ETV Bharat / sports

2 ದಿನದಲ್ಲಿ 32 ಮಿಲಿಯನ್​ ಚಂದಾದಾರರು! ರೊನಾಲ್ಡೊ ಯೂಟ್ಯೂಬ್​ ಚಾನೆಲ್​ ದಾಖಲೆ - Ronaldo YouTube Channel

ಕ್ರಿಸ್ಟಿಯಾನೋ ರೊನಾಲ್ಡೊ ಹೊಸ ಯೂಟ್ಯೂಬ್​ ಚಾನೆಲ್​ ಆರಂಭಿಸಿದ ಎರಡೇ ದಿನದಲ್ಲಿ 32 ಮಿಲಿಯನ್​ ಚಂದಾದಾರನ್ನು ಪಡೆದು ದಾಖಲೆ ನಿರ್ಮಿಸಿದ್ದಾರೆ.

ಕ್ರಿಸ್ಟಿಯಾನೋ ರೊನಾಲ್ಡೊ
ರೊನಾಲ್ಡೊ ಯೂಟ್ಯೂಬ್​ ಚಾನೆಲ್​ ದಾಖಲೆ (ETV Bharat)
author img

By ETV Bharat Sports Team

Published : Aug 23, 2024, 8:24 PM IST

ಹೈದರಾಬಾದ್​: ಕ್ರಿಸ್ಟಿಯಾನೊ ರೊನಾಲ್ಡೊ ದಾಖಲೆಗಳ ಹಿಂದೆ ಓಡುವುದಿಲ್ಲ, ಬದಲಿಗೆ ಅವರ ಹಿಂದೆಯೇ ದಾಖಲೆಗಳು ಬರುತ್ತವೆ ಎಂಬ ಅಭಿಮಾನಿಗಳ ಮಾತು ಅಕ್ಷರಶಃ ನಿಜವಾಗಿದೆ. ಮೈದಾನದಲ್ಲಿ ದಾಖಲೆಗಳನ್ನು ನಿರ್ಮಿಸಿರುವ ಖ್ಯಾತ ಫುಟ್ಬಾಲರ್​ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಅಂದರೇ ಆಗಸ್ಟ್​ 21ರಂದು ಪೋರ್ಚುಗೀಸ್ ಸ್ಟ್ರೈಕರ್ ರೊನಾಲ್ಡೊ 'ಯುಆರ್ ಕ್ರಿಸ್ಟಿಯಾನೋ' ಹೆಸರಿನ ಯೂಟ್ಯೂಬ್​ ಚಾನೆಲ್​ ಅನಾವರಣಗೊಳಿಸಿದ್ದರು. ಚಾನೆಲ್​ ಬಿಡುಗಡೆಗೊಂಡ 90 ನಿಮಿಷಗಳಲ್ಲೇ 1 ಮಿಲಿಯನ್​ ಚಂದಾದಾರರನ್ನು ಪಡೆದಿತ್ತು. ಅತ್ಯಂತ ವೇಗವಾಗಿ 10 ಲಕ್ಷ ಪೂರೈಸಿದ ಯೂಟ್ಯೂಬ್ ಚಾನೆಲ್ ಎಂಬ ದಾಖಲೆಯನ್ನೂ ಬರೆಯಿತು. ಆದರೆ ಅವರ ಈ ದಾಖಲೆಗಳು ಇಲ್ಲಿಗೆ ಮಗಿದಿಲ್ಲ. ದಿನ ಕಳೆದಂತೆ ಹೊಸ ದಾಖಲೆಗಳು ಸೃಷ್ಠಿಯಾಗುತ್ತಿವೆ. ಇದೀಗ ಎರಡೇ ದಿನಗಳಲ್ಲಿ ಅವರ ಚಾನೆಲ್​ 30 ಮಿಲಿಯನ್‌ಗಿಂತಲೂ ಹೆಚ್ಚಿನ ಚಂದಾದಾರರನ್ನು ಪಡೆದು ಮುನ್ನುಗ್ಗುತ್ತಿದೆ.

ರೊನಾಲ್ಡೊ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಇದುವರೆಗೆ ಕೇವಲ 19 ವೀಡಿಯೊಗಳನ್ನು ಅಪ್‌ಲೋಡ್ ಮಾಡಿದ್ದಾರೆ ಮತ್ತು ಪ್ರತಿ ವೀಡಿಯೊ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ರೊನಾಲ್ಡೊ ಮತ್ತು ಅವರ ಪತ್ನಿ ಜಾರ್ಜಿಯಾ ತಮ್ಮ ಮತ್ತು ಅವರ ಸಂಬಂಧದ ಬಗ್ಗೆ ಮಾತನಾಡುವ ವೀಡಿಯೊ 10 ಮಿಲಿಯನ್​ಗೂ ಹೆಚ್ಚಿನ ವೀಕ್ಷಣೆ ಪಡೆದಿದೆ.

ಚಾನೆಲ್ ಆರಂಭಿಸಿದ 90 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ 1 ಮಿಲಿಯನ್ ಫಾಲೋವರ್ಸ್ ಪಡೆದ ಕಾರಣ ಅವರಿಗೆ ಯೂಟ್ಯೂಬ್​ ಗೋಲ್ಡನ್ ಬಟನ್ ಅನ್ನು ಸಹ ನೀಡಲಾಗಿದೆ. ಇದೀಗ ಅವರು ಡೈಮಂಡ್ ಬಟನ್‌ಗೂ ಅರ್ಹರಾಗಿದ್ದಾರೆ. ಇದನ್ನು ಸಾಧಿಸಲು ಹಲವಾರು ಯೂಟ್ಯೂಬರ್​ಗಳ ವರ್ಷಾನುಗಟ್ಟಲೆ ಶ್ರಮವಹಿಸುತ್ತಿದ್ದರೆ 39 ವರ್ಷದ ರೊನಾಲ್ಡೊ ಕೇವಲ 10 ಗಂಟೆಗಳಲ್ಲಿ ಇದನ್ನು ಸಾಧಿಸಿದ್ದಾರೆ.

ರೊನಾಲ್ಡೊ ಅವರ ಯೂಟ್ಯೂಬ್ ಚಾನೆಲ್‌ಗಿಂತ ಕಡಿಮೆ ಸಮಯದಲ್ಲಿ 10 ಮಿಲಿಯನ್ ಚಂದಾದಾರರನ್ನು ಪಡೆದ ವ್ಯಕ್ತಿ ಮಿಸ್ಟರ್ ಬೀಸ್ಟ್ ಆಗಿದ್ದಾರೆ. ಪ್ರಸ್ತುತ ಮಿಸ್ಟರ್ ಬೀಸ್ಟ್ ಯೂಟ್ಯೂಬ್‌ನಲ್ಲಿ 311 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ 1 ಬಿಲಿಯನ್ ಅನುಯಾಯಿಗಳು: ಕ್ರಿಸ್ಟಿಯಾನೊ ರೊನಾಲ್ಡೊ ಯೂಟ್ಯೂಬ್‌ ಮಾತ್ರವಲ್ಲದೇ ಇತರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲು ಹೆಚ್ಚಿನ ಅನುಯಾಯಿಗಳನ್ನು ಹೊಂದಿದ್ದಾರೆ. ಎಕ್ಸ್​ ಖಾತೆಯಲ್ಲಿ 112.6 ಮಿಲಿಯನ್, ಫೇಸ್‌ಬುಕ್‌ನಲ್ಲಿ 170 ಮಿಲಿಯನ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 636 ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಇದರೊಂದಿಗೆ, ಸಾಮಾಜಿಕ ಮಾಧ್ಯಮದಲ್ಲಿ ರೊನಾಲ್ಡೊ ಅವರ ಒಟ್ಟು ಅನುಯಾಯಿಗಳ ಸಂಖ್ಯೆ 948 ಮಿಲಿಯನ್‌ಗೆ ಏರಿದ್ದುಒಟ್ಟಾರೆ 1 ಬಿಲಿಯನ್​ಗೆ ತಲುಪಲಿದೆ.

ಇಷ್ಟೇ ಅಲ್ಲದೇ ರೊನಾಲ್ಡೊ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳಲ್ಲಿ ಒಬ್ಬರು. ಅವರು 1 ಶತಕೋಟಿ ಡಾಲರ್‌ಗಿಂತ ಹೆಚ್ಚು ಗಳಿಸಿದ ಮೊದಲ ಫುಟ್‌ಬಾಲ್ ಆಟಗಾರರಾಗಿದ್ದಾರೆ. ಅಮೆರಿಕದ ನಿಯತಕಾಲಿಕೆ ಫೋರ್ಬ್ಸ್ ಪ್ರಕಾರ, ರೊನಾಲ್ಡೊ ಅವರ ಸಂಪತ್ತು $260 ಮಿಲಿಯನ್‌ಗಿಂತಲೂ ಹೆಚ್ಚಾಗಿದೆ. ರೊನಾಲ್ಡೊ ಸೌದಿ ಅರೇಬಿಯಾದ ಅಲ್-ನಾಸರ್ ಫುಟ್‌ಬಾಲ್ ಕ್ಲಬ್‌ನಿಂದ ವಾರ್ಷಿಕವಾಗಿ $200 ಮಿಲಿಯನ್ ಗಳಿಸುತ್ತಾರೆ, ಆದರೆ ಅವರ ಮೈದಾನದ ಹೊರಗಿನ ಆದಾಯವು $60 ಮಿಲಿಯನ್ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ನಿವೃತ್ತಿ ಘೋಷಣೆ ಪೋಸ್ಟರ್ ವೈರಲ್: ಮೌನ ಮುರಿದ ಕೆ ಎಲ್​ ರಾಹುಲ್​ - KL Rahul Retirement

ETV Bharat Logo

Copyright © 2024 Ushodaya Enterprises Pvt. Ltd., All Rights Reserved.