ಹೈದರಾಬಾದ್/ಲಂಡನ್: ಭಾರತದ ವೀಸಾ ಮಂಜೂರಾತಿ ವಿಳಂಬವಾಗಿದ್ದ ಕಾರಣ ಅಬುಧಾಬಿಯಿಂದ ವಾಪಸ್ ಆಗಿದ್ದ ಇಂಗ್ಲೆಂಡ್ನ ಬಲಗೈ ಆಫ್ ಸ್ಪಿನ್ನರ್ ಶೋಯೆಬ್ ಬಶೀರ್ಗೆ ಕೊನೆಗೂ ಭಾರತ ವೀಸಾ ನೀಡಿದೆ. ಆದರೆ ಮೊದಲ ಟೆಸ್ಟ್ ಪಂದ್ಯವನ್ನು ಅವರು ತಪ್ಪಿಸಿಕೊಳ್ಳಲಿದ್ದಾರೆ.
-
Shoaib Bashir has now received his visa, and is due to travel to join up with the team in India this weekend.
— England Cricket (@englandcricket) January 24, 2024 " class="align-text-top noRightClick twitterSection" data="
We're glad the situation has now been resolved.#INDvENG | #EnglandCricket pic.twitter.com/vTHdChIOIi
">Shoaib Bashir has now received his visa, and is due to travel to join up with the team in India this weekend.
— England Cricket (@englandcricket) January 24, 2024
We're glad the situation has now been resolved.#INDvENG | #EnglandCricket pic.twitter.com/vTHdChIOIiShoaib Bashir has now received his visa, and is due to travel to join up with the team in India this weekend.
— England Cricket (@englandcricket) January 24, 2024
We're glad the situation has now been resolved.#INDvENG | #EnglandCricket pic.twitter.com/vTHdChIOIi
20 ವರ್ಷದ ಯುವ ಸ್ಪಿನ್ನರ್ ಶೋಯೆಬ್ ಬಶೀರ್ ಭಾರತ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ತಂಡಕ್ಕೆ ಆಯ್ಕೆಯಾಗಿದ್ದರು. ಭಾರತಕ್ಕೆ ಬರಲು ವೀಸಾಕ್ಕಾಗಿ ಕಾಯುತ್ತಿದ್ದ ಅವರಿಗೆ ವೀಸಾ ಮಂಜೂರಾತಿ ವಿಳಂಬವಾದ ಕಾರಣ, ದುಬೈನಿಂದ ಇಂಗ್ಲೆಂಡ್ಗೆ ಮರಳಿದ್ದರು.
ಇದೀಗ ವೀಸಾ ಸಿಕ್ಕಿರುವುದರಿಂದ ಬಶೀರ್ ಭಾರತ ಪ್ರವಾಸ ಕೈಗೊಳ್ಳಲಿದ್ದು, ಈ ವಾರಾಂತ್ಯದಲ್ಲಿ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಬುಧವಾರ ತಿಳಿಸಿದೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಕ್ರಿಕೆಟ್ ಮಂಡಳಿ, ಶೋಯೆಬ್ ಬಶೀರ್ ವೀಸಾ ಪಡೆದಿದ್ದು, ಈ ವಾರಾಂತ್ಯದಲ್ಲಿ ತಂಡದೊಂದಿಗೆ ಸೇರಲು ಪ್ರವಾಸ ಬೆಳೆಸಲಿದ್ದಾರೆ. ವೀಸಾ ಗೊಂದಲ ಪರಿಹಾರಗೊಂಡಿದ್ದು ಸಂತಷವಾಗಿದೆ ಎಂದು ತಿಳಿಸಿದೆ.
ವೀಸಾ ವಿಳಂಬಕ್ಕೆ ಕಾರಣ: ಭಾರತಕ್ಕೆ ತೆರಳಲು ಇಂಗ್ಲೆಂಡ್ ಆಟಗಾರ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಬಶೀರ್ ಅವರ ವೀಸಾ ಅರ್ಜಿಯಲ್ಲಿ ನ್ಯೂನ್ಯತೆಗಳು ಕಂಡು ಬಂದ ಕಾರಣ ಮಂಜೂರಾತಿ ವಿಳಂಬವಾಗಿತ್ತು. ವೀಸಾ ಮಂಜೂರಾತಿ ತಡವಾಗಿದ್ದ ಕಾರಣ ಭಾರತಕ್ಕೆ ಪ್ರಯಾಣ ಬೆಳೆಸಲು ಸಾಧ್ಯವಾಗಿರಲಿಲ್ಲ. ಬಶೀರ್ ಪಾಕಿಸ್ತಾನ ಮೂಲದವರು ಎಂಬ ಕಾರಣಕ್ಕಾಗಿ ವೀಸಾ ವಿಳಂಬವಾಗಿದೆ ಎಂಬ ಮಾತುಗಳೂ ಕೇಳಿಬಂದಿದ್ದವು. ಇದು ವಿವಾದಕ್ಕೂ ಕಾರಣವಾಗಿತ್ತು. ಪಾಕಿಸ್ತಾನದ ನಡುವಿನ ಬಿಕ್ಕಟ್ಟೇ ಬಶೀರ್ಗೆ ವೀಸಾ ಮಂಜೂರಾಗದಿರಲು ಕಾರಣ ಎಂದು ಕೆಲವು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಕೂಡ ಬೇಸರ ವ್ಯಕ್ತಪಡಿಸಿದ್ದರು. ಬಶೀರ್ಗೆ ವೀಸಾ ಸಿಗದೇ, ತಂಡದಿಂದ ಹೊರಗುಳಿದಿದ್ದಕ್ಕೆ ಯುವ ಆಟಗಾರನ ಕನಸು ಭಗ್ನಗೊಂಡಿದೆ. ಇದು ನನಗೆ ತುಂಬಾ ಬೇಸರ ತರಿಸಿದೆ ಎಂದು ಸ್ಟೋಕ್ಸ್ ಹೇಳಿದ್ದರು.
ಶೋಯೆಬ್ ಬಶೀರ್ ಇಂಗ್ಲೆಂಡ್‌ನಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ 18 ಪಂದ್ಯಗಳನ್ನು ಆಡಿದ್ದು, ಈ ಪಂದ್ಯಗಳಲ್ಲಿ ಒಟ್ಟು 17 ವಿಕೆಟ್‌ಗಳನ್ನು ಪಡೆದಿದ್ದಾರೆ. ಇಂಗ್ಲೆಂಡ್ ಲಯನ್ಸ್ ಆಯೋಜಿಸಿದ್ದ ತರಬೇತಿ ಶಿಬಿರದಲ್ಲೂ ಬಶೀರ್ ಟರ್ನಿಂಗ್ ಪಿಚ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಇದು ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಗಿಟ್ಟಿಸುವಂತೆ ಮಾಡಿತ್ತು. ಈ ಮೂಲಕ ಭಾರತದ ವಿರುದ್ಧದ ಟೆಸ್ಟ್ ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಬಶೀರ್ ಪದಾರ್ಪಣೆ ಮಾಡಲಿದ್ದಾರೆ.
ಇದನ್ನೂ ಓದಿ: ಚಿನ್ನದ ಪದಕ ವಿಜೇತ ಮಾನ್ಸಿಂಗ್ ತಮ್ಮ ಸಾಧನೆಯ ಬಗ್ಗೆ ಹೇಳಿದ್ದು ಹೀಗೆ