ETV Bharat / sports

51ನೇ ವಸಂತಕ್ಕೆ ಕಾಲಿಟ್ಟ 'ಕ್ರಿಕೆಟ್​ ದೇವರು' ಸಚಿನ್ ತೆಂಡೂಲ್ಕರ್ - Sachin Tendulkar Birthday - SACHIN TENDULKAR BIRTHDAY

ಮಾಸ್ಟರ್ ಬ್ಲಾಸ್ಟರ್‌ ಸಚಿನ್​ ತೆಂಡೂಲ್ಕರ್ ತಮ್ಮ ಜೀವನದ ಅರ್ಧಶತಕ ಪೂರೈಸಿ, ಇಂದು 51ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

Etv Bharat
Etv Bharat
author img

By ETV Bharat Karnataka Team

Published : Apr 24, 2024, 5:32 PM IST

Updated : Apr 24, 2024, 6:07 PM IST

ಹೈದರಾಬಾದ್/ಮುಂಬೈ: ವಿಶ್ವ ಕ್ರಿಕೆಟ್​ ದೇವರೆಂದೇ ಕರೆಯಲ್ಪಡುವ ಭಾರತದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಜಗತ್ತಿನ ಅಗ್ರಗಣ್ಯ ಬ್ಯಾಟರ್​ಗಳಲ್ಲಿ ಒಬ್ಬರಾದ ಈ ಲಿಟ್ಲ್‌ ಮಾಸ್ಟರ್​ 51ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಸೆಂಟ್ರಲ್ ಮುಂಬೈನ ದಾದರ್‌ನ ಶಿವಾಜಿ ಪಾರ್ಕ್‌ನಲ್ಲಿ ಪಾಠ ಕಲಿಯುವುದರಿಂದ ಹಿಡಿದು, 2011ರಲ್ಲಿ ತವರು ನೆಲ ವಾಂಖೆಡೆ ಸ್ಟೇಡಿಯಂನಲ್ಲಿ ಐಸಿಸಿ ಏಕದಿನ ವಿಶ್ವಕಪ್ ಗೆಲ್ಲುವವರೆಗೆ ಸಚಿನ್​ ಕ್ರಿಕೆಟ್​ ಪ್ರಯಾಣ ಸ್ಫೂರ್ತಿದಾಯಕವಾಗಿದೆ. ತಮ್ಮ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ಹೊಂದಿರುವ ಮತ್ತು ಕ್ರಿಕೆಟ್ ದೇವರೆಂದೇ ಕರೆಯಲ್ಪಡುವ ತೆಂಡೂಲ್ಕರ್ ತಮ್ಮ ಜೀವನದ ಅರ್ಧಶತಕ ಪೂರೈಸಿದ್ದಾರೆ.

ಕಪಿಲ್ ದೇವ್ ನೇತೃತ್ವದ ಭಾರತೀಯ ಕ್ರಿಕೆಟ್ ತಂಡವು 1983ರ ವಿಶ್ವಕಪ್ ಗೆದ್ದ ಕ್ಷಣವು ತಮ್ಮನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಿತು ಎಂದು ಸಚಿನ್​ ಹಲವಾರು ಬಾರಿ ಸಾರ್ವಜನಿಕವಾಗಿ ಹೇಳಿದ್ದರು. 83ರಲ್ಲಿ ಭಾರತ ವಿಶ್ವಕಪ್ ಜಯಿಸಿದ ನಂತರ ಸಚಿನ್, ಮುಂಬೈ ಉಪನಗರದ ಸಾಹಿತ್ಯ ಸಹವಾಸ್‌ ವಸತಿ ಪ್ರದೇಶದಿಂದ ದಾದರ್‌ನಲ್ಲಿರುವ ತನ್ನ ಚಿಕ್ಕಪ್ಪನ ಮನೆಗೆ ಸ್ಥಳಾಂತರಗೊಂಡರು. ಶಾರದಾ ಆಶ್ರಮ ಶಾಲೆಯಲ್ಲಿ ಪ್ರವೇಶ ಪಡೆದು, ನಂತರ ತಮ್ಮ ಗುರು ರಮಾಕಾಂತ್ ಅಚ್ರೇಕರ್ ಅವರಿಂದ ತರಬೇತಿ ಪಡೆಯಲು ತುಂಬಾ ಪ್ರಯಾಸಪಟ್ಟಿದ್ದರು.

1989ರಲ್ಲಿ ತಮ್ಮ 16 ವರ್ಷ ವಯಸ್ಸಿನಲ್ಲೇ ಪಾಕಿಸ್ತಾನ ವಿರುದ್ಧ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ನಂತರ ತೆಂಡೂಲ್ಕರ್ ಮತ್ತೆ ಹಿಂತಿರುಗಿ ನೋಡಲಿಲ್ಲ. ಶಾರ್ಜಾದಲ್ಲಿ ಕೋಕಾಕೋಲಾ ಕಪ್ ತ್ರಿಕೋನ ಸರಣಿ ಗೆದ್ದ ಭಾರತ ತಂಡವನ್ನು ಏಕಾಂಗಿಯಾಗಿ ಮುನ್ನಡೆಸಿದ್ದು ಸಚಿನ್ ಅವರ​ 20 ವರ್ಷಗಳ ವೃತ್ತಿಜೀವನದ ಅತ್ಯಂತ ಸ್ಮರಣೀಯ ಕ್ಷಣಗಳಲ್ಲಿ ಒಂದು.

1990ರ ದಶಕದಲ್ಲಿ ಭಾರತೀಯ ಕ್ರಿಕೆಟ್ ಎಂದರೆ ಅದು ಸಚಿನ್ ತೆಂಡೂಲ್ಕರ್‌ ಎಂಬಷ್ಟು ಸಮಾನಾರ್ಥಕವಾಗಿತ್ತು. ಇಡೀ ದೇಶ ಈ ಸೊಗಸಾದ ಆಟಗಾರ, ಬಲಗೈ ಬ್ಯಾಟರ್‌ನ ಮೇಲೆ ಭರವಸೆ ಹೊಂದಿತ್ತು. 1999ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ ಸಮಯದಲ್ಲಿ ತಮ್ಮ ತಂದೆ ರಮೇಶ್ ತೆಂಡೂಲ್ಕರ್ ನಿಧನದ ನಂತರ ತಂಡಕ್ಕೆ ಮರಳಿದ ಸಚಿನ್, ಶತಕ ಬಾರಿಸಿ ಅದನ್ನು ತಮ್ಮ ತಂದೆಗೆ ಅರ್ಪಿಸಿದ್ದರು. 2003ರ ವಿಶ್ವಕಪ್‌ನಲ್ಲಿ ತೆಂಡೂಲ್ಕರ್ ಮ್ಯಾನ್​ ಆಫ್​ ದಿ ಸಿರೀಸ್​ ಪ್ರಶಸ್ತಿಗೆ ಭಾಜನರಾಗಿದ್ದರು. ಈ ಎರಡೂ ವಿಶ್ವಕಪ್​​ಗಳು ಸಚಿನ್ ಬ್ಯಾಟಿಂಗ್ ಪ್ರದರ್ಶನದಿಂದ ನೆನಪಿನಲ್ಲಿ ಉಳಿಯುವಂತವು. ಸಚಿನ್ ವೃತ್ತಿಜೀವನದ ಮತ್ತೊಂದು ಮಹತ್ವದ ತಿರುವು 2004ರ ಸಿಡ್ನಿ ಟೆಸ್ಟ್. ಇದರಲ್ಲಿ ಸ್ಮರಣೀಯ ದ್ವಿಶತಕ ಬಾರಿಸಿ ತಮ್ಮ ಟೀಕಾಕಾರರ ಬಾಯಿ ಮುಚ್ಚಿಸಿದ್ದರು.

2013ರಲ್ಲಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸಚಿನ್ ಅವರ ಕೊನೆಯ ಮತ್ತು 200ನೇ ಟೆಸ್ಟ್​ ನೋಡಲು ಸ್ಟೇಡಿಯಂ ಭರ್ತಿಯಾಗಿತ್ತು. ಸಚಿನ್​ ಆಟ ನೋಡಲೆಂದೇ ಬಂದಿದ್ದ ಅಭಿಮಾನಿಗಳಿಂದ ಇಡೀ ಮೈದಾನ ತುಂಬಿತ್ತು. ವಿಶೇಷವೆಂದರೆ, ತೆಂಡೂಲ್ಕರ್ ಅವರ ತಾಯಿ ರಜನಿ ಮಗನ ಆಟ ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದಿದ್ದು ಕೂಡ ಅದೇ ಮೊದಲಾಗಿತ್ತು.

ಸಚಿನ್​ ತಮ್ಮ ಕ್ರಿಕೆಟ್​ ವೃತ್ತಿ ಜೀವನದಲ್ಲಿ ಒಟ್ಟಾರೆ 664 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ, 34,357 ರನ್​ಗಳ ಶಿಖರವನ್ನು ಪೇರಿಸಿದ್ದಾರೆ. 201 ವಿಕೆಟ್​ಗಳನ್ನು ಕಿತ್ತು ಬೌಲಿಂಗ್​ನಲ್ಲೂ ತಮ್ಮ ಕೌಶಲ್ಯ ತೋರಿಸಿದ್ದಾರೆ. 2021ರ ವಿಶ್ವಕಪ್​ ವಿಜೇತ ತಂಡದ ಸದಸ್ಯ, ವಿಶ್ವ ಕ್ರಿಕೆಟ್​ನಲ್ಲಿ ಶತಕಗಳ ಶತಕ ಬಾರಿಸಿದ ಏಕೈಕ ಸರದಾರ ಸಚಿನ್​ ಅವರಿಗೆ ಹ್ಯಾಪಿ ಬರ್ತ್​ಡೇ.!

ಇದನ್ನೂ ಓದಿ: ಫಿಡೆ ಕ್ಯಾಂಡಿಡೇಟ್ಸ್​ ಚೆಸ್​ ಟೂರ್ನಿ ಗೆದ್ದು ಚದುರಂಗದಾಟದಲ್ಲಿ ಚರಿತ್ರೆ ಸೃಷ್ಟಿಸಿದ 17ರ ಗುಕೇಶ್

Last Updated : Apr 24, 2024, 6:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.