ETV Bharat / sports

ಸ್ತ್ರೀ ವಿರೋಧಿ ಹೇಳಿಕೆ ನೀಡಿದ ಕಾಂಗ್ರೆಸ್​ ಶಾಸಕ ಶಾಮನೂರುಗೆ ಸೈನಾ ನೆಹ್ವಾಲ್​ ರಿವರ್ಸ್​ ಸ್ವೀಪ್​ - anti women remark

ಮಹಿಳಾ ವಿರೋಧಿ ಹೇಳಿಕೆ ನೀಡಿದ ಕಾಂಗ್ರೆಸ್​ ನಾಯಕ ಶಾಮನೂರು ಶಿವಶಂಕರಪ್ಪ ಅವರನ್ನು ಬ್ಯಾಡ್ಮಿಂಟನ್​ ಆಟಗಾರ್ತಿ ಸೈನಾ ನೆಹ್ವಾಲ್​ ಅವರು ಟೀಕಿಸಿದ್ದಾರೆ.

ಕಾಂಗ್ರೆಸ್​ ಶಾಸಕ ಶಾಮನೂರುಗೆ ಸೈನಾ ನೆಹ್ವಾಲ್​ ರಿವರ್ಸ್​ ಸ್ವೀಪ್​

author img

By ETV Bharat Karnataka Team

Published : Mar 30, 2024, 6:50 PM IST

ಹೈದರಾಬಾದ್​ : ಕಾಂಗ್ರೆಸ್​ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನೀಡಿರುವ ಮಹಿಳಾ ವಿರೋಧಿ ಹೇಳಿಕೆ ರಾಷ್ಟ್ರಮಟ್ಟದಲ್ಲಿ ಟೀಕೆಗೆ ಗುರಿಯಾಗಿದೆ. ಭಾರತದ ಖ್ಯಾತ ಬ್ಯಾಡ್ಮಿಂಟನ್​ ಆಟಗಾರ್ತಿ ಸೈನಾ ನೆಹ್ವಾಲ್​ ಕಾಂಗ್ರೆಸ್​ ನಾಯಕ ಹೇಳಿಕೆ ಖಂಡಿಸಿದ್ದು, ನಾನು ಹೆಣ್ಣು, ಹೋರಾಟ ಮಾಡಬಲ್ಲೆ (ಲಡ್ಕಿ ಹು ಲಡ್​ ಸಕ್ತಿ ಹು) ಎನ್ನುವ ಪಕ್ಷದಿಂದ ಇಂಥದ್ದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದಿದ್ದಾರೆ.

ತಮ್ಮ ಎಕ್ಸ್​ ಖಾತೆಯಲ್ಲಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಒಲಿಂಪಿಕ್ಸ್​ ಪದಕ ವಿಜೇತೆ, ಕರ್ನಾಟಕದ ಕಾಂಗ್ರೆಸ್​ನ ನಾಯಕ ಶಾಮನೂರು ಶಿವಶಂಕರಪ್ಪ ಅವರು ಮಹಿಳೆಯರು ಅಡುಗೆ ಮನೆಗೆ ಸೀಮಿತವಾಗಿರಬೇಕು ಎಂದು ಹೇಳಿಕೆ ನೀಡಿದ್ದಾರೆ. ದಾವಣಗೆರೆಯ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರ ಕುರಿತಾದ ಈ ಹೇಳಿಕೆಯು ಅಚ್ಚರಿ ಮೂಡಿಸಿದೆ. ಈ ಹಿಂದೆ ಇದೇ ಪಕ್ಷ "ನಾನು ಹೆಣ್ಣಾದರೂ, ಹೋರಾಟ ಮಾಡಬಲ್ಲೆ" ಎನ್ನುವ ಘೋಷವಾಕ್ಯ ಮೊಳಗಿಸಿತ್ತು. ಅಂತಹ ಪಕ್ಷದ ನಾಯಕರು ಸ್ತ್ರೀವಿರೋಧಿ ವ್ಯಾಖ್ಯಾನ ನೀಡಿರುವುದು ಖಂಡನೀಯ ಎಂದಿದ್ದಾರೆ.

ದೇಶದ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಮಹಿಳೆಯರ ವಿರುದ್ಧ ಇಂತಹ ದ್ವೇಷಪೂರಿತ ಹೇಳಿಕೆಗಳು ಆತಂಕಕಾರಿಯಾಗಿವೆ. ನಾನು ಕ್ರೀಡಾ ಕ್ಷೇತ್ರದಲ್ಲಿ ಭಾರತಕ್ಕೆ ಪದಕಗಳನ್ನು ಗೆದ್ದಾಗ, ಕಾಂಗ್ರೆಸ್ ಪಕ್ಷವು ನನ್ನಿಂದ ಏನು ಬಯಸಿತ್ತು. ನಾನು ಇನ್ನೂ ಏನು ಮಾಡಬೇಕಿತ್ತು?. ಎಲ್ಲ ಹೆಣ್ಣುಮಕ್ಕಳು, ಹೆಂಗಸರು ಯಾವುದಾದರೂ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಬೇಕು ಎಂದು ಕನಸು ಕಾಣುತ್ತಿರುವಾಗ ಈ ರೀತಿಯ ಹೇಳಿಕೆಗಳು ಬರಬಾರದು ಎಂದು 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ 34 ವರ್ಷದ ನೆಹ್ವಾಲ್ ಟೀಕಿಸಿದ್ದಾರೆ.

ಒಂದು ಕಡೆ ಮಹಿಳಾ ಶಕ್ತಿಯನ್ನು ಬಣ್ಣಿಸುತ್ತಿದ್ದರೆ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲಾಗಿದೆ. ಮಹಿಳಾ ಶಕ್ತಿ ಒಂದೆಡೆಯಾದರೆ, ಮಹಿಳಾ ವಿರೋಧಿ ಕಾಮೆಂಟ್​ಗಳು ಬರುತ್ತಿರುವುದು ಸರಿಯಲ್ಲ ಎಂದು ನೆಹ್ವಾಲ್​ ಹೇಳಿದ್ದಾರೆ.

ಕಾಂಗ್ರೆಸ್​ ಶಾಸಕ ಹೇಳಿದ್ದೇನು?: ದಾವಣಗೆರೆ ನಗರದ ಬಂಟರ ಭವನದಲ್ಲಿ ಈಚೆಗೆ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ್ದ ಶಾಮನೂರು ಶಿವಶಂಕರಪ್ಪ ಅವರು, ದಾವಣಗೆರೆ ಬಿಜೆಪಿ ಮಹಿಳಾ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್​ ಅವರು ನಮ್ಮ ಎದುರಾಳಿ, ಅವರು ಮೊದಲು ದಾವಣಗೆರೆ ಸಮಸ್ಯೆ ಬಗ್ಗೆ ವಿಸ್ತಾರವಾಗಿ ತಿಳಿಯಲಿ, ಅವರಿಗೆ ಸರಿಯಾಗಿ ಮಾತನಾಡಲೂ ಬರುವುದಿಲ್ಲ. ಅವರು ಅಡುಗೆ ಮಾಡಲು ಮಾತ್ರ ಲಾಯಕ್ಕು ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಗಾಯತ್ರಿ ಸಿದ್ದೇಶ್ವರ್​ ವಿರುದ್ಧದ ಹೇಳಿಕೆಗೆ ಶಾಮನೂರು ಕ್ಷಮೆ ಯಾಚಿಸಬೇಕು : ಮಾಳವಿಕಾ ಅವಿನಾಶ್ - Shamanur Shivashankarappa

ETV Bharat Logo

Copyright © 2024 Ushodaya Enterprises Pvt. Ltd., All Rights Reserved.