ETV Bharat / sports

ಟಿ-20 ವಿಶ್ವಕಪ್​ಗೂ ವಿರಾಟ್​ ಕೊಹ್ಲಿಯೇ ಕಿಂಗ್​: ಚೇಸ್​ ಮಾಸ್ಟರ್​ ಗಳಿಸಿದ ರನ್​ ಎಷ್ಟು ಗೊತ್ತಾ? - TOP 5 batters - TOP 5 BATTERS

ಟಿ20 ಕ್ರಿಕೆಟ್​ ಇತಿಹಾಸದಲ್ಲಿ ಅತಿ ಹೆಚ್ಚು ರನ್​ ಕಲೆಹಾಕಿದ ಟಾಪ್​ 5 ಬ್ಯಾಟ್ಸ್​ಮನ್​ಗಳು ಯಾರು?. ಅವರ ಕುರಿತು ಮಾಹಿತಿ ಇಲ್ಲಿದೆ.

ಟಿ20 ವಿಶ್ವಕಪ್​ಗೂ ವಿರಾಟ್​ ಕೊಹ್ಲಿಯೇ ಕಿಂಗ್​
ಟಿ20 ವಿಶ್ವಕಪ್​ಗೂ ವಿರಾಟ್​ ಕೊಹ್ಲಿಯೇ ಕಿಂಗ್​ (ETV Bharat)
author img

By ETV Bharat Karnataka Team

Published : May 28, 2024, 9:22 PM IST

ನವದೆಹಲಿ: ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಐಸಿಸಿ ಟಿ -20 ವಿಶ್ವಕಪ್ 2024ಕ್ಕೆ ದಿನಗಣನೆ ಆರಂಭವಾಗಿದೆ. ಕ್ರಿಕೆಟ್ ಮೈದಾನದಲ್ಲಿ ತಮ್ಮ ನೆಚ್ಚಿನ ತಂಡ ಮಿಂಚುವುದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಮೆಗಾ ಟೂರ್ನಿಯಲ್ಲಿ ಬ್ಯಾಟಿಂಗ್​ ಕಿಂಗ್​ ವಿರಾಟ್ ಕೊಹ್ಲಿ, ಹಿಟ್​ಮ್ಯಾನ್​ ರೋಹಿತ್ ಶರ್ಮಾ ಭಾರತ ತಂಡದ ಭಾಗವಾಗಿರುವುದು ಭಾರತೀಯ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ.

ಚುಟುಕು ಮಾದರಿಯ ಉದ್ಘಾಟನಾ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್​ ಆಗಿದ್ದು ಬಿಟ್ಟರೆ ಅದಾದ ಬಳಿಕ ವಿಶ್ವಕಪ್​ ಗಗನಕುಸುಮವಾಗಿದೆ. ವಿರಾಟ್​, ರೋಹಿತ್ ಅವ​ರಂತಹ ದೈತ್ಯ ಬ್ಯಾಟರ್​ಗಳು ರಾಶಿ ರಾಶಿ ರನ್​ ಕಲೆಹಾಕಿದರೂ ತಂಡಕ್ಕೆ ಪ್ರಶಸ್ತಿ ಒಲಿಯುತ್ತಿಲ್ಲ. ಈ ಬಾರಿ ಹಿರಿ- ಕಿರಿಯರ ಸಮಾಗಮದಲ್ಲಿ ತಂಡ ಕಪ್​ ಗೆಲ್ಲಲು ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ದಂಡಯಾತ್ರೆ ಕೈಗೊಂಡಿದೆ.

ಅದಕ್ಕೂ ಮೊದಲು ಟಿ-20 ಕ್ರಿಕೆಟ್​ ಟೂರ್ನಿ ಇತಿಹಾಸದಲ್ಲಿ ಅತಿ ಹೆಚ್ಚು ಎನ್​ ಗಳಿಸಿದ ಬ್ಯಾಟರ್​ಗಳು ಯಾರು?. ಅವರು ಎಷ್ಟು ಇನಿಂಗ್ಸ್​ನಲ್ಲಿ ಎಷ್ಟು ರನ್​ ಕಲೆ ಹಾಕಿದ್ದಾರೆ ಎಂಬುದು ನಿಮಗೆ ಗೊತ್ತಾ?. ಅದರಲ್ಲಿ ಭಾರತೀಯ ಬ್ಯಾಟರ್​ಗಳು ಎಷ್ಟಿದ್ದಾರೆ ಎಂಬ ಮಾಹಿತಿಯುಳ್ಳ ವರದಿ ಇಲ್ಲಿದೆ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ (ETV Bharat)

ವಿರಾಟ್ ಕೊಹ್ಲಿ: ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್. ಚುಟುಕು ಮಾದರಿಯಲ್ಲಿ ವಿರಾಟ್ ಆಡಿದ 27 ಪಂದ್ಯಗಳ 25 ಇನ್ನಿಂಗ್ಸ್‌ಗಳಲ್ಲಿ 14 ಅರ್ಧ ಶತಕಗಳ ಸಮೇತ 1,141 ರನ್ ಗಳಿಸಿದ್ದಾರೆ. ಇದರಲ್ಲಿ 103 ಬೌಂಡರಿ ಮತ್ತು 28 ಸಿಕ್ಸರ್‌ ಸಹ ಹೊಡೆದಿದ್ದಾರೆ. ವಿರಾಟ್​​ಗೆ ಇದು 6 ಟಿ20 ವಿಶ್ವಕಪ್​ ಆವೃತ್ತಿಯಾಗಿದ್ದು, ಮತ್ತಷ್ಟು ರನ್​ ಪೇರಿಸುವ ಅವಕಾಶವಿದೆ.

ಮಹೇಲ ಜಯವರ್ಧನೆ
ಮಹೇಲ ಜಯವರ್ಧನೆ (ETV Bharat)

ಮಹೇಲ ಜಯವರ್ಧನೆ: ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮಹೇಲ ಜಯವರ್ಧನೆ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಜಯವರ್ಧನೆ 31 ಪಂದ್ಯಗಳ 31 ಇನ್ನಿಂಗ್ಸ್‌ಗಳಲ್ಲಿ 1 ಶತಕ ಮತ್ತು 6 ಅರ್ಧಶತಕ ಸೇರಿ 1016 ರನ್ ಗಳಿಸಿದ್ದಾರೆ. ಅವರು 111 ಬೌಂಡರಿಗಳು ಮತ್ತು 35 ಸಿಕ್ಸರ್‌ಗಳನ್ನು ಹೊಂದಿದ್ದಾರೆ.

ಯೂನಿವರ್ಸಲ್​ ಬಾಸ್​ ಕ್ರಿಸ್​ ಗೇಲ್​
ಯೂನಿವರ್ಸಲ್​ ಬಾಸ್​ ಕ್ರಿಸ್​ ಗೇಲ್​ (ETV Bharat)

ಕ್ರಿಸ್ ಗೇಲ್: 'ಯೂನಿವರ್ಸಲ್​ ಬಾಸ್​' ಖ್ಯಾತಿಯ ದೈತ್ಯ ವೆಸ್ಟ್​ ಇಂಡೀಸ್​ ಬ್ಯಾಟರ್​​ ಚುಟುಕು ಮಾದರಿಯ ವಿಶ್ವಕಪ್​ನಲ್ಲಿ 965 ರನ್​ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಗೇಲ್ 33 ಪಂದ್ಯಗಳಲ್ಲಿ 31 ಇನ್ನಿಂಗ್ಸ್‌ ಆಡಿದ್ದು, 2 ಶತಕ ಮತ್ತು 7 ಅರ್ಧಶತಕ ಗಳಿಸಿದ್ದಾರೆ. ಅವರ ಬ್ಯಾಟ್‌ನಿಂದ 78 ಬೌಂಡರಿ ಹಾಗೂ 63 ಸಿಕ್ಸರ್‌ಗಳು ಆಕಾಶದೆತ್ತರಕ್ಕೆ ಹಾರಿವೆ.

ಹಿಟ್​​ಮ್ಯಾನ್​ ರೋಹಿತ್​ ಶರ್ಮಾ
ಹಿಟ್​​ಮ್ಯಾನ್​ ರೋಹಿತ್​ ಶರ್ಮಾ (ETV Bharat)

ರೋಹಿತ್ ಶರ್ಮಾ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 39 ಪಂದ್ಯಗಳ 36 ಇನ್ನಿಂಗ್ಸ್‌ಗಳಲ್ಲಿ 9 ಅರ್ಧಶತಕ ಗಳಿಸಿದ್ದು, ಒಟ್ಟು 963 ರನ್ ಬಾರಿಸಿದ್ದಾರೆ. ಹಿಟ್​ಮ್ಯಾನ್​ ಬ್ಯಾಟ್‌ನಿಂದ 91 ಬೌಂಡರಿ ಮತ್ತು 35 ಸಿಕ್ಸರ್‌ಗಳು ಸಿಡಿದಿವೆ. ಈ ವಿಶ್ವಕಪ್‌ನಲ್ಲಿ ರೋಹಿತ್‌ ತಮ್ಮ ದಾಖಲೆಯನ್ನು ಮತ್ತಷ್ಟು ಸುಧಾರಿಸಿಕೊಳ್ಳುವ ಅವಕಾಶವಿದೆ.

ಶ್ರೀಲಂಕಾದ ದಿಗ್ಗಜ ತಿಲಕರತ್ನೆ ದಿಲ್ಯಾನ್
ಶ್ರೀಲಂಕಾದ ದಿಗ್ಗಜ ತಿಲಕರತ್ನೆ ದಿಲ್ಯಾನ್ (ETV Bharat)

ತಿಲಕರತ್ನೆ ದಿಲ್ಯಾನ್: ಶ್ರೀಲಂಕಾದ ಮಾಜಿ ಸ್ಟಾರ್ ಬ್ಯಾಟ್ಸ್‌ಮನ್ ತಿಲಕರತ್ನೆ ದಿಲ್ಯಾನ್ 897 ರನ್​ಗಳೊಂದಿಗೆ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಅವರು 35 ಪಂದ್ಯಗಳ 34 ಇನ್ನಿಂಗ್ಸ್‌ಗಳಲ್ಲಿ 6 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಇದರಲ್ಲಿ 101 ಬೌಂಡರಿಗಳು ಮತ್ತು 20 ಸಿಕ್ಸರ್‌ಗಳನ್ನೂ ಸಿಡಿಸಿದ್ದಾರೆ.

ಇದನ್ನೂ ಓದಿ: ಭಾರತ ಕ್ರಿಕೆಟ್​ ತಂಡದ ಕೋಚ್​ ಹುದ್ದೆಗೆ ನರೇಂದ್ರ ಮೋದಿ, ಅಮಿತ್​ ಶಾ, ಸಚಿನ್​ರಿಂದ ಅರ್ಜಿ ಸಲ್ಲಿಕೆ! - team India Coach Job

ETV Bharat Logo

Copyright © 2024 Ushodaya Enterprises Pvt. Ltd., All Rights Reserved.