ETV Bharat / sports

ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬಾಕ್ಸಿಂಗ್​ ಚಾಂಪಿಯನ್​ಶಿಪ್: 220ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿ - ಬಾಕ್ಸಿಂಗ್​ ಚಾಂಪಿಯನ್​ಶಿಪ್

ಬೆಂಗಳೂರಿನ ಎಚ್​ಎಸ್​ಆರ್​ ಬಡಾವಣೆಯ ಕ್ರೀಡಾಂಗಣದಲ್ಲಿ ಶನಿವಾರ ರಾಜ್ಯಮಟ್ಟದ ಬಾಕ್ಸಿಂಗ್​ ಚಾಂಪಿಯನ್​ಶಿಪ್​ ಸ್ಪರ್ಧೆ ಆರಂಭವಾಗಿದ್ದು ಇಂದೂ ನಡೆಯಲಿದೆ.

State level boxing championship
ರಾಜ್ಯಮಟ್ಟದ ಬಾಕ್ಸಿಂಗ್​ ಚಾಂಪಿಯನ್​ಶಿಪ್
author img

By ETV Bharat Karnataka Team

Published : Jan 28, 2024, 8:58 AM IST

Updated : Jan 28, 2024, 1:56 PM IST

ರಾಜ್ಯ ಮಟ್ಟದ ಬಾಕ್ಸಿಂಗ್​ ಚಾಂಪಿಯನ್​ಶಿಪ್

ಬೆಂಗಳೂರು: ನಗರದ ಎಚ್​ಎಸ್​ಆರ್​ ಬಡಾವಣೆಯ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಬಾಕ್ಸಿಂಗ್​ ಚಾಂಪಿಯನ್​ಶಿಪ್​ ಸ್ಪರ್ಧೆಯನ್ನು ಕರ್ನಾಟಕ ಅಮೆಚೂರ್​ ಅಸೋಸಿಯೇಷನ್​​ ವತಿಯಿಂದ ಆಯೋಜಿಸಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ 220ಕ್ಕೂ ಹೆಚ್ಚು 15 ವರ್ಷದ ಬಾಲಕರು, 60ಕ್ಕೂ ಹೆಚ್ಚು ಬಾಲಕಿಯರು ಭಾಗವಹಿಸಿದ್ದಾರೆ. ಒಟ್ಟು ಎರಡು ದಿನ ನಡೆಯುವ ಸ್ಪರ್ಧೆ ಇಂದೂ ಸಹ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಿಂದ ಮಕ್ಕಳು ಭಾಗವಹಿಸಿದ್ದಾರೆ. ಎದುರಾಳಿ ಬಾಕ್ಸರ್‌ಗಳ ಜೊತೆ ಯಾವುದೇ ಆತಂಕವಿಲ್ಲದೆ ಸ್ಫರ್ಧಿಸುತ್ತಿದ್ದಾರೆ. ಬಾಕ್ಸಿಂಗ್​ ಕ್ರೀಡೆಯ ಆಯೋಜನೆಯಿಂದ ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತವೆ. ಈ ಮೂಲಕ ಜಿಲ್ಲೆ, ರಾಜ್ಯ ಹಾಗು ರಾಷ್ಟ್ರೀಯ​ ಮಟ್ಟದಲ್ಲಿ ಸ್ಫರ್ಧಿಗಳಿಗೆ ಆಟವಾಡಲು ಅನುಕೂಲವಾಗುತ್ತದೆ. ಗ್ರಾಮೀಣ ಭಾಗದಲ್ಲೂ ಬಾಕ್ಸಿಂಗ್​ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಮಕ್ಕಳು ಕೇವಲ ವಿದ್ಯಾಭ್ಯಾಸ ಮಾತ್ರವಲ್ಲದೆ ದೈಹಿಕ, ಮಾನಸಿಕವಾಗಿ ಸದೃಢವಾಗುತ್ತಾರೆ. ಸರ್ಕಾರ ಸಹ ಪ್ರೋತ್ಸಾಹ ನೀಡಬೇಕೆಂದು ಅಮೆಚೂರ್​ ಬಾಕ್ಸಿಂಗ್​ ಅಸೋಸಿಯೇಷನ್ ಪರವಾಗಿ ಮಾಧ್ಯಮಗಳ ಮುಖಾಂತರ ಆಯೋಜಕರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕೋವಿಡ್ ಮುಗಿದರೂ ದಾಂಡೇಲಿಗೆ ಬರದ ರೈಲು: ಪುನರಾರಂಭಕ್ಕೆ ಒತ್ತಾಯ

Last Updated : Jan 28, 2024, 1:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.