ನವದೆಹಲಿ: 2024ರ ಟಿ-20 ವಿಶ್ವಕಪ್ ಟ್ರೋಫಿ ಗೆಲುವಿನ ನಂತರ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ಬಾಯ್ ಹೇಳಿದ್ದರು. ಇದರ ನಡುವೆ ವಿರಾಟ್‌ಗಾಗಿ ಅಭಿಮಾನಿಗಳು ರಥಯಾತ್ರೆ ನಡೆಸಿ ತಮ್ಮ ಅಭಿಮಾನ ಮೆರೆದಿದ್ದಾರೆ.
The 'Viratrath' during the Rath Yatra for Virat Kohli. 🌟
— Mufaddal Vohra (@mufaddal_vohra) July 8, 2024
- King Kohli, the crowd favourite! pic.twitter.com/22HW9hNVBl
ಸದ್ಯ ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ, ವಾಹನವೊಂದರಲ್ಲಿ ಕಿಂಗ್ ಕೊಹ್ಲಿಯ ಭಾವಚಿತ್ರಗಳು ಮತ್ತು ಬ್ಯಾನರ್ಗಳನ್ನು ಅಳವಡಿಸಿ ಅಭಿಮಾನಿಗಳು ಯಾತ್ರೆ ನಡೆಸಿದ್ದಾರೆ. ಜೊತೆಗೆ ಇಡೀ ವಾಹನಕ್ಕೆ ತ್ರಿವರ್ಣ ಧ್ವಜವನ್ನು ಹೊದಿಸಿರುವ ಅಭಿಮಾನಿಗಳು ಟೀಂ ಇಂಡಿಯಾ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಎಲ್ಲಿಂದ ಬಂದಿದೆ ಮತ್ತು ವಿರಾಟ್ ಅಭಿಮಾನಿಗಳು ಅವರಿಗಾಗಿ ರಥಯಾತ್ರೆಯನ್ನು ಎಲ್ಲಿ ನಡೆಸಿದ್ದಾರೆ ಎಂಬುದು ನಿಖರವಾಗಿ ತಿಳಿದು ಬಂದಿಲ್ಲ.
Virat Rath during Rathyatra procession🔥 pic.twitter.com/FJwevjwM2U
— Virat Kohli Fan Club (@Trend_VKohli) July 8, 2024
ಫೈನಲ್ನಲ್ಲಿ ಮಿಂಚಿದ್ದ ಕೊಹ್ಲಿ: 2024ರ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 76 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ಭಾರತವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಟಿ20 ವಿಶ್ವಕಪ್‌ನಲ್ಲಿ 8 ಪಂದ್ಯಗಳನ್ನು ಆಡಿದ್ದ ಅವರು 1 ಅರ್ಧಶತಕದ ಸಹಾಯದಿಂದ 151 ರನ್ ಗಳಿಸಿದ್ದರು. ವಿರಾಟ್ ಭಾರತದ ಪರ 125 ಟಿ20 ಪಂದ್ಯಗಳನ್ನಾಡಿದ್ದು, 1 ಶತಕ ಮತ್ತು 38 ಅರ್ಧಶತಕಗಳೊಂದಿಗೆ 4188 ರನ್ ಗಳಿಸಿದ್ದಾರೆ. 125 ಅವರು ಭಾರಿಸಿದ ಅತ್ಯುತ್ತಮ ಸ್ಕೋರ್ ಆಗಿದೆ. ಟಿ-20ಯಲ್ಲಿ ಕೊಹ್ಲಿ ಅವರ ಸರಾಸರಿ 48.7 ರನ್ ಗಳಿಸಿದ್ದಾರೆ ಮತ್ತು ಸ್ಟ್ರೈಕ್ ರೇಟ್ 137.0 ಹೊಂದಿದ್ದಾರೆ.
ಇದನ್ನೂ ಓದಿ: 52ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಪ್ರಿನ್ಸ್ ಆಫ್ ಕೋಲ್ಕತ್ತಾ' - Sourav Ganguly Birthday