ತರೌಬಾ (ಟ್ರಿನಿಡಾಡ್): 2024 ರ ಟಿ 20 ವಿಶ್ವಕಪ್‌ನ 32 ನೇ ಪಂದ್ಯದಲ್ಲಿ ಉಗಾಂಡಾವನ್ನು ನ್ಯೂಜಿಲೆಂಡ್ 9 ವಿಕೆಟ್‌ಗಳಿಂದ ಸೋಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಉಗಾಂಡಾ ತಂಡ ಕೇವಲ 40 ರನ್ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ನ್ಯೂಜಿಲೆಂಡ್ 5.2 ಓವರ್‌ಗಳಲ್ಲಿ ಪಂದ್ಯವನ್ನು ಗೆದ್ದುಕೊಂಡಿತು. ನ್ಯೂಜಿಲೆಂಡ್ ಪರ ಓಪನರ್ ಡೆವೊನ್ ಕಾನ್ವೆ 22 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಆದರೆ, ಟಿಮ್ ಸೌಥಿ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ 3 ವಿಕೆಟ್ ಪಡೆದರು. ಟ್ರೆಂಟ್ ಬೌಲ್ಟ್ ಮತ್ತು ಮಿಚೆಲ್ ಸ್ಯಾಂಟ್ನರ್ ತಲಾ ಎರಡು ವಿಕೆಟ್ ಪಡೆದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಉಗಾಂಡ ತಂಡ 18.4 ಓವರ್‌ಗಳಲ್ಲಿ 40 ರನ್ಗಳಿಸಿ ಆಲೌಟ್ ಆಯಿತು. ಈ ವೇಳೆ, ರೋನಕ್ ಪಟೇಲ್ ಮತ್ತು ಸೈಮನ್ ಸೆಸ್ಜಿ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಸೆಸ್ಜಿ ಮೊದಲ ಎಸೆತದಲ್ಲಿಯೇ ಔಟಾದರು. ಆದರೆ ಪಟೇಲ್ 2 ರನ್ಗಳಿಸಿ ಪೆವಿಲಿಯನ್‌ಗೆ ಮರಳಿದರು. ವೈಸವ ತಂಡದ ಪರ ಗರಿಷ್ಠ 11 ರನ್ ಗಳಿಸಿದರು. 18 ಎಸೆತಗಳನ್ನು ಎದುರಿಸಿದ ಅವರು 2 ಬೌಂಡರಿ ಬಾರಿಸಿದರು. ದಿನೆಕ್ ನಕ್ರಾಣಿ 4 ರನ್ ಗಳಿಸಿ ಔಟಾದರು. ನಾಯಕ ಮಸಾಬ 3 ರನ್ಗಳಿಸಿ ಅಜೇಯರಾಗಿ ಉಳಿದರು.
ನ್ಯೂಜಿಲೆಂಡ್‌ನ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದರು. ಮಿಚೆಲ್ ಸ್ಯಾಂಟ್ನರ್ 3.4 ಓವರ್ ಗಳಲ್ಲಿ 8 ರನ್ ನೀಡಿ 2 ವಿಕೆಟ್ ಪಡೆದರು. ಬೌಲ್ಟ್ 4 ಓವರ್ ಗಳಲ್ಲಿ ಕೇವಲ 7 ರನ್ ನೀಡಿ 2 ವಿಕೆಟ್ ಪಡೆದರು. ಸೌಥಿ 4 ಓವರ್‌ಗಳಲ್ಲಿ ಕೇವಲ 4 ರನ್ ನೀಡಿ 3 ವಿಕೆಟ್ ಪಡೆದರು. ರಚಿನ್ ರವೀಂದ್ರ 3 ಓವರ್ ಗಳಲ್ಲಿ 9 ರನ್ ನೀಡಿ 2 ವಿಕೆಟ್ ಪಡೆದರು. ಲಾಕಿ ಫರ್ಗುಸನ್ 1 ವಿಕೆಟ್ ಪಡೆದರು.
ಇನ್ನು ಉಗಾಂಡಾ ನೀಡಿದ ಗುರಿಯನ್ನು ಬೆನ್ನಟ್ಟಲು ಕ್ರೀಸ್ಗೆ ಇಳಿದ ನ್ಯೂಜಿಲೆಂಡ್ ತಂಡಕ್ಕೆ ಆರಂಭಿಕ ಆಘಾತ ಎದುರಾಯ್ತು. ಅಲೆನ್ 17 ಎಸೆತಗಳಲ್ಲಿ 9 ರನ್ ಗಳಿಸಿ ಔಟಾದರು. ಕಾನ್ವೇ 15 ಎಸೆತಗಳಲ್ಲಿ 22 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರು 4 ಬೌಂಡರಿಗಳನ್ನು ಬಾರಿಸಿದರು. ರಚಿನ್ ರವೀಂದ್ರ 1 ರನ್ ಗಳಿಸಿ ಅಜೇಯರಾಗಿ ಉಳಿದರು. ಉಗಾಂಡ ನೀಡಿದ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಕೇವಲ 5.2 ಓವರ್‌ಗಳಲ್ಲಿ ಗುರಿ ಮುಟ್ಟಿತು. ಇನ್ನು 88 ಎಸೆತಗಳು ಬಾಕಿ ಇರುವಾಗಲೇ ಗೆಲುವು ಸಾಧಿಸಿತು.
ನ್ಯೂಜಿಲೆಂಡ್ ಮತ್ತು ಉಗಾಂಡ ತಂಡಗಳು ಸೂಪರ್ 8 ರೇಸ್‌ನಿಂದ ಹೊರಗುಳಿದಿವೆ. ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ 3 ಪಂದ್ಯಗಳನ್ನು ಆಡಿದೆ. ಈ ಅವಧಿಯಲ್ಲಿ ಕೇವಲ 1 ಪಂದ್ಯ ಗೆದ್ದಿದೆ. ಉಗಾಂಡದ ಬಗ್ಗೆ ಹೇಳುವುದಾದರೆ 4 ಪಂದ್ಯಗಳನ್ನು ಆಡಿ ಒಂದು ಪಂದ್ಯ ಮಾತ್ರ ಗೆದ್ದಿದೆ. ಈ ಎರಡೂ ತಂಡಗಳು ಸಿ ಗುಂಪಿನಲ್ಲಿದ್ದವು. ಈ ಗುಂಪಿನಿಂದ ಅಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ಎಂಟರ ಘಟ್ಟಕ್ಕೆ ತಲುಪಿವೆ.