ETV Bharat / sports

ಐಪಿಎಲ್​ 2024: ಸನ್​ರೈಸರ್ಸ್​ ವಿರುದ್ಧ ಟಾಸ್​ ಗೆದ್ದ ಮುಂಬೈ ಬೌಲಿಂಗ್​ ಆಯ್ಕೆ, ರೋಹಿತ್​ ಶರ್ಮಾಗೆ 200ನೇ ಪಂದ್ಯ - IPL 2024 - IPL 2024

ಹೈದರಾಬಾದ್​ ಸನ್​ರೈಸರ್ಸ್​ ವಿರುದ್ಧ ಮುಂಬೈ ಇಂಡಿಯನ್ಸ್​ ಟಾಸ್​ ಗೆದ್ದ ಫೀಲ್ಡಿಂಗ್​ ಆಯ್ದುಕೊಂಡಿದೆ.

ಐಪಿಎಲ್​ 2024
ಐಪಿಎಲ್​ 2024
author img

By ETV Bharat Karnataka Team

Published : Mar 27, 2024, 7:42 PM IST

Updated : Mar 27, 2024, 7:56 PM IST

ಹೈದರಾಬಾದ್: ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡಿದೆ. ಇತ್ತಂಡಗಳು ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದು, ಗೆಲುವಿನ ಖಾತೆ ತೆರೆಯಲು ಹೋರಾಡಲಿವೆ.

ಇಲ್ಲಿನ ಉಪ್ಪಳದ ರಾಜೀವ್​ ಗಾಂಧಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಹೈದರಾಬಾದ್​ ತಂಡ ಎರಡು ಬದಲಾವಣೆ ಮಾಡಿದೆ. ಮಾರ್ಕೋ ಜನ್​ಸೆನ್​ ಬದಲಿಗೆ ಟ್ರೇವಿಸ್​ ಹೆಡ್​, ನಟರಾಜನ್​ ಬದಲಿಗೆ ಉನಾದ್ಕಟ್​​ರನ್ನು ಕಣಕ್ಕಿಳಿಸಿದೆ. ಮುಂಬೈನಲ್ಲಿ ಲ್ಯೂಕ್​ ಫರ್ಗ್ಯುಸನ್​ ಬದಲಿಗೆ ಕ್ವೆನ್​ ಮಪಾಕರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಮೊದಲ ಪಂದ್ಯದಲ್ಲಿ ಮುಂಬೈ ಗುಜರಾತ್​ ಟೈಟಾನ್ಸ್​ ವಿರುದ್ಧ ಸೋಲು ಕಂಡರೆ, ಸನ್​ರೈಸರ್ಸ್​ ತಂಡ ಕೋಲ್ಕತ್ತಾ ನೈಟ್​ ರೈಸರ್ಸ್​ ವಿರುದ್ಧ ಪರಾಜಯವಾಗಿತ್ತು.

ರೋಹಿತ್​ ಶರ್ಮಾಗೆ 200ನೇ ಪಂದ್ಯ: ಮುಂಬೈ ಇಂಡಿಯನ್ಸ್​ ತಂಡದಿಂದ ಈಚೆಗೆ ನಾಯಕತ್ವ ತ್ಯಜಿಸಿರುವ ಹಿಟ್​ಮ್ಯಾನ್​​ ರೋಹಿತ್ ಶರ್ಮಾ ಅವರಿಗೆ ಇದು ಐಪಿಎಲ್​ನಲ್ಲಿ ಮುಂಬೈ ಪರ 200ನೇ ಪಂದ್ಯವಾಗಿದೆ. ಪಂದ್ಯಕ್ಕೂ ಮುನ್ನ ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಅವರು ರೋಹಿತ್​ ಶರ್ಮಾಗೆ ವಿಶೇಷ ಸ್ಮರಣಿಕೆಯನ್ನು ನೀಡಿದರು. 200 ROHIT ಎಂದು ಬರೆದಿರುವ ತಂಡದ ವಿಶೇಷ ಜರ್ಸಿಯನ್ನು ರೋಹಿತ್​ಗೆ ಹಸ್ತಾಂತರಿಸಿದರು.

ಈ ವೇಳೆ ಮಾತನಾಡಿದ ಸಚಿನ್​, ಈ ಹಿಂದೆ ನಾನು ರೋಹಿತ್ ಶರ್ಮಾ ಅವರನ್ನು ಮುಂಬೈ ಇಂಡಿಯನ್ಸ್‌ ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ತಂಡದ ಒಡತಿ ನೀತು ಅಂಬಾನಿ ಅವರಿಗೆ ತಿಳಿಸಿದೆ. ತಂಡದೊಂದಿಗಿನ ಇಷ್ಟು ವರ್ಷಗಳಲ್ಲಿ ರೋಹಿತ್​ ಅದ್ಭುತ ಸಾಧನೆ ಮಾಡಿದ್ದಾರೆ ಎಂದು ಗುಣಗಾನ ಮಾಡಿದ್ದಾರೆ. ಇದರ ವಿಡಿಯೋವನ್ನು ಮುಂಬೈ ತಂಡ ತನ್ನ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದೆ. ರೋಹಿತ್​ ಶರ್ಮಾ 8 ಆವೃತ್ತಿಗಳಲ್ಲಿ ತಂಡದ ಕ್ಯಾಪ್ಟನ್​ ಆಗಿದ್ದು, ಅದರಲ್ಲಿ ಐದು ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ. 2011 ರಿಂದ ಅವರಯ ಎಂಐ ಪರ ಆಡುತ್ತಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್: ಟ್ರಾವಿಸ್ ಹೆಡ್, ಮಯಾಂಕ್ ಅಗರ್​ವಾಲ್, ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್ರಮ್​, ಹೆನ್ರಿಚ್ ಕ್ಲಾಸೆನ್, ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್(ನಾಯಕ), ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಂಡೆ, ಜಯದೇವ್ ಉನದ್ಕತ್.

ಮುಂಬೈ ಇಂಡಿಯನ್ಸ್: ಇಶಾನ್ ಕಿಶನ್, ರೋಹಿತ್ ಶರ್ಮಾ, ನಮನ್ ಧೀರ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ಜೆರಾಲ್ಡ್ ಕೋಟ್ಜಿ, ಶಮ್ಸ್ ಮುಲಾನಿ, ಪಿಯೂಷ್ ಚಾವ್ಲಾ, ಜಸ್ಪ್ರೀತ್ ಬುಮ್ರಾ, ಕ್ವೇನಾ ಮಫಕಾ.

ಇದನ್ನೂ ಓದಿ: IPL: ಗುಜರಾತ್ ವಿರುದ್ಧ ಚೆನ್ನೈ ಸೂಪರ್ ಆಟ; 63 ರನ್‌ಗಳ ಗೆಲುವು - Chennai Super Kings

Last Updated : Mar 27, 2024, 7:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.