ETV Bharat / sports

ಆ ದಿನ ಧೋನಿ ಮಾತುಗಳನ್ನು ಕಡೆಗಣಿಸಿ ಮೊದಲ ದ್ವಿಶತಕ ಸಿಡಿಸಿದ್ದ ಹಿಟ್​ಮ್ಯಾನ್: ಅಷ್ಟಕ್ಕೂ ಅವತ್ತು ಧೋನಿ ಹೇಳಿದ್ದೇನು? - ROHIT SHARMA IGNORED DHONIS ADVICE

ಆಸ್ಟ್ರೇಲಿಯಾ ವಿರುದ್ಧ 2013ರಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ ರೋಹಿತ್​ ಶರ್ಮಾ ಮೊದಲ ಬಾರಿಗೆ ದ್ವಿಶತಕ ಸಿಡಿಸಿದ್ದರು. ಆದರೆ, ಈ ಪಂದ್ಯದಲ್ಲಿ ಹಿಟ್​ಮ್ಯಾನ್​ ಧೋನಿ ಸಲಹೆ ತಿರಸ್ಕರಿಸಿದ್ದರು ಎಂದು ಹೇಳಿದ್ದಾರೆ.

ಎಮ್​ ಎಸ್​ ಧೋನಿ ಮತ್ತು ರೋಹಿತ್​ ಶರ್ಮಾ
ಎಮ್​ ಎಸ್​ ಧೋನಿ ಮತ್ತು ರೋಹಿತ್​ ಶರ್ಮಾ (AP)
author img

By ETV Bharat Sports Team

Published : Oct 10, 2024, 2:20 PM IST

Rohit Sharma Ignored Dhoni Advice: ​ಟೀಮ್​ ಇಂಡಿಯಾದ ನಾಯಕ ಮತ್ತು ಆರಂಭಿಕ ಬ್ಯಾಟರ್​ ರೋಹಿತ್​ ಶರ್ಮಾ ಏಕದಿನ ಸ್ವರೂಪದಲ್ಲಿ ಒಂದಕ್ಕಿಂತ ಹೆಚ್ಚು ದ್ವಿಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟರ್​ ಎಂಬ ದಾಖಲೆಯನ್ನು ಬರೆದಿದ್ದಾರೆ. ಹಿಟ್​ಮ್ಯಾನ್​ ಮೊದಲ ದ್ವಿಶತಕ ಆಸ್ಟ್ರೇಲಿಯಾ ವಿರುದ್ಧ, 2 ಮತ್ತು 3ನೇ ದ್ವಿಶತಕವನ್ನು ಶ್ರೀಲಂಕಾ ವಿರುದ್ಧ ಸಿಡಿಸಿದ್ದರು.

ರೋಹಿತ್ ತಮ್ಮ ಮೊದಲ ದ್ವಿಶತಕದ ಬಗ್ಗೆ ಆಸಕ್ತಿದಾಯಕ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ರವಿಚಂದ್ರನ್ ಅಶ್ವಿನ್ ಅವರೊಂದಿಗಿನ ಇನ್‌ಸ್ಟಾಗ್ರಾಮ್ ಲೈವ್ ಸೆಷನ್‌ ವೇಳೆ, ನಾಯಕ ಎಂಎಸ್ ಧೋನಿ ಅವರ ಸಲಹೆಯನ್ನು ನಿರ್ಲಕ್ಷಿಸಿದ್ದೆ ಎಂದು ರೋಹಿತ್ ಹೇಳಿಕೊಂಡಿದ್ದಾರೆ.

ಧೋನಿ ಕೊಟ್ಟ ಸಲಹೆ ಏನು?: ನವೆಂಬರ್ 2013ರಲ್ಲಿ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಶರ್ಮಾ ತಮ್ಮ ಮೊದಲ ದ್ವಿಶತಕ ಗಳಿಸಿದ್ದರು. ಈ ಪಂದ್ಯದಲ್ಲಿ ರೋಹಿತ್ ಮತ್ತು ಶಿಖರ್ ಧವನ್ ಆರಂಭಿಕರಾಗಿ ಬ್ಯಾಟಿಂಗ್​ಗೆ ಬಂದಿದ್ದರು. ಧವನ್ 60 ರನ್ ಗಳಿಸಿ ಔಟಾದರು. ಬಳಿಕ ಬಂದ ಆಟಗಾರರಾದ ವಿರಾಟ್ ಕೊಹ್ಲಿ (0), ಸುರೇಶ್ ರೈನಾ (28) ಮತ್ತು ಯುವರಾಜ್ ಸಿಂಗ್ (12) ಬೇಗನೆ ಪೆವಿಲಿಯನ್ ಸೇರಿದ್ದರು. ಈ ವೇಳೆ ಭಾರತ 34ನೇ ಓವರ್‌ಗೆ 207ರನ್​ಗಳಿಸಿ ಪ್ರಮುಖ 4 ವಿಕೆಟ್​ಗಳನ್ನು ಕಳೆದುಕೊಂಡಿತ್ತು. ನಂತರ ಆರನೇ ಕ್ರಮಾಂಕದಲ್ಲಿ ಧೋನಿ ಬ್ಯಾಟಿಂಗ್‌ಗೆ ಬಂದಿದ್ಧರು.

ಈ ವೇಳೆ ರೋಹಿತ್​ಗೆ ನೀನು ನಿಧಾನವಾಗಿ ಆಡು ಮತ್ತು ಇನ್ನಿಂಗ್ಸ್ ಮುಗಿಯುವವರೆಗೂ ಕ್ರೀಸ್​ನಲ್ಲಿರು. ನಾನು ರಿಸ್ಕ್ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದರು. ಆದರೆ, ಹಿಟ್​ಮ್ಯಾನ್​ ಧೋನಿ ಅವರ ಈ ಸಲಹೆಯನ್ನು ಕಡೆಗಣಿಸಿದ್ದರು. ಅಲ್ಲದೇ ಆಸ್ಟ್ರೇಲಿಯಾ ಬೌಲರ್​ಗಳನ್ನು ಚೆಂಡಾಡಿದ್ದರು. ಈ ಬಗ್ಗೆ ಅಶ್ವಿನ್ ಜೊತೆಗೆ ಇನ್ಸ್ಟಾ ಲೈವ್ ಸೆಷನ್‌ನಲ್ಲಿ ರೋಹಿತ್ ಮಾಹಿತಿ ಹಂಚಿಕೊಂಡಿದ್ದರು. " ಆ ದಿನ ಪಂದ್ಯದ ವೇಳೆ ಧೋನಿ ನನ್ನಬಳಿ ಬಂದು ನೀವು ಸೆಟ್ ಬ್ಯಾಟ್ಸ್‌ಮನ್ ಆಗಿರಬೇಕು, ನೀವು 50ನೇ ಓವರ್‌ವರೆಗೆ ಬ್ಯಾಟ್ ಮಾಡಬೇಕು. ನಾನು ರಿಸ್ಕ್ ತೆಗೆದುಕೊಳ್ಳುತ್ತೇನೆ." ಎಂದು ಹೇಳಿದ್ದರು. ಆದರೆ ಈ ಮಾತುಗಳನ್ನು ನಾನು ತಿರಸ್ಕರಿಸಿದ್ದೆ.

ಈ ಪಂದ್ಯದಲ್ಲಿ ರೋಹಿತ್ 158 ಎಸೆತಗಳಲ್ಲಿ 209ರನ್ ಗಳಿಸಿದ್ದರು. ಇದರಲ್ಲಿ 12 ಬೌಂಡರಿ ಹಾಗೂ 16 ಸಿಕ್ಸರ್‌ಗಳು ಸೇರಿದ್ದವು. ಮತ್ತೊಂದೆಡೆ, ಧೋನಿ 38 ಎಸೆತಗಳಲ್ಲಿ 62 ರನ್ ಗಳಿಸಿದ್ದರು. ಈ ಇಬ್ಬರ ಬ್ಯಾಟಿಂಗ್​ ನೆರವಿನಿಂದ ಭಾರತ 383 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಅಲ್ಲದೇ ಭಾರತ ಈ ಪಂದ್ಯವನ್ನು 57 ರನ್‌ಗಳಿಂದ ಗೆದ್ದು ಕೊಂಡಿತ್ತು.

ಇದನ್ನೂ ಓದಿ: ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬುಮ್ರಾ ಧರಿಸುವ ಶೂ ಯಾವ ಕಂಪನಿಯದ್ದು? ಬೆಲೆ ಎಷ್ಟು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.