ETV Bharat / sports

ಬ್ಯಾಡ್ಮಿಂಟನ್​: ಇಂಡೋನೇಷ್ಯಾ ವಿರುದ್ಧ ಸಾತ್ವಿಕ್ - ಚಿರಾಗ್ ಜೋಡಿಗೆ ಗೆಲುವು - Paris Olympics 2024 - PARIS OLYMPICS 2024

ಭಾರತದ ಬ್ಯಾಡ್ಮಿಂಟನ್ ಜೋಡಿ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಇಂಡೋನೇಷ್ಯಾ ಜೋಡಿ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಜೋಡಿಗೆ ಗೆಲುವು
ಜೋಡಿಗೆ ಗೆಲುವು (AP)
author img

By ETV Bharat Sports Team

Published : Jul 30, 2024, 8:10 PM IST

ನವದೆಹಲಿ: ಭಾರತದ ಬ್ಯಾಡ್ಮಿಂಟನ್ ಜೋಡಿ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರ ಗೆಲುವಿನ ಓಟ ಮುಂದುವರಿಸಿದ್ದಾರೆ. ಮಂಗಳವಾರ ನಡೆದ ಪ್ಯಾರಿಸ್ ಒಲಿಂಪಿಕ್ಸ್​ನ ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ಈವೆಂಟ್‌ನಲ್ಲಿ ಇಂಡೋನೇಷ್ಯಾದ ಮುಹಮ್ಮದ್ ರಿಯಾಂಟೊ ಮತ್ತು ಫಜರ್ ಅಲ್ಫಿಯಾ ಜೋಡಿಯನ್ನು ನೇರ ಸೆಟ್​ಗಳಿಂದ ಸೋಲಿಸಿದರು.

ವಿಶ್ವದ ಐದನೇ ಶ್ರೇಯಾಂಕದ ಭಾರತೀಯ ಜೋಡಿ ಏಳನೇ ಶ್ರೇಯಾಂಕದ ಜೋಡಿಯನ್ನು 21-13, 21-13 ಸೆಟ್​ಗಳಿಂದ ಸೋಲಿಸಿತು. ಈ ಪಂದ್ಯ ಗೆಲ್ಲಲು ಸಾತ್ವಿಕ್ ಮತ್ತು ಚಿರಾಗ್ ಜೋಡಿ ಕೇವಲ 40 ನಿಮಿಷಗಳನ್ನು ತೆಗೆದುಕೊಂಡು ಕ್ವಾರ್ಟರ್ ಫೈನಲ್​ಗೆ ತಲುಪಿತು.

ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ಸ್​ ಸಾತ್ವಿಕ್ ಮತ್ತು ಚಿರಾಗ್ ಮೊದಲ ಸುತ್ತಿನಲ್ಲಿ 5-3 ಮುನ್ನಡೆಯೊಂದಿಗೆ ಉತ್ತಮ ಆರಂಭ ಮಾಡಿತು. ಆದರೆ ನಂತರ ಎರಡೂ ತಂಡಗಳ ಸ್ಕೋರ್‌ಗಳು 5-5 ಮತ್ತು 7-7 ರಲ್ಲಿ ಸಮಗೊಂಡವು. ಭಾರತದ ಜೋಡಿ 9-8 ಅಂಕಗಳೊಂದಿಗೆ ಸತತ ಮೂರು ಅಂಕಗಳೊಂದಿಗೆ 12-8 ಮುನ್ನಡೆ ಸಾಧಿಸಿತು. ಇಂಡೋನೇಷ್ಯಾದ ಜೋಡಿ ಎರಡನೇ ಸೆಟ್‌ನಲ್ಲಿ ಕ್ರಾಸ್ - ಕೋರ್ಟ್ ಡ್ರಾಪ್‌ಗಳು ಮತ್ತು ಶಕ್ತಿಯುತ ಫ್ಲಾಟ್ ಡ್ರೈವ್‌ಗಳನ್ನು ಹೊಡೆಯುವ ಮೂಲಕ ಪ್ರಾಬಲ್ಯ ಸಾಧಿಸಲು ಯತ್ನಿಸಿದರಾದರೂ ಸಾತ್ವಿಕ್​ ಮತ್ತು ಚಿರಾಗ್​ ಪ್ರತಿ ದಾಳಿ ನಡೆಸಿದರು. ಇದರೊಂದಿಗೆ ಮೊದಲ ಸೆಟ್​ಅನ್ನು 21-13 ರಿಂದ ಗೆದ್ದುಕೊಂಡರು. ಈ ಸೆಟ್ ಸೋತರೂ ಇಂಡೋನೇಷ್ಯಾ ಜೋಡಿ ಪಂದ್ಯದ ಉದ್ದಕ್ಕೂ ಭಾರತದ ಜೋಡಿಗೆ ಕಠಿಣ ಸವಾಲು ನೀಡಿತು.

ಬಳಿಕ ಎರಡನೇ ಸೆಟ್​ನಲ್ಲೂ ತಮ್ಮ ಪ್ರದರ್ಶನ ಮುಂದುವರೆಸಿದ ಭಾರತ ಇದರಲ್ಲೂ 21-13 ಅಂತರದಿಂದ ಪಂದ್ಯ ಗೆದ್ದುಕೊಂಡಿತು. ಈ ಗೆಲುವಿನೊಂದಿಗೆ ಭಾರತದ ಜೋಡಿ ತಮ್ಮ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ. ಕ್ವಾರ್ಟರ್ ಫೈನಲ್‌ನಲ್ಲಿ ಯಾರನ್ನು ಎದುರಿಸಲಿದೆ ಎಂಬು ಮುಂದಿನ ಪಂದ್ಯಗಳ ಮೂಲಕ ನಿರ್ಧಾರವಾಗಲಿದೆ.

ಇದನ್ನೂ ಓದಿ: ಹರ್ಮನ್​ಪ್ರೀತ್​ ಡಬಲ್​ ಗೋಲು: ಹಾಕಿಯಲ್ಲಿ ಭಾರತಕ್ಕೆ ಮತ್ತೊಂದು ಗೆಲುವು: ಕ್ವಾರ್ಟರ್​ ಪೈನಲ್​ಗೆ ಮತ್ತಷ್ಟು ಸನಿಹ - Paris Olympics 2024

ETV Bharat Logo

Copyright © 2025 Ushodaya Enterprises Pvt. Ltd., All Rights Reserved.