kumar Yadav have become immortal.. pic.twitter.com/ju5B7fpkOr
— Shrin (@ShrrinG) June 29, 2024
ಫೈನಲ್ನಲ್ಲಿ ಸೂರ್ಯ ಫೈನ್ ಕ್ಯಾಚ್: ಇಂಥದ್ದೇ ಒಂದು ಕ್ಯಾಚ್ ಅನ್ನು ಸೂರ್ಯಕುಮಾರ್ ಯಾದವ್ ಫೈನಲ್ ಪಂದ್ಯದಲ್ಲಿ ಹಿಡಿದು ಟ್ರೋಫಿಯನ್ನೇ ಗೆಲ್ಲುವಂತೆ ಮಾಡಿದರು. ದಕ್ಷಿಣ ಆಫ್ರಿಕಾ ತಂಡದ ಡೇವಿಡ್ ಮಿಲ್ಲರ್ ತೋಳ್ಬಲದ ಹೊಡೆತಕ್ಕೆ ಹಾರಿ ಬಂದ ಚೆಂಡು ಲಾಂಗ್ಆನ್ನಲ್ಲಿ ಇನ್ನೇನು ಸಿಕ್ಸರ್ ಗೆರೆ ದಾಟಬೇಕಿತ್ತು. ಅಲ್ಲಿಯೇ ಇದ್ದ ಸೂರ್ಯಕುಮಾರ್ ಚೆಂಗನೆ ಹಾರಿಬಂದು ಚೆಂಡನ್ನು ಬೌಂಡರಿ ಗೆರೆಯಲ್ಲಿ ಅಮೋಘವಾಗಿ ಹಿಡಿದರು. ಈ ವೇಳೆ ಆಫ್ರಿಕಾಕ್ಕೆ ಗೆಲ್ಲಲು 6 ಎಸೆತಗಳಲ್ಲಿ 16 ರನ್ ಬೇಕಿತ್ತು. ಮಿಲ್ಲರ್ ಔಟಾದ ಬಳಿಕ ತಂಡ ಸೋಲು ಕಂಡಿತು. ಈ ಮೂಲಕ ಭಾರತ ಎರಡನೇ ಬಾರಿಗೆ ವಿಶ್ವಕಪ್ ಎತ್ತಿ ಹಿಡಿಯಿತು.
ಇದನ್ನೂ ಓದಿ: ಸೋಲಿನ ಅಂಚಿನಲ್ಲಿದ್ದ ತಂಡವನ್ನು ಗೆಲುವಿನ ದಡ ಸೇರಿಸಿದ ಬುಮ್ರಾ - Jasprit Bumrah